ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯಡಿ ತಾಲೂಕಿನ 5 ಖಾಸಗಿ ಆಸ್ಪತ್ರೆಗಳಲ್ಲಿ ಸೌಲಭ್ಯ

Advt_NewsUnder_1
Advt_NewsUnder_1
Advt_NewsUnder_1

  ಬೆಳ್ತಂಗಡಿ : ರಾಜ್ಯ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಡಿ ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ ಎಂಬ ಹೆಸರಿನಲ್ಲಿ ಇನ್ನು ಮುಂದಕ್ಕೆ ರಸ್ತೆ ಅಪಘಾತದ ಚಿಕಿತ್ಸೆಗೆ ತುರ್ತು ಚಿಕಿತ್ಸೆ ಪಡೆಯಲು 25 ಸಾವಿರ ರೂ. ವರೆಗೆ ಉಚಿತ ಆರೋಗ್ಯ ಸೌಲಭ್ಯ ದೊರೆಯಲಿದೆ. ಈ ಯೋಜನೆಯಡಿ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ತಾಲೂಕಿನ ಒಟ್ಟು 5 ಖಾಸಗಿ ಆಸ್ಪತ್ರೆಗಳಲ್ಲೂ ಅವಕಾಶ ಕಲ್ಪಿಸಲಾಗಿದ್ದು ಅಲ್ಲಿ ಪಡೆಯುವ ಅಪಘಾತ ತುರ್ತು ಚಿಕಿತ್ಸೆಗೆ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
ಏನಿದು ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ ?
ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದ ಹರೀಶ್ ಎಂಬವರ ಸೊಂಟಕ್ಕಿಂತ ಕೆಳಗೆ ಸಂಪೂರ್ಣ ಬೇರ್ಪಟ್ಟು ಹೃದಯವಿದ್ರಾವಕ ಸನ್ನಿವೇಶದಲ್ಲಿದ್ದಾಗ ತಾನು ಇನ್ನು ಬದುಕುಳಿಯುವ ಯಾವುದೇ ಅವಕಾಶ ಇಲ್ಲ ಎಂಬ ಸ್ಥಿತಿ ಎದುರಾದಾಗ ಆ ಯುವಕ ತನ್ನ ಅಂಗಾಂಗಳನ್ನು ದಾನ ಮಾಡಿದ ಅತ್ಯಂತ ಅಪರೂಪದ ಸನ್ನಿವೇಶದಲ್ಲಿ ಮೆರೆದ ಅವರ ತ್ಯಾಗದ ಸಂಕೇತವಾಗಿ ಆಗಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ, ಕರಾವಳಿಯ ಶಾಸಕರಾದ ಯು.ಟಿ ಖಾದರ್ ಅವರ ಶಿಫಾರಸ್ಸಿನಂತೆ ಸಚಿವ ಸಂಪುಟದಲ್ಲಿ ಅಂಗೀಕೃತವಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಂದ ಘೋಷಿಸಲ್ಪಟ್ಟ ಯೋಜನೆಯೇ ಈ ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ. ಈ ಯೋಜನೆಯಲ್ಲಿ ಅಪಘಾತಕ್ಕೆ ತುತ್ತಾದ ವ್ಯಕ್ತಿಯನ್ನು ಆಪಘಾತದ ಸನ್ನಿವೇಶದಿಂದ ಹೊರತರಲು ಹಾಗೂ ಪ್ರಾಣ ರಕ್ಷಣೆಗಾಗಿ ಅಪಘಾತದ ನಂತರದ 48 ಗಂಟೆಯೊಳಗೆ ತುರ್ತಾಗಿ ಅವಶ್ಯಕವಿರುವ ವೈದ್ಯಕೀಯ ಚಿಕಿತ್ಸೆಯನ್ನು ಆದ್ಯತೆ ಮೇಲೆ ಒದಗಿಸುವುದು ಈ ಯೋಜನೆಯ ಮುಖ್ಯ ಧ್ಯೇಯವಾಗಿದೆ. ಸಂತ್ರಸ್ತ ವ್ಯಕ್ತಿಗೆ ನೋಂದಾಯಿತ ಆಸ್ಪತ್ರೆಗಳಲ್ಲಿ 48ಗಂಟೆಯೊಳಗೆ 25 ಸಾವಿರ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಇದರ ಪ್ರಯೋಜ ನವನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.

ಗಾಯಾಳುಗಳಿಗೆ ತುರ್ತು ಅಪಘಾತ ಚಿಕಿತ್ಸೆಗೆ 25 ಸಾವಿರ ರೂ. ಸರಕಾರಿ ನೆರವು

ಜಿಲ್ಲೆಯಲ್ಲಿ ಯಾವ್ಯಾವ ಆಸ್ಪತ್ರೆಗಳು :
ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ, ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ ಮತ್ತು ತುಂಬೆ, , ಜಸ್ಟಿಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ, ಮಂಗಳಾ ಆಸ್ಪತ್ರೆ ಕದ್ರಿ, ಎ. ಜೆ ಆಸ್ಪತ್ರೆ ಮಂಗಳೂರು, ಗ್ಲೋಬಲ್ ಆಸ್ಪತ್ರೆ, ಹೈಲ್ಯಾಂಡ್ ಆಸ್ಪತ್ರೆ, ಇಂಡಿಯಾನ ಆಸ್ಪತ್ರೆ, ಕಣಚೂರು ಆಸ್ಪತ್ರೆ ದೇರಳಕಟ್ಟೆ, ಕೆ.ಎಂ.ಸಿ. ಅತ್ತಾವರ, ಒಮೇಗಾ ಆಸ್ಪತ್ರೆ, ಯೆನಪೋಯ ಆಸ್ಪತ್ರೆ ಕೊಡಿಯಾಲ್‌ಬೈಲ್ ಮತ್ತು ಯುನಿಟಿ ಆಸ್ಪತ್ರೆ.

ತಾಲೂಕಿನಲ್ಲಿ ಯಾವ್ಯಾವ ಆಸ್ಪತ್ರೆಗಳು
ಟ ಎಸ್‌ಡಿಎಂ ಸಾರ್ವಜನಿಕ ಆಸ್ಪತ್ರೆ ಉಜಿರೆ
ಟ ಬೆನಕ ಹೆಲ್ತ್ ಸೆಂಟರ್ ಉಜಿರೆ
ಟ ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ
ಟ ಫಾ| ಎಲ್.ಎಂ ಪಿಂಟೋ ಆಸ್ಪತ್ರೆ ಬದ್ಯಾರ್
ಟ ಅಭಯಾ ಆಸ್ಪತ್ರೆ ಗುರುವಾಯನಕೆರೆ.

ಇತರ ಆಸ್ಪತ್ರೆಗಳು :
ಕೆ.ವಿ.ಜಿ. ಆಸ್ಪತ್ರೆ ಸುಳ್ಯ, ನೇತಾಜಿ ಆಸ್ಪತ್ರೆ ತೊಕ್ಕೊಟ್ಟು, ಪುತ್ತೂರು ಸಿಟಿ ಆಸ್ಪತ್ರೆ, ಅಶ್ವಿನಿ ಆಸ್ಪತ್ರೆ ನೆಲ್ಯಾಡಿ, ಸಹರಾ ಆಸ್ಪತ್ರೆ ತೊಕ್ಕೊಟ್ಟು, ಸುರಕ್ಷಾ ಆಸ್ಪತ್ರೆ ವಿಟ್ಲ, ಪುಷ್ಪರಾಜ್ ಆಸ್ಪತ್ರೆ ಕಲ್ಲಡ್ಕ, ಧನ್ವಂತರಿ ಆಸ್ಪತ್ರೆ ಉಪ್ಪಿನಂಗಡಿ, ಚೇತನ ಆಸ್ಪತ್ರೆ ಪುತ್ತೂರು, ಮಹಾವೀರ ಆಸ್ಪತ್ರೆ ಪುತ್ತೂರು, ಪ್ರಗತಿ ಆಸ್ಪತ್ರೆ ಪುತ್ತೂರು, ಸೋಮಯಾಜಿ ಆಸ್ಪತ್ರೆ ಬಿ.ಸಿ.ರೋಡ್ ಮತ್ತು ಶ್ರೀನಿವಾಸ ಆಸ್ಪತ್ರೆ ಮುಕ್ಕ ಸುರತ್ಕಲ್.
ಜಿಲ್ಲಾ ಸರಕಾರಿ ಆಸ್ಪತ್ರೆ ವೆನ್ಲಾಕ್ ಸೇರಿದಂತೆ ತಾಲೂಕು ಸರಕಾರಿ ಆಸ್ಪತ್ರೆಗಳಾದ ಬಂಟ್ವಾಳ, ಪುತ್ತೂರು, ಸುಳ್ಯ ಮತ್ತು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರವೂ ಈ ಯೋಜನೆಯ ವ್ಯಾಪ್ತಿಗೊಳಪಟ್ಟಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.