ಗ್ರಾ.ಪಂ ನೌಕರರ ವೇತನ ಹೆಚ್ಚಳ ನೌಕರರ ಸಂಘದ ಹೋರಾಟದ ಫಲ: ದೇವಿಪ್ರಸಾದ್ ಬೊಳ್ಮ

deviprasad bolma 2 copyಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮತ್ತು ಕಾರ್ಕಳ ತಾಲೂಕಿನ ಗ್ರಾಮ ಪಂಚಾಯತ್ ನೌಕರರ ಸಂಘದ ಹೊರಾಟದ ಫಲವಾಗಿ ಕೊನೆಗೂ ಗ್ರಾಮ ಪಂಚಾಯತ್ ನೌಕರರ ಕನಿಷ್ಠ ವೇತನ ಹೆಚ್ಚಳವಾಗಿದೆ ಎಂದು ಬೆಳ್ತಂಗಡಿ ತಾಲೂಕು ಗ್ರಾ.ಪಂ ನೌಕರರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಬೊಳ್ಮ ತಿಳಿಸಿದ್ದಾರೆ.
ಗುಮಾಸ್ತ, ಡಾಟಾ ಎಂಟ್ರಿ ಅಪರೇಟರ್, ಬಿಲ್ಲು ವಸೂಲಿಗ, ಪಂಪು ಚಾಲಕರಿಗೆ, ಜವಾನರಿಗೆ, ಸ್ವಚ್ಛತಾಗಾರರಿಗೆ ಕನಿಷ್ಠ ವೇತನದ ಜೊತೆಗೆ ತುಟ್ಟಿಭತ್ಯೆ ಕೂಡ ಜಾಸ್ತಿಗೊಳಿಸಿ ಸರಕಾರ ಆದೇಶ ಬಿಡುಗಡೆಗೊಳಿಸಿದ್ದು, ಇದು ಸಂಘದ ಹೋರಾಟದ ಫಲ ಎಂದು ತಿಳಿಸಿದ್ದಾರೆ.
ಸಂಘದ ಅದ್ಯಕ್ಷ, ಧರ್ಮಸ್ಥಳ ಗ್ರಾ. ಪಂ. ಸಿಬಂದಿ ದೇವಿಪ್ರಸಾದ್ ಬೊಳ್ಮ ಹಾಗೂ ಸಂಘದ ಪದಾಧಿಕಾರಿಗಳು ಅವಿರತವಾಗಿ ಶ್ರಮಿಸಿ ಕೆಲದಿನಗಳ ಕಾಲ ಬೆಂಗಳೂರಿನಲ್ಲೂ ಠಿಕಾಣಿಹೂಡಿ ಸಚಿವರು, ಸರಕಾರದ ಕಾರ್ಯದರ್ಶಿಗಳನ್ನು ಸಂಪರ್ಕಿಸಿದ ಫಲವಾಗಿ ಮತ್ತು ಕಾರ್ಕಳ ತಾಲೂಕು ಗ್ರಾಮ ಪಂಚಾಯತ್ ನೌಕರರ ಸಂಘದ ಸಹಕಾರದಿಂದ ನಡೆಸಿದ ಹೋರಾಟದಿಂದಾಗಿ ಆ.4 ರ ಕಾರ್ಮಿಕ ಇಲಾಖೆಯ ಅಧಿಸೂಚನೆಯಂತೆ ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮಪಂಚಾಯತ್ ನೌಕರರ ವೇತನ ಹೆಚ್ಚಾಗಿದೆ ಎಂದು ಸಂಘ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.