ನಿಸರ್ಗದತ್ತ ಆಹಾರವೇ ಆಟಿಯ ಪರಿಣಾಮಕಾರಿ ಔಷಧಿ : ಬಾಲಕೃಷ್ಣ ಮೂಡಂಬಡಿತ್ತಾಯ

tulu shivalli ati acharane copy

ತುಳು  ಶಿವಳ್ಳಿ ಉಜಿರೆ ವಲಯದಿಂದ ಆಟಿ ಆಚರಣೆ

ಉಜಿರೆ : ಭಾರತೀಯ ಧಾರ್ಮಿಕ ಪದ್ಧತಿಯೇ ಒಂದು ಪರಂಪರೆ. ಆಟಿ ಕ್ಷಯ ಮಾಸವಾಗಿದ್ದು ರೋಗರುಜಿನಗಳು ಹೆಚ್ಚು. ನಿಸರ್ಗದತ್ತ ಆಹಾರವೇ ಪರಿಣಾಮಕಾರಿ ಔಷಧಿಯಾಗಿ ಬಳಸಲ್ಪಡುತ್ತಿದೆ. ಪ್ರಾಚೀನ ಪರಂಪರೆ ಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದೇ ಆಟಿ ಆಚರಣೆಯ ಮಹತ್ವವೆಂದು ಉಜಿರೆಯ ಎಸ್‌ಡಿಎಂ ಸ್ನಾತಕೋತ್ತರ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಬಾಲಕೃಷ್ಣ ಮೂಡಂಬಡಿತ್ತಾಯ ಹೇಳಿದರು.
ಅವರು ಆ.7ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ತುಳು ಶಿವಳ್ಳಿ ಸಭಾ ಉಜಿರೆ ವಲಯದ ವತಿಯಿಂದ ಆಟಿ ಆಚರಣೆ ಮಹತ್ವದ ಕುರಿತು ಉಪನ್ಯಾಸ ನೀಡುತ್ತಿದ್ದರು. ಗೌರವಾಧ್ಯಕ್ಷ ವಿಜಯರಾಘವ ಪಡ್ವೆಟ್ನಾಯರು ವರ್ಷದಲ್ಲಿ ಆಟಿ ಮತ್ತು ಧನುರ್ಮಾಸ ಶೂನ್ಯ ಮಾಸವಾಗಿದ್ದರೂ ಅತ್ಯಂತ ಚಟುವಟಿಕೆಯ ತಿಂಗಳು. ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪರಸ್ಪರ ಬಾಂಧವ್ಯ ವೃದ್ಧಿಸಿ ಸಂಘಟನೆ ಬಲಪಡಿಸುವುದೇ ಆಟಿ ಆಚರಣೆಯ ಉದ್ದೇಶ ಎಂದರು.
ತುಳು ಶಿವಳ್ಳಿ ಸಭಾ ತಾಲೂಕು ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ವಲಯದ ಎಲ್ಲ ಕಾರ್ಯಕ್ರಮಗಳಲ್ಲಿ ಸದಸ್ಯರು ಭಾಗವಹಿಸಿ ಕುಂದುಕೊರತೆಗಳನ್ನು ಬಗೆಹರಿಸಿ ಸಂಘಟನೆಯನ್ನು ಮುನ್ನಡೆಸಬೇಕೆಂದರು.
ಸುರೇಶ ಕುದ್ರೆಂತ್ತಾಯರು ರಚಿಸಿದ ಆಟಿಯ ಮಹತ್ವದ ಗೀತೆಗೆ ಶೋಭಾ ಕುದ್ರೆಂತ್ತಾಯ ಮತ್ತು ಬಳಗದವರು ರಾಗ ಸಂಯೋಜಿಸಿ ಹಾಡಿದರು. ಹರ್ಷ ಕುಮಾರ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಉಜಿರೆ ವಲಯಾಧ್ಯಕ್ಷ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಪ್ರಸ್ತಾವಿಸಿದರು.
ಮುರಲೀಕೃಷ್ಣ ಆಚಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ವಲಯ ಕಾರ್ಯದರ್ಶಿ ಶ್ರೀಧರ ಕೆ.ವಿ. ವಂದಿಸಿದರು. ವಲಯದ ಮಹಿಳಾ ಸದಸ್ಯೆಯರು ತಮ್ಮ ಮನೆಗಳಲ್ಲಿ ಸಿದ್ಧಪಡಿಸಿದ ಸುಮಾರು ೫೦ಕ್ಕೂ ಹೆಚ್ಚು ಆಟಿ ಖಾದ್ಯಗಳನ್ನು ಪ್ರದರ್ಶಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.