ಗೃಹರಕ್ಷಕದಳದಿಂದ ಅಸ್ಕ ಲೈಟ್ ಪ್ರಾತ್ಯಕ್ಷಿಕೆ

Light prathyakshike copyಜಿಲ್ಲಾ ಗೃಹ ರಕ್ಷಕ ದಳದಿಂದ ಬೆಳ್ತಂಗಡಿ ಗೃಹ ರಕ್ಷಕ ದಳಕ್ಕೆ ನೀಡಲಾದ ರೂ.3.50 ಲಕ್ಷ ವೆಚ್ಚದ ಅಸ್ಕ ಲೈಟ್‌ನ ಪ್ರಾತ್ಯಕ್ಷಿಕೆ ಗೃಹ ರಕ್ಷಕ ದಳ ಕಚೇರಿ ಬಳಿಯಲ್ಲಿ ನಡೆಯಿತು.
ರಾತ್ರಿ ಸಮಯ ತುರ್ತು ಕಾರ್ಯಾಚರಣೆಗೆ ಬೆಳಕಿನ ವ್ಯವಸ್ಥೆಗೆ ಬಳಸಬಹುದಾದ ಜನರೇಟರ್ ಅಳವಡಿಸಲಾದ ಈ ಲೈಟ್‌ನ್ನು ನಮಗೆ ಬೇಕಾದ ಸ್ಥಳಗಳಿಗೆ ಒಯ್ಯಬಹುದು ಸುಮಾರು 400 ಮೀ ದೂರದವರೆಗೆ ಪ್ರಖರ ಬೆಳಕನ್ನು ನೀಡುವ ಈ ಲೈಟ್ ಒಂದು ಲೀಟರ್ ಪೆಟ್ರೋಲ್‌ನಲ್ಲಿ ಒಂದು ಗಂಟೆ ಉರಿಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಮಾಂಡೆಂಟ್ ಡಾ| ಮುರಳಿ ಮೋಹನ್ ತಿಳಿಸಿದರು. ಈ ಸಂದರ್ಭ ಉಪಕಮಾಂಡೆಂಟ್ ರಮೇಶ್, ಡಾ| ಆಶಾ ಪಿದಮಲೆ, ಘಟಕಾಧಿಕಾರಿ ಜಯಾನಂದ ಲಾಲ, ಹಾಗೂ ಗೃಹ ರಕ್ಷಕ ದಳದ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.