ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ವಸತಿಗೃಹ ಆನ್‌ಲೈನ್ ರೂಂ ಬುಕ್ಕಿಂಗ್

  ಧರ್ಮಸ್ಥಳ: ಆ.21ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಾ| ಡಿ ವೀರೇಂದ್ರ ಹೆಗ್ಗಡೆಯವರು ಆನ್‌ಲೈನ್ ಬುಕ್ಕಿಂಗ್ ಸೌಲಭ್ಯಕ್ಕೆ ಚಾಲನೆ ನೀಡಿದರು.
ಶ್ರೀ ಕ್ಷೇತ್ರದ ಅಧಿಕೃತ ವೆಬ್‌ಪೇಜ್‌ನಲ್ಲಿ ಈ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯು ಭಕ್ತರ ಅನುಕೂಲಕ್ಕಾಗಿ ಮಾಡಿದ್ದು, ಸದ್ಯಕ್ಕೆ ರೂಮ್ ಬುಕ್ಕಿಂಗ್‌ನ ವ್ಯವಸ್ಥೆ ಇದ್ದು ಮುಂದಿನ ದಿನಗಳಲ್ಲಿ ರೂಮ್ ಬುಕ್ಕಿಂಗ್ ಹಣ ಪಾವತಿಗೂ ಸೌಲಭ್ಯವನ್ನು ಸದ್ಬಳಕೆ ಕಲ್ಪಿಸಲಾಗುವುದು ಹಾಗೂ ಪ್ರಸ್ತುತ ಧರ್ಮಸ್ಥಳದಲ್ಲಿರುವ ರಜತಾದ್ರಿ ವಸತಿಗೃಹದ ೧೧೦ ಕೊಠಡಿಗಳು ಆನ್‌ಲೈನ್ ಬುಕ್ಕಿಂಗ್ ಸೌಲಭ್ಯದಡಿ ಭಕ್ತರಿಗೆ ಲಭಿಸಲಿವೆ.
ಬುಕ್ಕಿಂಗ್ ಮಾಡುವ ವಿಧಾನ : ಶ್ರೀ ಕ್ಷೇತ್ರ ಧರ್ಮಸ್ಥಳ ವೆಬ್‌ಪೇಜ್ http://www.shridharmasthala.orgಗೆ ಲಾಗಿನ್ ಆಗಿ ರೂಮ್ ಬುಕ್ಕಿಂಗ್ ಮಾಡಲು ಸಿದ್ದಪಡಿಸಿರುವ ಲಿಂಕ್ ಮೂಲಕ ಬುಕ್ ಮಾಡಬಹುದು. ಸೂಕ್ತ ವಿವರಗಳನ್ನು ತುಂಬಿದ ನಂತರ ಬುಕ್ಕಿಂಗ್ ಕುರಿತಾದ ದೃಢೀಕರಣ ಪತ್ರ ಈ ಮೈಲ್ ಮೂಲಕ ಬುಕ್ ಮಾಡಿದವರಿಗೆ ತಲುಪುತ್ತದೆ. ಅನಂತರ ಈ ಪತ್ರದ ಪ್ರತಿಯನ್ನು ಶ್ರೀ ಕ್ಷೇತ್ರಕ್ಕೆ ಬಂದು ವಸತಿಗೃಹದಲ್ಲಿ ತೋರಿಸಿ ಕೊಠಡಿ ಪಡೆಯಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.