ಆಳ ಸಮುದ್ರದಲ್ಲಿ ವಿಮಾನದ ಅವಶೇಷಗಳು ಪತ್ತೆ : ಸೇನಾ ವಿಮಾನ ನಾಪತ್ತೆ ಘಟನೆ ನಡೆದು 33 ದಿನಗಳು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ekanath shetty copy

SAMUDRA RATNAKAR

ನಾಪತ್ತೆಯಾದ ಸೇನಾ ವಿಮಾನವೇ?
ಅಥವಾ ಬೇರೆ ವಿಮಾನವೇ ಎಂಬ ಶಂಕೆ

ವಿಮಾನ ಪತ್ತೆಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಮುದ್ರ ರತ್ನಾಕರ ನೌಕೆ

ಗುರುವಾಯನಕೆರೆ : ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಯೋಧ ಏಕನಾಥ ಶೆಟ್ಟಿ ಅವರೂ ಒಳಗೊಂಡಂತೆ 26 ಮಂದಿ ಸೈನಿಕರನ್ನು ಹೊತ್ತೊಯ್ದು ನಿಗೂಢವಾಗಿ ನಾಪತ್ತೆಯಾಗಿರುವ ಸೇನಾ ವಿಮಾನ ಎಎನ್- 32 ಇದರ ಹುಡುಕಾಟ ಪ್ರಕ್ರೀಯೆ ಇನ್ನೂ ಮುಂದುವರಿದಿದ್ದು ಇದೀಗ ಕಾರ್ಯಾಚರಣೆ ತಂಡಕ್ಕೆ ವಿಮಾನವೊಂದರ ಅವಶೇಷಗಳು ಪತ್ತೆಯಾಗಿದೆ ಎಂಬ ಮಹತ್ವದ ಮಾಹಿತಿ ಲಭಿಸಿದೆ.
ಸೇನಾ ವಿಮಾನದ್ದೆಂಬ ಶಂಕೆ ಇರುವ ಸುಮಾರು 75 ತುಣುಕುಗಳ ಚೆನ್ನೈನಿಂದ ೨೦೦ ನಾಟಿಕಲ್ ಮೈಲಿ ಅಂದರೆ 370 ಕಿ. ಮೀಟರ್ ದೂರದಲ್ಲಿ ಪತ್ತೆಯಾಗಿವೆ ಎಂಬುದಾಗಿ ಹೇಳಲಾಗಿದೆ. ಸಮುದ್ರ ರತ್ನಾಕರ ಎಂಬ ಅತ್ಯಾಧುನಿಕ ಸೋನಾರ್ ಉಪಕರಣ ಹೊಂದಿರುವ ನೌಕೆ ಆ. ೨೨ ರ ಮಧ್ಯಾಹ್ನದ ವೇಳೆ ಸಮುದ್ರದ ಸುಮಾರು 3,500 ಮೀಟರ್ ಆಳದಲ್ಲಿ ವಿಮಾನದ ಅವಶೇಷಗಳಂತಿರುವ ಕೆಲವು ವಸ್ತುಗಳನ್ನು ಪತ್ತೆ ಮಾಡಿವೆ ಎಂದು ಭೂ ವೈಜ್ಞಾನಿಕ ಸಮೀಕ್ಷೆ ಇಲಾಖೆ ತಿಳಿಸಿದೆ.
ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಷ್ಟೊಂದು ದೀರ್ಘವಾದ ಪತ್ತೆಕಾರ್ಯಾಚರಣೆ ಇದಾಗಿದೆ ಎಂದು ಕೇಂದ್ರ ಸರಕಾರ ಘೋಷಿಸಿರುವ ಈ ಶೋಧ ಕಾರ್ಯದಲ್ಲಿ ಅಮೇರಿಕನ್ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ.17 ನೌಕೆಗಳು, ೨೩ ವಿಮಾನಗಳು, ಒಂದು ಜಲಂತರ್ಗಾಮಿ ನೌಕೆ ಕಳೆದ ಜೂ 22 ರಿಂದಲೇ ವಿಮಾನದ ಹುಡುಕಾಟ ಕಾರ್ಯದಲ್ಲಿ ನಿರತವಾಗಿವೆ.
ಅದರ ಜೊತೆಗೆ ನೌಕಾ ದಳದ ಸಾಗರ್ ನಿಧಿ ಎಂಬ ಇನೊಂದು ನೌಕೆಯೂ ಶೋಧನಿರತವಾಗಿದ್ದು, ರಾಡಾರ್ ನೆರವಿನಿಂದ ಹುಟುಕಾಟ ನಡೆಸುತ್ತಿದೆ. 150 ಮೀಟರ್ ಸಮುದ್ರದಾಳದ ವಸ್ತುಗಳನ್ನು ಗುರುತಿಸುವ ಘನ ಸಾಮರ್ಥ್ಯ ಹೊಂದಿರುವ ಸಮುದ್ರ ರತ್ನಾಕರ ಎಂಬ ಅತ್ಯಾಧುನಿಕ ಸೋನಾರ್ ಉಪಕರಣ ಹೊಂದಿರುವ ನೌಕೆ ಕೂಡ ತಂಡದಲ್ಲಿದೆ.
ವಿಮಾನ ನಾಪತ್ತೆಯಾಗಿರುವ ಬಳಿಕ ಇದೇ ಮೊದಲ ಬಾರಿಗೆ ಪತ್ತೆ ತಂಡಕ್ಕೆ ಶುಭ ಸಂದೇಶವೊಂದು ಲಭಿಸಿದ್ದು ಇದು ತಿಂಗಳುಗಳ ಹಿಂದೆ ತೈವಾನ್‌ನಿಂದ ನಾಪತ್ತೆಯಾಗಿರುವ ವಿಮಾನದ ಅವಶೇಷಗಳೂ ಇರಬಹುದೆಂದೂ ಶಂಕಿಸಲಾಗಿದೆ.
ಏಕನಾಥ ಶೆಟ್ಟಿ ಮನೆಯಲ್ಲಿ ಇನ್ನೂ ನೀರವ ಮೌನ: ಇತ್ತ ಘಟನೆ ನಡೆದು ೩೩ ದಿನಗಳು
ಕಳೆದಿದ್ದು ಏಕನಾಥ ಶೆಟ್ಟಿಯವರ ಮನೆಯಲ್ಲಿ ನೀರವ ಮೌನವೇ ಆವರಿಸಿದೆ. ದಿನಕ್ಕೆ ಎರಡು ಬಾರಿಯಂತೆ ಅವರ ಮನೆಗೆ ಸೇನಾಧಿಕಾರಿಗಳಿಂದ ಅಧಿಕೃತ ಸಂದೇಶ ಬರುತ್ತಿದೆ. ಇತ್ತ ತಮ್ಮವರ ಬರುವಿಕೆಗಾಗಿ ಕಾಯುತ್ತಾ ಕುಳಿತಿದ್ದ ಮನೆಯವರ ಪಾಲಿಗೆ ತಮ್ಮವರು ಮರಳಿ ಬರುವ ಬಗ್ಗೆ ಇದ್ದ ಅವಕಾಶಗಳು ಮತ್ತು ಭರವಸೆ ಸಂಪೂರ್ಣ ಕ್ಷೀಣಿಸಿದೆ. ದುಃಖಿಸುವ ಕಣ್ಣುಗಳಲ್ಲಿ ಕಣ್ಣೀರು ಬತ್ತಿ ಹೋಗಿದ್ದು ಸಮಾಧಾನ ಹೇಳುವವರ ಪಾಲಿಗೆ ಶಬ್ದಗಳೇ ಇಲ್ಲದಂತಾಗಿದೆ.
ಮತ್ತೆ ಗಣೇಶ್ ಕಾರ್ಣಿಕ್ ಮನೆಗೆ ಭೇಟಿ :
ಏಕನಾಥ ಶೆಟ್ಟಿ ಅವರ ಮನೆಗೆ ಈ ಹಿಂದೆ ಎರಡು ಬಾರಿ ಭೇಟಿ ನೀಡಿ ಸಾಂತ್ವನ ಮತ್ತು ದೈರ್ಯ ತುಂಬಿದ್ದ ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕರೂ ಮಾಜಿ ಸೈನಿಕರೂ ಆಗಿರುವ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಆ. 23 ರಂದು ಮೂರನೇ ಬಾರಿಗೆ ಭೇಟಿ ನೀಡಿ ಮನೆಯವರಲ್ಲಿ ಮಾತನಾಡಿದ್ದಾರೆ. ಈ ಸಂದರ್ಭ ಅವರ ಜೊತೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಕಾಂಚೋಡು ಮತ್ತು ಮಾಜಿ ಅಧ್ಯಕ್ಷ ಸುನಿಲ್ ಶೆಣೈ ಉಪಸ್ಥಿತರಿದ್ದರು.
ಸೇನೆಯಿಂದ ಅಧಿಕೃತ ಘೋಷಣೆ ಯಾವ ರೀತಿ?
ನಾಪತ್ತೆಯಾಗಿರುವ ವಿಮಾನದ ಹುಟುಕಾಟ ಮುಂದುವರಿಸುತ್ತಾ ಕೊನೆಗೊಂದು ಬಾರಿ ಯಾವುದಾದರೊಂದು ಅಧಿಕೃತ ಘೋಷಣೆಯಾಗಬೇ ಕೆಂದಿದ್ದರೆ ಸೇನಾ ನ್ಯಾಯಾಲಯದಿಂದ ತೀರ್ಪು ಹೊರಬರಬೇಕಿದೆ ಎಂಬ ಮಾಹಿತಿ ಇದ್ದು ಆ ಪ್ರಕ್ರೀಯೆವರೆಗೆ ರಕ್ಷಣಾ ಇಲಾಖೆ ಮುಂದುವರಿದಿಲ್ಲ ಎನ್ನಲಾಗಿದೆ. ಇತ್ತ ಏಕನಾಥ ಶೆಟ್ಟಿ ಅವರ ಪತ್ನಿ ಜಯಂತಿ ಅವರು ಘಟನೆಯ ದಿನದಿಂದ ಮನೆಬಿಟ್ಟು ಹೊರಗೆ ಬಂದಿರಲಿಲ್ಲ. ಆದರೆ ಆ. ೧೫ ರಂದು ಸಹೋದರ ಸತೀಶ್ ಶೆಟ್ಟಿ, ಪುತ್ರಿ ಆಶಿತಾ ಅವರ ಜೊತೆಗೂಡಿ ಉಜಿರೆಗೆ ಹೋಗಿ ತಾನು ಕೆಲಸ ಮಾಡುತ್ತಿರುವ ಎಸ್‌ಡಿಎಂ ಪ್ರೌಢ ಶಾಲೆಗೆ ಭೇಟಿ ನೀಡಿ ಸಹೋದ್ಯೋಗಿಗಳ ಜೊತೆ ಮಾತುಕತೆ ನಡೆಸಿ ಬಂದಿದ್ದಾರೆ. ಬಳಿಕ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ ಯಶೋವರ್ಮ ಅವರನ್ನೂ ಭೇಟಿ ಮಾಡಿದ್ದಲ್ಲದೆ, ಪ್ರಾರಂಭದಿಂದಲೂ ತಮಗೆ ಭರವಸೆ ಮೂಡಿಸಿರುವ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಾಂಚೋಡು ಗೋಪಾಲಕೃಷ್ಣ ಭಟ್ ಅವರ ಮನೆಗೂ ಭೇಟಿ ನೀಡಿ ಮಾತುಕತೆ ನಡೆಸಿ ಮರಳಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.