HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

4 ಗ್ರಾ.ಪಂ.ಗಳ 4 ಸ್ಥಾನಗಳಿಗೆ ಉಪಚುನಾವಣೆ : ಆ.28

ಆ.28 : ಮತದಾನ  ಆ.31 : ಮತ ಎಣಿಕೆ

    ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ 4 ಗ್ರಾಮ ಪಂಚಾಯತುಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ 4 ಸ್ಥಾನಗಳ ಉಪಚುನಾವಣೆ ಆ.28ರಂದು ಆಯಾ ಗ್ರಾಮ ಪಂಚಾಯತದಲ್ಲಿ ನಡೆಯಲಿದೆ.
ನಡ ಗ್ರಾಮ ಪಂಚಾಯತದ ಅಧ್ಯಕ್ಷರಾಗಿದ್ದ ಶ್ರೀಮತಿ ಜಯಂತಿ, ಧರ್ಮಸ್ಥಳ ಗ್ರಾಮ ಪಂಚಾಯತದ ಅಧ್ಯಕ್ಷರಾಗಿದ್ದ ಅಚ್ಚುತ ಪೂಜಾರಿ, ಶಿಬಾಜೆ ಗ್ರಾಮ ಪಂಚಾಯತದಲ್ಲಿ ಉಪಾಧ್ಯಕ್ಷರಾಗಿದ್ದ ಆನಂದ ಗೌಡ ಮತ್ತು ಉಜಿರೆ ಗ್ರಾಮ ಪಂಚಾಯತದಲ್ಲಿ ಹಿರಿಯ ಸದಸ್ಯರಾಗಿದ್ದ ಕೂಸಪ್ಪ ಗೌಡ ಇವರೆಲ್ಲರೂ ಅಕಾಲಿಕವಾಗಿ ನಿಧನರಾ ಗಿದ್ದರಿಂದ ತೆರವಾದ ಈ ಸದಸ್ಯ ಸ್ಥಾನಗಳಿಗೆ ಈಗ ಚುನಾವಣೆ ನಡೆಯಲಿದೆ.
ದ.ಕ ಜಿಲ್ಲಾಧಿಕಾರಿಗಳು ಈಗಾಗಲೇ ಅಧಿಸೂಚನೆಯನ್ನು ಹೊರಡಿಸಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ಆ.16 ರಿಂದ ಆರಂಭಗೊಂಡಿದೆ. ನಾಮಪತ್ರಗಳನ್ನು ಸಲ್ಲಿಸಲು ಆ.19 ಕೊನೆಯ ದಿನವಾಗಿದೆ. ಆ.20 ನಾಮಪತ್ರಗಳ ಪರಿಶೀಲನೆ, ಆ.22 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಆ.28ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, ಆ.31ರಂದು ತಾಲೂಕು ಕೇಂದ್ರದಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದೆ.
ನಡ ಗ್ರಾ.ಪಂ ಚುನಾವಣಾಧಿಕಾರಿಯಾಗಿ ಸಹಾಯಕ ಇಂಜಿನಿಯರ್ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಬೆಳ್ತಂಗಡಿ, ಸಹಾಯಕರು ರಾಜೀವಿ ಅಭಿವೃದ್ಧಿ ಅಧಿಕಾರಿ, ಧರ್ಮಸ್ಥಳ ಗ್ರಾ.ಪಂ ಚುನಾವಣಾಧಿಕಾರಿ ಚಿದಾನಂದ ಹೂಗಾರ್ ಸಹಾಯಕ ಕೃಷಿ ಅಧಿಕಾರಿ ಕೊಕ್ಕಡ, ಸಹಾಯಕರು ಉಮೇಶ್ ಕಾರ್ಯದರ್ಶಿ, ಶಿಬಾಜೆ ಗ್ರಾ.ಪಂ. ಚುನಾವನಾಧಿಕಾರಿ ಸಹಾಯಕ ಇಂಜಿನಿಯರ್ ಪಂ.ರಾಜ್ ಉಪವಿಭಾಗ ಬೆಳ್ತಂಗಡಿ, ಸಹಾಯಕರು ದಿನೇಶ್ ಶೆಟ್ಟಿ ಅಭಿವೃದ್ಧಿ ಅಧಿಕಾರಿ, ಉಜಿರೆ ಗ್ರಾ.ಪಂ ನಾರಾಯಣ ಪೂಜಾರಿ ಸಹಾಯಕ ಕೃಷಿ ಅಧಿಕಾರಿ ಬೆಳ್ತಂಗಡಿ, ಸಹಾಯಕರು ಗಾಯತ್ರಿ ಅಭಿವೃದ್ಧಿ ಅಧಿಕಾರಿ. ಅಭ್ಯರ್ಥಿಗಳು ಆಯಾ ಗ್ರಾಮ ಪಂಚಾಯತ ದಲ್ಲಿರುವ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಬೇಕು.
ಚುನಾವಣೆ ಘೋಷಣೆಯಾದ ಗ್ರಾ.ಪಂ ವ್ಯಾಪ್ತಿಯಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದ್ದು, ಆ.೩೧ರವರೆಗೆ ಇರುತ್ತದೆ. ಚುನಾವಣೆಗೆ ಸಂಬಂಧಿಸಿದಂತೆ ಹಾಲಿ ಚಾಲ್ತಿಯಲ್ಲಿರುವ ವಿಧಾನ ಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ತಯಾರಿಸ ಲಾಗಿರುವ ಗ್ರಾಮ ಪಂಚಾಯತಿಯ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸಲಾಗುವುದು. ಮತ ಪತ್ರದ ಮೂಲಕ ನಡೆಯುವ ಚುನಾವಣೆಯಲ್ಲಿ ‘ನೋಟಾ’ ಮತದಾನಕ್ಕೆ ಅವಕಾಶ ಇಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.