ಸ್ವಚ್ಚ ಗ್ರಾಮ, ಘನ ತ್ಯಾಜ್ಯ ನಿರ್ವಹಣೆ, ಸ್ವಚ್ಚತಾ ಅಭಿಯಾನದಲ್ಲಿ ಯಶಸ್ವಿ

Advt_NewsUnder_1
Advt_NewsUnder_1
Advt_NewsUnder_1

Gana thyajya copyಲಾಲ,  ಧರ್ಮಸ್ಥಳ ಗ್ರಾಮ ಪಂಚಾಯತ್‌ಗೆ 4 ರಾಜ್ಯಗಳ ಉನ್ನತ ಅಧಿಕಾರಿಗಳ ತಂಡ ಅಧ್ಯಯನ ಭೇಟಿ

ಬೆಳ್ತಂಗಡಿ : ಸ್ವಚ್ಚ ಭಾರತ್ ಮಿಷನ್ ನಿಂದಲೂ ಹೆಮ್ಮೆಗೆ ಪಾತ್ರವಾಗುವ ರೀತಿಯಲ್ಲಿ ಗ್ರಾಮದ ಘನ ತ್ಯಾಜ್ಯವನ್ನು ಒಂದೆಡೆ ಸಂಗ್ರಹಿಸಿ ಗ್ರಾಮ ಮಟ್ಟದಲ್ಲೇ ಅದನ್ನು ನಿರ್ವಹಣೆಗೊಳಿಸಿ ಅತೀ ಸಣ್ಣ ತ್ಯಾಜ್ಯ ಸಂಸ್ಕರಣ ಘಟಕದ ಮೂಲಕ ಪಂಚಾಯತ್‌ಗೆ ಆದಾಯ ತರುವ ರೀತಿಯಲ್ಲಿ ಗೊಬ್ಬರ ಘಟಕವನ್ನು ಪ್ರಾರಂಭಿಸಿ ಮಾದರಿಯಾಗಿರುವ ಲಾಲ ಗ್ರಾಮ ಪಂಚಾಯತ್ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಜನಸಂಧಣಿ ಅಧಿಕವಾಗಿದ್ದರೂ ಸ್ವಚ್ಚತೆಯಲ್ಲಿ ಅಗ್ರಮಾನ್ಯ ಸ್ಥಾನಪಡೆದಿರುವ ಧರ್ಮಸ್ಥಳ ಗ್ರಾಮ ಪಂಚಾಯತ್‌ಗೆ ಆ. 22 ರಂದು ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳನ್ನೊಳಗೊಂಡ ಅಧಿಕಾರಿಗಳ ನಿಯೋಗ ಭೇಟಿ ಮಾಡಿ ವಿಶೇಷ ಅಧ್ಯಯನ ನಡೆಸಿತು.
ಈ ಎರಡೂ ಪಂಚಾಯತ್‌ನ ಅಭಿವೃದ್ದಿ ಮತ್ತು ಸಾಧನೆಯ ಹೆಜ್ಜೆಗಳನ್ನು ಅಧ್ಯಯನ ನಡೆಸಲು ಜಿ.ಪಂ. ಮೂಲಕ ಅಧ್ಯಯನಕ್ಕಾಗಿ ಈ ಎರಡು ಪಂಚಾಯತ್‌ಗಳನ್ನು ಆಯ್ಕೆ ಮಾಡಲಾಗಿತ್ತು.
ನಿಯೋಗದಲ್ಲಿ ಉತ್ತರಪ್ರದೇಶ, ಬಿಹಾರ್, ಜಾರ್ಖಂಡ್ ಮತ್ತು ಅಸ್ಸಾಂ ರಾಜ್ಯಗಳ ಉನ್ನತ ಮಟ್ಟದ ಅಧಿಕಾರಿಗಳ ತಂಡ ಬೇಟಿ ನೀಡಿತು.
ಗ್ರಾಮ ಪಂಚಾಯತ್‌ಗಳ ಕಾರ್ಯವೈಖರಿಯನ್ನು ಕಂಡು ಅಧ್ಯಯನ ನಡೆಸಿದ ತಂಡ ತಮ್ಮ ತಮ್ಮ ರಾಜ್ಯಗಳಲ್ಲಿ ಇದೇ ಮಾದರಿ ಅನುಷ್ಠಾನಿಸಲು ತೀರ್ಮಾನಿಸಿತು. ಕೇಂದ್ರ ಸರಕಾರದ ವಿಶ್ವಬ್ಯಾಂಕ್‌ನಲ್ಲಿ ಉನ್ನತ ಅಧಿಕಾರಿಯಾಗಿರುವ ಕನ್ನಡಿಗ ಅಧಿಕಾರಿ ಡಾ| ಕುಳ್ಳಪ್ಪ ಅವರ ಮಾರ್ಗದರ್ಶನದಲ್ಲಿ ಈ ೧೦ ಮಂದಿಯ ತಂಡ ಇಲ್ಲಿಗೆ ಆಗಮಿಸಿದ್ದು ಅದರಲ್ಲಿ ಐಎಎಸ್, ಐಎಫ್‌ಎಸ್ ಅಧಿಕಾರಿಗಳು, ಎಕ್ಸ್‌ಕ್ಟ್ಯೂಟಿವ್ ಇಂಜಿನಿಯರ್‌ಗಳು, ನೀರಾವರಿ ಇಲಾಖೆ ಅಧಿಕಾರಿಗಳು, ತಾಂತ್ರಿಕ ವಿಭಾಗದ ಅಧಿಕಾರಿಗಳು ಇದ್ದರು. ತಂಡಕ್ಕೆ ಜಾರ್ಖಂಡ್ ಸರಕಾದ ಸ್ಪೆಷಲ್ ಸೆಕ್ರೆಟರಿಯಾಗಿರುವ ಐಎಫ್‌ಎಸ್ ಅಧಿಕಾರಿ ಜಬ್ಬಾರ್ ಸಿಂಗ್ ಅವರು ನೇತೃತ್ವ ವಹಿಸಿದ್ದರು.
ತಂಡ ಭೇಟಿ ಮಾಡಿದ್ದು ಎಲ್ಲೆಲ್ಲಿಗೆ?
ಜಿಲ್ಲಾ ಪಂಚಾಯತ್ ಡಿ.ಎಸ್. ಉಮೇಶ್ ಅವರ ನೇತೃತ್ವದಲ್ಲಿ ಬಂದ ತಂಡ ನೇರವಾಗಿ ತ್ಯಾಜ್ಯ ನಿರ್ವಹಣೆ ಮತ್ತು ಗೊಬ್ಬರ ಘಟಕಕ್ಕೆ ಭೇಟಿ ನೀಡಿತು. ಅಲ್ಲಿಂದ ರಾಘವೇಂದ್ರ ನಗರ ಕಾಲನಿ ವೀಕ್ಷಿಸಿ ಕಾಲನಿಯಲ್ಲಿ ಸ್ವಚ್ಚತೆ ಮತ್ತು ವೈಯುಕ್ತಿಕ ಮೀಟರ್ ಅಳವಡಿಕೆಯ ಮೂಲಕ ನಳ್ಳಿ ನೀರಿನ ಸಂಪರ್ಕ ಮತ್ತು ನಿರ್ವಹಣೆ, ವೈಯುಕ್ತಿಕ ಶೌಚಾಲಯ ನಿರ್ವಹಣೆ, ಪೈಪ್ ಕಂಪೋಸ್ಟ್ ಅಳವಡಿಸಿಕೊಂಡು ನೈರ್ಮಲ್ಯ ಅಳವಡಿಕೆ, ಶಾಲೆಯಲ್ಲಿ ಹೆಣ್ಣು ಮಕ್ಕಳ ಶೌಚಾಲಯದಲ್ಲಿ ಸ್ಯಾನಿಟರಿ ನ್ಯಾಫ್ಕಿನ್ ಡಿಡ್ಟ್ರೋಯ್ಡ್ ಮೆಷಿನ್ ಮೂಲಕ ನಿರ್ವಹಣೆಯ ವ್ಯವಸ್ಥೆ ಇವುಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಉಪಸ್ಥಿತಿ ಯಾರ‍್ಯಾರು?
ಜಿ.ಪಂ. ಉಪಕಾರ್ಯದರ್ಶಿ ಉಮೇಶ್ ಎನ್.ಆರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿ.ಆರ್. ನರೇಂದ್ರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ಗ್ರಾ.ಪಂ. ಅಧ್ಯಕ್ಷೆ ವೀಣಾ ರಾವ್, ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ಸದಸ್ಯರಾದ ಕೃಷ್ಣಪ್ಪ ಪೂಜಾರಿ, ರುಕ್ಮಯ್ಯ ಕನ್ನಾಜೆ, ಬೇಬಿ, ಲತಾ, ಜಯಶ್ರೀ, ಜಯಲಕ್ಷ್ಮೀ, ದಿನೇಶ್ ಶೆಟ್ಟಿ, ಮೋಹನ್‌ದಾಸ್ ಭೈರ, ರೇವತಿ, ವಸಂತಿ, ಮಹೇಶ್ ಇವರು ಈ ಸಂದರ್ಭ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.