HomePage_Banner_
HomePage_Banner_
HomePage_Banner_

ಬಸ್ಸು ಬೈಕ್ ಅಪಘಾತ: ಬೈಕ್ ಸವಾರ ಶೀನ ಪೂಜಾರಿ ದಾರುಣ ಸಾವು

Advt_NewsUnder_1

123ವೇಣೂರು: ಇಲ್ಲಿನ ಠಾಣಾ ವ್ಯಾಪ್ತಿಯ ಕೊಕ್ರಾಡಿ ಶಾಲೆಗಿಂತ ಸ್ವಲ್ಪ ಎದುರಿಗೆ ಇಳಿಜಾರು ರಸ್ತೆಯಲ್ಲಿ ಬೈಕ್ ಮತ್ತು ಖಾಸಗಿ ಬಸ್ಸು ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸಾವ್ಯ ನಿವಾಸಿ ಶೀನ ಪೂಜಾರಿ(48ವ.) ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಹಸವಾರ ಗೋಪಾಲ ಪೂಜಾರಿ ಅವರು ಅಪಾಯದಿಂದ ಪಾರಾಗಿದ್ದಾರೆ. ಬೈಕ್‌ಸ್ಕಿಡ್ ಅಗಿ ಮಗುಚಿ ಬಿದ್ದಾಗ ಬಸ್ಸು ಅವರ ಮೇಲೆ ಹರಿದು ಅಪಘಾತ ಸಂಭವಿಸಿದೆ.
ಮೃತರು ಸಂಕ್ರಮಣ ನಿಮಿತ್ತ ದೇವಸ್ಥಾನಕ್ಕೆಂದು ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಶಾಸಕ ವಸಂತ ಬಂಗೇರ, ಜಿ.ಪಂ ಸ್ಥಾಯಿ ಸಮಿತಿ ಸದಸ್ಯ ಶಾಹುಲ್ ಹಮೀದ್, ಜಿ.ಪಂ ಸದಸ್ಯ ಧರಣೇಂದ್ರ ಕುಮಾರ್, ಗ್ರಾ.ಪಂ ಮಾಜಿ ಅಧ್ಯಕ್ಷ ಸೂರ್ಯನಾರಾಯಣ ಡಿ. ಕೆ ಮೊದಲಾದ ಗಣ್ಯರು ಭೆಟಿ ನೀಡಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.