ಉಜಿರೆ: ಸಂಗ್ರಹಿತ ರಕ್ತದಲ್ಲಿರುವ ಅಂಶಗಳನ್ನು ಬೇರ್ಪಡಿಸಿ ವಿವಿಧ ಚಿಕಿತ್ಸೆಗಳಿಗೆ ಉಪಯೋಗಿಸ ಬಹುದಾದ ತಂತ್ರಜ್ಞಾನವು ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ ಎಂದು ಉಜಿರೆ ಎಸ್ಡಿಎಂ ಆಸ್ಪತ್ರೆ ಅಧೀಕ್ಷಕ ಡಾ.ಪ್ರಭಾಶ್ ಹೇಳಿದರು.
ಅವರು ಉಜಿರೆ ಎಸ್ಡಿಎಮ್ ಸ್ವಾಯತ್ತ ಕಾಲೇಜಿನ ಎನ್ಎಸ್ಎಸ್ ಘಟಕಗಳು, ಬೆಳ್ತಂಗಡಿ ರೋಟರಿ ಕ್ಲಬ್, ಉಜಿರೆ ಜೆಸಿಐ, ಎಸ್ಡಿಎಂ ಪದವಿ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿತವಾದ ರಕ್ತದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಜಿರೆ ಎಸ್ಡಿಎಂ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಸ್ ಮೋಹನ್ನಾರಾಯಣ ಮಾತನಾಡಿ ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಡಿ.ಎಂ ಗೌಡ, ಉಜಿರೆ ಜೆಸಿಐ ಅಧ್ಯಕ್ಷ ಮಹೇಶ್ ಕುಮಾರ್ ಶೆಟ್ಟಿ, ಎಸ್ಡಿಎಂ ಆಸ್ಪತ್ರೆಯ ಎಸ್.ಕೆ. ಭಟ್, ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ನ ವಸಂತಿ ಎಂ.ಕೆ. ಕಾಲೇಜಿನ ಎನ್ಎಸ್ಎಸ್ ಘಟಕದ ಯೋಜನಾಧಿಕಾರಿ ಪ್ರೊ. ಶಕುಂತಲಾ ಮತ್ತು ಪ್ರೊ.ಗಣೇಶ್ ವಿ. ಶಿಂಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸ್ವಯಂ ಸೇವಕ ಪ್ರತೀಕ್ ಸ್ವಾಗತಿಸಿದರು. ಉಮಾ ವಂದಿಸಿದರು. ಅಕ್ಷತಾ ನಿರೂಪಿಸಿದರು.