ಕಥೋಲಿಕ್ ಸಭಾ ಮಂಗಳೂರು ಪ್ರದೇಶ್(ರಿ.): ಕೇಂದ್ರೀಯ ಕಾರ್ಯಕಾರಿ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ವಾಲ್ಟರ್ ಮೋನಿಸ್

Advt_NewsUnder_1
Advt_NewsUnder_1
Advt_NewsUnder_1

Valtar monise copyಬೆಳ್ತಂಗಡಿ : ವಿದ್ಯಾರ್ಥಿ ದೆಸೆಯಿಂದಲೇ ಸಂಘಟನಾತ್ಮಕ ಗುಣದೊಂದಿಗೆ ಗುರುತಿಸಿಕೊಂಡು ಸ್ಟಾರ್ ಯುವಕ ಮಂಡಲ ಪಣೆಜಾಲು ಇದರ ಸ್ಥಾಪಕ ಸದಸ್ಯರಾಗುವ ಮೂಲಕ ಸಂಘಟನಾ ಕ್ಷೇತ್ರಕ್ಕೆ ದುಮುಕಿದ ಬೆಳ್ತಂಗಡಿ ತಾಲೂಕಿನ ಗುಂಪಲಾಜೆ ನಿವಾಸಿ ವಾಲ್ಟರ್ ಮೋನಿಸ್ ಅವರು ಇದೀಗ ಕಥೋಲಿಕ್ ಸಭಾ ಮಂಗಳೂರು ಪ್ರದೇಶ್(ರಿ.) ಕೇಂದ್ರೀಯ ಕಾರ್ಯಕಾರಿ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ದಿ. ಜೆರೋಮ್ ಮೋನಿಸ್ ಮತ್ತು ದಿ ಸಿಂಪ್ರೋಝ್ ಡಿಸೋಜಾ ದಂಪತಿ ಪುತ್ರರಾಗಿರುವ ವಾಲ್ಟರ್ ಮೋನಿಸ್ ಅವರು ಬಿಕಾಂ ಪದವಿಧರರಾಗಿದ್ದು ಕೃಷಿಕರಾಗಿದ್ದರೂ ಸಾಮಾಜಿಕವಾಗಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.
ಸಮುದಾಯದ ಸಂಘಟನೆಯಲ್ಲಿ ವಾಳೆಯ ಪ್ರತಿನಿಧಿಯಾಗಿ 2 ಅವದಿ, ಕ್ರಿಸ್ತರಾಜ ವಾಳೆಯ ಗುರಿಕಾರರಾಗಿ, ಎಸ್.ಎಫ್.ಒ. ಬೆಳ್ತಂಗಡಿ ಇದರ ಪ್ರಾಂತೀಯ ಅಧ್ಯಕ್ಷರಾಗಿ, ಕಥೋಲಿಕ್ ಸಭಾ ಸಹಕಾರ್ಯದರ್ಶಿಯಾಗಿ ಹಾಗೂ ವಲಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಇದೀಗ ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.