ಪಡಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ರೂ. 33 ಲಕ್ಷ ಲಾಭ – ಶೇ.100 ವಸೂಲಾತಿ – ಶೇ.15 ಡಿವಿಡೆಂಟ್

Advt_NewsUnder_1
Advt_NewsUnder_1
Advt_NewsUnder_1

padangadi ca bank varshika mahashabe' copyಪಡಂಗಡಿ : ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪಡಂಗಡಿ ಇದರ ವಾರ್ಷಿಕ ಮಹಾಸಭೆ ಆ.6ರಂದು ಸಂಘದ ಅಧ್ಯಕ್ಷ ಯೋಗೀಶ್ ಕುಮಾರ್ ಕೆ.ಎಸ್ ಇವರ ಅಧ್ಯಕ್ಷತೆಯಲ್ಲಿ ಸಂಘದ ಸಭಾ ಭವನದಲ್ಲಿ ನಡೆಯಿತು.
ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಎರಡು ಗ್ರಾಮಗಳ ಕಾರ್ಯಕ್ಷೇತ್ರವನ್ನು ಹೊಂದಿದ್ದು, ಸತತ ಲಾಭದಲ್ಲಿ ಮುನ್ನಡೆಯುತ್ತಿದೆ. ಸದ್ರಿ ಸಾಲಿನಲ್ಲಿ ಸಂಘವು ರೂ.9.68 ಠೇವಣಿ ಹೊಂದಿದ್ದು, ಪಾಲು ಬಂಡವಾಳ ರೂ.1.01 ಕೋಟಿ ಇದೆ. ಈ ಸಾಲಿನಲ್ಲಿ ರೂ.10.42 ಕೋಟಿ ಸಾಲ ನೀಡಲಾಗಿದೆ. ವರ್ಷಾಂತ್ಯಕ್ಕೆ ರೂ.9.57 ಕೋಟಿ ಹೊರಬಾಕಿ ಸಾಲಗಳಿದ್ದು, ಈ ಸಾಲಿನಲ್ಲಿ ಶೇ 100 ಸಾಲ ವಸೂಲಿಯಾಗಿದೆ.ಸಂಘವು ವಾರ್ಷಿಕ ರೂ.49.85ಕೋಟಿ ವ್ಯವಹಾರ ನಡೆಸಿ ಗರಿಷ್ಠ ರೂ.33.13 ಲಕ್ಷ ಲಾಭ ಗಳಿಸಿ, ಆಡಿಟ್ ವರ್ಗೀಕರಣದಲ್ಲಿ ‘ಎ’ ಗ್ರೇಡ್ ಪಡೆದುಕೊಳ್ಳಲಾಗಿದೆ. ಶೇ 15 ಡೆವಿಡೆಂಟ್ ನೀಡಲಾಗಿದೆ ಎಂದು ಅಧ್ಯಕ್ಷ ಯೋಗೀಶ್ ಕುಮಾರ್ ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಶ್ರೀಮತಿ ಸುಕೇಶಿನಿ ವರದಿ ವಾಚಿಸಿ, ಸಂಘವು 1722 ಎ’ ತರಗತಿಯ ಸದಸ್ಯರನ್ನು ಹೊಂದಿದ್ದು, 2016-17ನೇ ಸಾಲಿಗೆ ಸಂಘದ ಅಧಿಕೃತ ಪಾಲುಬಂಡವಾಳದ ಮಿತಿಯನ್ನು 1.10ಕೋಟಿಗೆ ನಿಗದಿಪಡಿಸಲಾಗಿದೆ. ಸಂಘದ ಸದಸ್ಯರಿಗೆ ಅಲ್ಪಾವಧಿ ಕೃಷಿ ಸಾಲ, ಮಧ್ಯಮಾವಧಿ ಸಾಲ, ಧೀರ್ಘಾವಧಿ ಸಾಲ, ಚಿನ್ನಾಭರಣ ಈಡಿನ ಸಾಲ, ವಾಹನ ಸಾಲ, ಸ್ವಸಹಾಯ ಸಂಘಗಳಿಗೆ ಸಾಲ ಸೇರಿದಂತೆ ಹಲವು ಉದ್ದೇಶಗಳಿಗೆ ಸಾಲ ನೀಡಲಾಗಿದೆ. ಸಂಘವು 2015-16ನೇ ಸಾಲಿಗೆ 33.13ಲಕ್ಷ ಲಾಭ ಗಳಿಸಿದ್ದು, ಇದು ಹಿಂದಿನ ಸಾಲಿಗೆ ಹೋಲಿಸಿದಾಗ ಶೇ 21.76ರಷ್ಟು ಏರಿಕೆಯಾಗಿದೆ. ಸಾಲ ಮನ್ನಾ ಯೋಜನೆಯಡಿ ರೂ.58.53 ಮತ್ತು ಸರಕಾರದ ಬಡ್ಡಿ ಮನ್ನಾ ಯೋಜನೆಯಲ್ಲಿ ರೂ.33,95,390 ಬರಲು ಬಾಕಿ ಇರುತ್ತದೆ ಎಂದು ತಿಳಿಸಿದರು. ಸಭೆಯಲ್ಲಿ ಸಂಘದ ಅಭಿವೃದ್ಧಿಯ ಕುರಿತು ಚರ್ಚಿಸಲಾಯಿತು. ಸಂಘದ ಉಪಾಧ್ಯಕ್ಷೆ ಅನುಸೂಯ ಡಿ.ಬಿ, ನಿರ್ದೇಶಕರಾದ ಮ್ಯಾಕ್ಸಿಂ ಸಿಕ್ವೇರಾ, ನೇಮಿರಾಜ ಶೆಟ್ಟಿ, ಕೃಷ್ಣಪ್ಪ, ಶ್ರೀಮತಿ ಸುನೀತಾ ಉಪಸ್ಥಿತರಿ ದ್ದರು. ನಿರ್ದೇಶಕ ಶಂಕರ ಶೆಟ್ಟಿ ಸ್ವಾಗತಿಸಿದರು. ನಿರ್ದೇಶಕ ಹಾಮದ್ ಬಾವಾ ಧನ್ಯವಾದವಿತ್ತರು. ಲೆಕ್ಕಿಗ ಸುಜಯ, ಗುಮಾಸ್ತ ಉಮೇಶ್ ಹಾಗೂ ಆನಂದ, ಜವಾನ ರಂಜಿತ್ ಸಹಕರಿಸಿದರು. ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.