ಮನೆಯೊಳಗಿನ ಧೂಳಿಂದಲೂ ಬರುತ್ತೆ ಕ್ಯಾನ್ಸರ್

  ನಿಮ್ಮ ಮನೆಯೊಳಗೆ ಸೋಫಾ ಟೇಬಲ್, ಕಿಟಕಿ, ಬಾಗಿಲ ಸಂದಿಯಲ್ಲಿ ಕೂರುವ ಧೂಳಿನಿಂದಲೂ ಕ್ಯಾನ್ಸರ್ ತರಿಸಬಹುದು ಹುಷಾರ್ ! ಇಂತಹದೊಂದು ಆತಂಕಕಾರಿ ಮಾಹಿತಿ ನ್ಯಾಷನಲ್ ರೀಸರ್ಚ್ ಕೌನ್ಸಿಲ್ (ಎನ್‌ಆರ್‌ಟಿ) ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದ್ದು, ಹೊರಗಿನ ಮಾಲಿನ್ಯಕ್ಕಿಂತ ಮನೆಯೊಳಗಿನ ವಿಷಕಾರಿ ವಾಯುಮಾಲಿನ್ಯ ಜನರ  ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅಧ್ಯಯನ ವರದಿ ತಿಳಿಸಿದೆ. ಹೊರಗಿನ ವಾಯು ಮಾಲಿನ್ಯವನ್ನೇ ನಾವು ದೃಷ್ಟಿಯಲ್ಲಿಟ್ಟುಕೊಂಡು ಅನಾರೋಗ್ಯದ ಪರಿಣಾಮಗಳನ್ನು ಲೆಕ್ಕ ಹಾಕುತ್ತೇವೆ. ಆದರೆ, ಮನೆಯೊಳಗಿನ ವಾಯುಮಾಲಿನ್ಯ ಮಕ್ಕಳು, ವೃದ್ಧರು ಸೇರಿ ಎಲ್ಲರ ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತಿದೆ. ಅಲ್ಲದೆ ಅಗರಬತ್ತಿ ಮತ್ತು ಧೂಪದಲ್ಲಿ ನಿಗದಿತ ಪ್ರಮಾಣಕ್ಕಿಂತ ಶೇ.೧೫ಹಾನಿಕಾರಕ ರಾಸಾಯನಿಕಗಳನ್ನು ಸೇರಿಸಲಾಗಿರುತ್ತದೆ. ಇವುಗಳಿಂದ ಹೊರಸೂಸುವ ಹೊಗೆಯಲ್ಲೂ ಮಾರಕವಾದ ಕಣಗಳು ಇರುತ್ತವೆ ಎನ್ನುತ್ತಾರೆ ಅಧ್ಯಯನಕಾರರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.