ಅಕ್ಟೋಬರ್ 1ರಿಂದ ಮೈಸೂರು ದಸರಾ

ಅಕ್ಟೋಬರ್ 1ರಂದು 11.40ಕ್ಕೆ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯಾಗಲಿದೆ. ವಿಧಾನಸೌಧದಲ್ಲಿ ಗುರುವಾರ ದಸರಾ ಸಿದ್ಧತೆ ಕುರಿತು ನಡೆದ ಉನ್ನತ ಮಟ್ಟದ ಸಭೆಯ ನಂತರ ಸಿದ್ಧರಾಮಯ್ಯ ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದು, ದಸರಾ ಉದ್ಘಾಟಕರ ಕುರಿತು ಚೆನ್ನವೀರ ಕಣವಿ, ನಿಸಾರ್ ಅಹಮದ್, ಭೈರಪ್ಪ, ಸಚಿನ್ ತೆಂಡುಲ್ಕರ್ ಅವರ ಹೆಸರು ಸಭೆಯಲ್ಲಿ ಪ್ರಸ್ತಾಪವಾಗಿದೆ. ಆದರೆ ಈ ಕುರಿತು ಅಂತಿಮ ತೀರ್ಮಾನವನ್ನು ಆಗಸ್ಟ್ 9ರಂದು ನಡೆಯಲಿರುವ ದಸರಾ  ಕಾರ್ಯಕಾರಿ  ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.