ಕು| ಸೌಜನ್ಯ ಪ್ರಕರಣ : ಹೆಗ್ಗಡೆ ಕುಟುಂಬ ಶಾಮೀಲಾಗಿಲ್ಲ ಸಂತೋಷ್ ರಾವ್ ಕೃತ್ಯ : ಸಿಬಿಐ ವರದಿ ಸಲ್ಲಿಕೆ

Santhosh rao 1 copy

ಆರೋಪಿ ಸಂತೋಷ್ ರಾವ್

Sowjanya copy

ಕು| ಸೌಜನ್ಯ

ಬೆಳ್ತಂಗಡಿ : ಉಜಿರೆ ಶ್ರೀ ಧ.ಮಂ. ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿ ಪುತ್ರಿ ವಿದ್ಯಾರ್ಥಿನಿ ಕು| ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಆರೋಪಿ ಸಂತೋಷ್ ರಾವ್ ಈ ಕೃತ್ಯ ಎಸಗಿರುವುದು ತನಿಖೆಯಿಂದ ಸಾಬೀತಾಗಿದೆ ಎಂದು ಸಿಬಿಐ ವರದಿ ಸಲ್ಲಿಸಿದೆ. ಸಿಬಿಐ ಅಧಿಕಾರಿಗಳು ಸಾಕ್ಷಿದಾರರ ಹೇಳಿಕೆಗಳು, ವೈದ್ಯರ ವರದಿಗಳನ್ನು ವಿಶ್ಲೇಷಿಸಿದಾಗ ಆರೋಪಿ ಸಂತೋಷ್ ರಾವ್ ಕೃತ್ಯ ಎಸಗಿರುವುದು ದೃಢಪಟ್ಟಿದೆ ಎಂದು ಈ ಬಗ್ಗೆ ಚೆನ್ನೈನ ವಿಶೇಷ ಸಿಬಿಐ ಅಧಿಕಾರಿಗಳ ತಂಡದ ತನಿಖಾಧಿಕಾರಿ ಪಿ.ವಿ.ಎಸ್.ಎನ್ ರಾಜು ಅವರು ವಿವರವಾದ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇದರಲ್ಲಿ ೪೪ ಜನ ಸಾಕ್ಷಿದಾರರ ಹೆಸರನ್ನು ಹೆಸರಿಸಲಾಗಿದೆ. ಸಂತೋಷ್ ರಾವ್ ಹೊರತು ಪಡಿಸಿದರೆ ಬೇರೆ ಯಾವುದೇ ವ್ಯಕ್ತಿಗಳು ಈ ಕೃತ್ಯದಲ್ಲಿ ಶಾಮೀಲಾಗಿಲ್ಲ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಕುಟುಂಬದವರ ಯಾವುದೇ ಪಾತ್ರ ಇಲ್ಲ ಎಂದು ಸಿಬಿಐ ವರದಿಯಿಂದ ಗೊತ್ತಾಗಿದೆ ಎಂದು ಹೆಗ್ಗಡೆ ಪರ ವಕೀಲ ಪಿ.ಪಿ. ಹೆಗ್ಡೆ ಪ್ರತಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಕರಣದ ವಿವರ :2012 ಅ.9ರಂದು ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಕು| ಸೌಜನ್ಯ ಮಧ್ಯಂತರ ಪರೀಕ್ಷೆ ಬರೆದು ಸಂಜೆ ಎಂದಿನಂತೆ ಕಾಲೇಜು ಬಿಟ್ಟು ತನ್ನ ಮನೆಗೆ ಹೋದವರು ರಾತ್ರಿಯಾದರೂ ಮನೆಗೆ ತಲುಪದೇ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಸಂದರ್ಭ ಮನೆಯವರು ಹಾಗೂ ಊರಿನವರು ಎಲ್ಲ ಕಡೆ ಹುಡುಕಾಡಿದರೂ ಅವರು ಪತ್ತೆಯಾಗಿರಲಿಲ್ಲ ಮರುದಿನ ಅ.10ರಂದು ಬೆಳ್ತಂಗಡಿ :  ಉಜಿರೆ ಶ್ರೀ ಧ.ಮಂ. ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿ ಪುತ್ರಿ ವಿದ್ಯಾರ್ಥಿನಿ ಕು| ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಆರೋಪಿ ಸಂತೋಷ್ ರಾವ್ ಈ ಕೃತ್ಯ ಎಸಗಿರುವುದು ತನಿಖೆಯಿಂದ ಸಾಬೀತಾಗಿದೆ ಎಂದು ಸಿಬಿಐ ವರದಿ ಸಲ್ಲಿಸಿದೆ. ಸಿಬಿಐ ಅಧಿಕಾರಿಗಳು ಸಾಕ್ಷಿದಾರರ ಹೇಳಿಕೆಗಳು, ವೈದ್ಯರ ವರದಿಗಳನ್ನು ವಿಶ್ಲೇಷಿಸಿದಾಗ ಆರೋಪಿ ಸಂತೋಷ್ ರಾವ್ ಕೃತ್ಯ ಎಸಗಿರುವುದು ದೃಢಪಟ್ಟಿದೆ ಎಂದು ಈ ಬಗ್ಗೆ ಚೆನ್ನೈನ ವಿಶೇಷ ಸಿಬಿಐ ಅಧಿಕಾರಿಗಳ ತಂಡದ ತನಿಖಾಧಿಕಾರಿ ಪಿ.ವಿ.ಎಸ್.ಎನ್ ರಾಜು ಅವರು ವಿವರವಾದ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇದರಲ್ಲಿ ೪೪ ಜನ ಸಾಕ್ಷಿದಾರರ ಹೆಸರನ್ನು ಹೆಸರಿಸಲಾಗಿದೆ. ಸಂತೋಷ್ ರಾವ್ ಹೊರತು ಪಡಿಸಿದರೆ ಬೇರೆ ಯಾವುದೇ ವ್ಯಕ್ತಿಗಳು ಈ ಕೃತ್ಯದಲ್ಲಿ ಶಾಮೀಲಾಗಿಲ್ಲ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಕುಟುಂಬದವರ ಯಾವುದೇ ಪಾತ್ರ ಇಲ್ಲ ಎಂದು ಸಿಬಿಐ ವರದಿಯಿಂದ ಗೊತ್ತಾಗಿದೆ ಎಂದು ಹೆಗ್ಗಡೆ ಪರ ವಕೀಲ ಪಿ.ಪಿ. ಹೆಗ್ಡೆ ಪ್ರತಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಕರಣದ ವಿವರ :2012 ಅ.9ರಂದು ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಕು| ಸೌಜನ್ಯ ಮಧ್ಯಂತರ ಪರೀಕ್ಷೆ ಬರೆದು ಸಂಜೆ ಎಂದಿನಂತೆ ಕಾಲೇಜು ಬಿಟ್ಟು ತನ್ನ ಮನೆಗೆ ಹೋದವರು ರಾತ್ರಿಯಾದರೂ ಮನೆಗೆ ತಲುಪದೇ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಸಂದರ್ಭ ಮನೆಯವರು ಹಾಗೂ ಊರಿನವರು ಎಲ್ಲ ಕಡೆ ಹುಡುಕಾಡಿದರೂ ಅವರು ಪತ್ತೆಯಾಗಿರಲಿಲ್ಲ ಮರುದಿನ ಅ.10ರಂದು
ಸೌಜನ್ಯರ ಮೃತದೇಹ ಅವರ ಮನೆಗೆ ಹೋಗುವ ದಾರಿಯ ಮುಖ್ಯರಸ್ತೆಯ ಬದಿಯಲ್ಲೇ ಹರಿಯುವ ತೋಡಿನ ಪಕ್ಕದ ಮಣ್ಣಸಂಕ ಎಂಬಲ್ಲಿಯ ಕಾಡಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅವರನ್ನು ಅತ್ಯಾಚಾರ ನಡೆಸಿ ಕೊಲೆ ಗೈದಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯ ಆಗಿನ ಎಸ್.ಐ. ಯೋಗೀಶ್ ಕುಮಾರ್ ಕೇಸು ದಾಖಲಿಸಿಕೊಂಡಿದ್ದರು.
ಸೌಜನ್ಯ ಕೊಲೆ ಪ್ರಕರಣದ ಆರೋಪಿಗಳ ಪತ್ತೆಗಾಗಿ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘಟನೆಗಳು ಒತ್ತಾಯ ಹಾಗೂ ಪ್ರತಿಭಟನೆಯನ್ನು ನಡೆಸಿದ್ದರು. ಮೂರು ದಿನಗಳ ಬಳಿಕ ಧರ್ಮಸ್ಥಳದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಅಲೆದಾಡುತ್ತಿದ್ದ ಕಾರ್ಕಳ ನಿವಾಸಿ ಸಂತೋಷ್ ರಾವ್ ಎಂಬಾತನನ್ನು ಊರವರು ಹಿಡಿದು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದರು. ಬೆಳ್ತಂಗಡಿ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿ ಕೇಸು ದಾಖಲಿಸಿಕೊಂಡಿದ್ದರು. ಬಳಿಕ ಆರೋಪಿಯನ್ನು ಮಂಗಳೂರು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆದರೆ ಸಂತೋಷ್ ರಾವ್ ಈ ಕೊಲೆ ಪ್ರಕರಣದ ಆರೋಪಿಯಲ್ಲ, ಒಬ್ಬನಿಂದ ಈ ಕೊಲೆ ನಡೆಸಲು ಸಾಧ್ಯವಿಲ್ಲ. ಇದರಲ್ಲಿ ಬೇರೆಯವರು ಶಾಮೀಲಾಗಿದ್ದಾರೆ ಎಂಬ ಶಂಕೆಗಳು ವ್ಯಕ್ತವಾಗಿ, ನಿಜವಾದ ಕೊಲೆ ಆರೋಪಿಗಳನ್ನು ಬಂಧಿಸುವಂತೆ ಮತ್ತೆ ಪ್ರತಿಭಟನೆಗಳು ನಡೆದವು. ಇದರ ಪರಿಣಾಮವಾಗಿ ಸರಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿಯ ಡಿಎಸ್ಸಿ ರುದ್ರಮುನಿಯವರು ಬೆಳ್ತಂಗಡಿಗೆ ಆಗಮಿಸಿ ತನಿಖೆಯನ್ನು ನಡೆಸಿ ಪ್ರಥಮ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ ತನಿಖೆ ನೆನೆಗುದಿಗೆ ಬಿದ್ದಿತ್ತು. ಒಂದು ವರ್ಷವಾದರೂ ಇದರ ತನಿಖೆಯಲ್ಲಿ ಪ್ರಗತಿ ಕಾಣದಿರುವುದರಿಂದ, ಸೌಜನ್ಯ ಪೋಷಕರು ಧರ್ಮಸ್ಥಳದ ನಿವಾಸಿಗಳಾದ ಮಲ್ಲಿಕ್‌ಜೈನ್, ಧೀರಜ್ ಕೆಲ್ಲ ಮತ್ತು ಉದಯ ಜೈನ್ ಎಂಬವರ ಮೇಲೆ ಸಂಶಯ ವ್ಯಕ್ತಪಡಿಸಿ ದೂರು ನೀಡಿದರೂ ತನಿಖೆಯಾಗದಿರುವುದು, ಪ್ರಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಯವರ ಕುಟುಂಬಕ್ಕೆ ಸೇರಿದವರು ಶಾಮೀಲಾಗಿದ್ದಾರೆ ಎಂದು ಕೆಲ ಸಂಘಟನೆಯವರು ಪ್ರತಿಭಟನೆ ನಡೆಸಿ ದೂರು ನೀಡಿದರು. ಈ ಹಿನ್ನಲೆಯಲ್ಲಿ ಸಿಐಡಿಯ ಎಸ್ಪಿ ಶ್ರೀಮತಿ ಗೌರಿಯವರು ಬೆಳ್ತಂಗಡಿಗೆ ಬಂದು ತನಿಖೆ ನಡೆಸಿ, ಹೇಳಿಕೆಗಳನ್ನು ಪಡೆದುಕೊಂಡಿದ್ದರು. ಆದರೆ ಸೌಜನ್ಯ ಕೊಲೆ ಸಂತೋಷ್ ರಾವ್ ಒಬ್ಬನಿಂದ ಸಾಧ್ಯವಿಲ್ಲ, ಇದರಲ್ಲಿ ಬೇರೆಯವರು ಇದ್ದಾರೆ. ಅವರ ಪತ್ತೆಯಾಗಬೇಕು ಎಂದು ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಕೆಲ ಸಂಘಟನೆಯವರು ಪ್ರತಿಭಟನೆ ನಡೆಸಿ ಸಿಬಿಐ ತನಿಖೆಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದರು. ಅಲ್ಲದೆ ವಿಧಾನ ಸಭೆಯಲ್ಲಿ ಶಾಸಕ ವಸಂತ ಬಂಗೇರ ಅವರು ಪ್ರಕರಣದ ನ್ಯಾಯಯುತ ತನಿಖೆಗೆ ಆಗ್ರಹಿಸಿದ್ದರು. ಸಂಘಟನೆಗಳ ಆರೋಪದಿಂದ ಕ್ಷೇತ್ರದ ತೇಜೋವಧೆ ನಡೆಯುತ್ತಿದೆ ಎಂದು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಪ್ರಕರಣದ ತನಿಖೆಯನ್ನು ಉನ್ನತ ತನಿಖಾ ಸಂಸ್ಥೆಗೆ ಒಪ್ಪಿಸುವಂತೆ ರಾಜ್ಯ ಸರಕಾರವನ್ನು ಕೇಳಿದ್ದರು. ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ರಾಜ್ಯ ಸರಕಾರವು ೨೦೧೩ ನ. ೬ರಂದು ಪ್ರಕರಣವನ್ನು ಸಿಬಿಐಗೆ ಒಪ್ಪಿಸಿತ್ತು. ಸಿಬಿಐ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡು ಪೊಲೀಸರು ಮತ್ತು ಸಿಐಡಿ ಇದುವರೆಗೆ ನಡೆಸಿದ ವಿಚಾರಣೆ ಮತ್ತು ಸಂಗ್ರಹಿಸಿದ ಸಾಕ್ಷ್ಯಧಾರಗಳನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ, ಅಲ್ಲದೆ ಬೆಳ್ತಂಗಡಿಗೆ ಆಗಮಿಸಿ ಘಟನಾ ಸ್ಥಳ, ವಿವಿಧ ಸಂಘಟನೆಗಳು ನೀಡಿದ ದೂರು ಪರಿಶೀಲನೆ ನಡೆಸಿ, ಸಂಶಯಿತ ವ್ಯಕ್ತಿಗಳ ವಿಚಾರಣೆ ನಡೆಸಿ ಅವರ ಹೇಳಿಕೆಗಳನ್ನು ಪಡೆದುಕೊಂಡು ಎಲ್ಲಾ ರೀತಿಯಿಂದಲೂ ಸಾಕ್ಷ್ಯಾಧಾರಗಳನ್ನು ಪಡೆದುಕೊಂಡು ವಿಸ್ತೃತವಾದ ತನಿಖೆ ನಡೆಸಿತು. ಅಂತಿಮವಾಗಿ ಈಗ ವರದಿ ನೀಡಿದ್ದು, ಈ ಪ್ರಕರಣದಲ್ಲಿ ಸಂತೋಷ್ ರಾವ್ ಆರೋಪಿಯಾಗಿದ್ದು ಈತನೇ ಈ ಕೃತ್ಯ ಎಸಗಿರುವುದಾಗಿ ವರದಿ ನೀಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.