ಕೋಳಿ ಅಂಕಕ್ಕೆ ದಾಳಿ: ನಾಲ್ವರ ಬಂಧನ, 4 ಕೋಳಿ 1740 ರೂ ನಗದು ವಶ

ಪುದುವೆಟ್ಟು: ಆ. 21 ರಂದು ಸಂಜೆ ಬೆಳ್ತಂಗಡಿ ತಾಲೂಕು ಪುದುಬೆಟ್ಟು ಗ್ರಾಮದ ಕೂಟೇಲು ಎಂಬಲ್ಲಿ ಅಕ್ರಮವಾಗಿ ಕೋಳಿ ಅಂಕದಲ್ಲಿ ನಿರತರಾಗಿದ್ದವರನ್ನು ಪೊಲೀಸರು ಬಂದಿಸಿ ಕ್ರಮ ಕೈಗೊಂಡಿದ್ದಾರೆ. ದಾಳಿಯ ವೇಳೆ ಸ್ಥಳದಲ್ಲಿ ಅಕ್ರಮದಲ್ಲಿ ನಿರತರಾಗಿದ್ದ ಚಿನ್ನಪ್ಪ ಗೌಡ, ಸಣ್ಣಿ ಗೌಡ, ವಾಸು ಗೌಡ, ದೇಜಪ್ಪ ಗೌಡ ಎಂಬವರನ್ನು ದಸ್ತಗಿರಿ ಮಾಡಲಾಗಿದೆ. ಬಂಧಿತರಿಂದ 4 ಹುಂಜ ಕೋಳಿಗಳನ್ನು ಹಾಗೂ ಜೂಜಿಗೆ ಉಪಯೋಗಿಸಿದ. 1740ರೂ.ಗಳನ್ನು ಸ್ವಾಧೀನಪಡಿಸಿಕೊಂಡು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.