ಕರಿಮಣೇಲು: ಪತಿ ಹರೀಶ್ ನಾಯ್ಕ ಹತ್ಯೆ ಪ್ರಕರಣ-ಪತ್ನಿ ಪ್ರಶಾಂತಿಗೆ ಜೀವಾವಧಿ ಶಿಕ್ಷೆ

Advt_NewsUnder_1
Advt_NewsUnder_1
Advt_NewsUnder_1

prashanthini copy

ಪ್ರಶಾಂತಿನಿ

harish naika copy

ಹರೀಶ್ ನಾಯ್ಕ್

 ವೇಣೂರು: ಪತಿ-ಪತ್ನಿಯ ವಿರಸ ತಾರಕಕ್ಕೇರಿ ಪತಿಯನ್ನು ನೈಲಾನ್ ಹಗ್ಗದಿಂದ ಕುತ್ತಿಗೆಗೆ ಬಿಗಿದು ಹತೈಗೈದ ಆರೋಪಿ ಪತ್ನಿಗೆ ಮಂಗಳೂರು ದ.ಕ. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪಿತ್ತಿದೆ.
ವೇಣೂರು ಕರಿಮಣೇಲು ನಿವಾಸಿ ಪ್ರಶಾಂತಿನಿ (23) ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿ. ಈಕೆ ಪತಿ ಹರೀಶ್ ನಾಯ್ಕ್ (44ವ.) ಅವರನ್ನು ಹತೈಗೆದಿದ್ದ ಆರೋಪ ಎದುರಿಸುತ್ತಿದ್ದರು.
ಪ್ರಕರಣದ ಸಾರಾಂಶ: ಹರೀಶ್ ನಾಯ್ಕ್ ಭಿನ್ನ ಜಾತಿಯ ಕಾರ್ಕಳ ನಲ್ಲೂರು ಗ್ರಾಮದ ಕುದಾಲೊಟ್ಟು ಬೈಲುವಿನ ಪ್ರಶಾಂತಿಯನ್ನು ಪ್ರೇಮಿಸಿ ೨೦೧೨ ಜ.೩ರಂದು ಕರಿಮಣೇಲು ದೇಲಂಪುರಿ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಬಳಿಕ ಕರಿಮಣೇಲು ಪುಂಜಾಲಬೈಲು ಹೊಸವಕ್ಲುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿ ಸುಖೀ ಜೀವನ ನಡೆಸುತ್ತಿದ್ದರು. ಇದರ ಫಲವಾಗಿ ಹೆಣ್ಣು ಮಗು ಜನನವಾಗಿತ್ತು. ಬರಬರುತ್ತಾ ದಾಂಪತ್ಯದಲ್ಲಿ ವಿರಸ ಉಂಟಾಗಿ ಹರೀಶ್ ನಾಯ್ಕ್ ಮದ್ಯ ಕುಡಿಯುವ ಚಟ ಬೆಳೆಸಿಕೊಂಡಿದ್ದರು ಎನ್ನಲಾಗಿದೆ. ಈಗಾಗಿ ಪ್ರತೀ ನಿತ್ಯ ಮನೆಯಲ್ಲಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದರು.2014ರ ಜೂ. 20ರಂದು ಅಪರಾಹ್ನ 3 ಗಂಟೆಯ ಸುಮಾರಿಗೆ ಹರೀಶ್ ನಾಯ್ಕ್ ಪತ್ನಿ ಪ್ರಶಾಂತಿಯೊಂದಿಗೆ ಎಂದಿನಂತೆ ಜಗಳ ಕಾಯ್ದ ಸಂದರ್ಭ ಪ್ರಶಾಂತಿ ಪತಿ ಕುತ್ತಿಗೆಗೆ ನೈಲಾನ್ ಹಗ್ಗದಿಂದ ಬಿಗಿದಿದ್ದು, ಈ ವೇಳೆ ಹರೀಶ್ ನಾಯ್ಕ ಉಸಿರುಗಟ್ಟಿ ಸಾವನ್ನಪ್ಪಿದ್ದರು.
ಪ್ರಕರಣ ದಾಖಲು: ವೇಣೂರು ಪೊಲೀಸ್ ಠಾಣೆಯ ಅಂದಿನ ಎಸ್‌ಐ ಆಗಿದ್ದ ಅಬ್ದುಲ್ ಖಾದರ್ ಅವರು ಕೇಸು ದಾಖಲಿಸಿಕೊಂಡು ತನಿಖೆ ನಡೆಸಿದಾಗ ಪ್ರಕರಣದ ರಹಸ್ಯ ಬಯಲಾಗಿತ್ತು. ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಂತೆ ಒಟ್ಟು ೧೭ ಮಂದಿ ಸಾಕ್ಷಿದಾರರನ್ನು ಪ್ರಾಸಿಕ್ರೂಶನ್ ವಿಚಾರಣೆ ನಡೆಸಿ ಅಂತಿಮವಾಗಿ ಜೀವಾವಧಿ ಶಿಕ್ಷೆಯ ತೀರ್ಪು ಪ್ರಕಟಿಸಿದೆ.ಜೀವಾವಧಿ ಶಿಕ್ಷೆ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಸ್. ಬಿಳಗಿ ಪ್ರಾಸಿಕ್ಯೂಶನ್‌ನ ವಾದವನ್ನು ಆಲಿಸಿ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ರೂ. 1 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 1 ವರ್ಷ ಕಾರಾಗಾರ ಶಿಕ್ಷೆಯನ್ನು ಅನುಭವಿಸುವಂತೆ ತೀರ್ಪಿನಲ್ಲಿ ಆದೇಶಿಸಲಾಗಿದೆ. ದಂಪತಿಯ ಮಗುವಿಗೆ ಈಗ ಮೂರುವರೆ ವರ್ಷ ವಯಸ್ಸಾಗಿದ್ದು, ದಂಡ ಮೊತ್ತದಲ್ಲಿ 98,000 ರೂ.ಯನ್ನು ಆ ಮಗುವಿಗೆ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ. ದಂಡ ಸಂಹಿತೆ ಕಲಂ 357 (ಎ) ಅಡಿಯಲ್ಲಿ ಸಂತ್ರಸ್ತರ ಪರಿಹಾರ ನಿಧಿಯಿಂದ ಪರಿಹಾರ ಪಡೆದುಕೊಳ್ಳಲು ಈ ದಂಪತಿ ಪುತ್ರಿ ಅರ್ಹಳು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.