ಬೆಳ್ತಂಗಡಿ : ವಿಶ್ವಹಿಂದೂ ಪರಿಷತ್ ಭಜರಂಗದಳ ಗೋ ಹತ್ಯೆ, ಗೋ ಕಳ್ಳತನದ ವಿರುದ್ಧ ಬೃಹತ್ ಪ್ರತಿಭಟನೆ

bdy 4

bdy 5

bdy 1

bdy 2

bdy 3

ಬೆಳ್ತಂಗಡಿ ತಾಲೂಕು ವಿಶ್ವಹಿಂದೂ ಪರಿಷತ್ ಭಜರಂಗದಳ ಗೋ ಹತ್ಯೆ, ಗೋ ಕಳ್ಳತನದ ವಿರುದ್ಧ ಬೃಹತ್ ಪ್ರತಿಭಟನೆಯು ಆ.8ರಂದು ಬೆಳ್ತಂಗಡಿ ಅಯ್ಯಪ್ಪ ಗುಡಿಯಿಂದ ತಾಲೂಕು ಕಛೆರಿಯವರೆಗೆ ಬೃಹತ್ ಪ್ರತಿಭಟನೆ, ತಾಲೂಕು ಕಛೇರಿ ಎದುರುಗಡೆ ಬೃಹತ್ ಪ್ರತಿಭಟನಾ ಸಭೆಯು ನಡೆಯಿತು.
ಮುಖ್ಯ ಅತಿಥಿಗಳಾಗಿ ಕೇರಳ ಹಿಂದೂ ಈಕ್ಯ ವೇದಿ ಕುಂಟಾರು ರವೀಶ್ ತಂತ್ರಿ, ಭಜರಂಗದಳ ಪ್ರಾಂತ ಸಂಯೋಜಕ ಶರಣ್ ಪಂಪ್‌ವೆಲ್, ಭಜರಂದಳ ವಿಭಾಗ ಸಂಯೋಜಕ ಮುರಳೀಕೃಷ್ಣ ಹಂಸತಡ್ಕ ಭಾಗಿಯಾಗಿದ್ದರು.

* ಕರ್ನಾಟಕ ಗೋಹತ್ಯಾ ನಿಷೇದ ಕಾಯ್ದೆ 1964ನ್ನು ಪೂರ್ಣ ಜಾರಿಗೊಳಿಸಿ, ತಾಲೂಕಿನಲ್ಲಿ ಒಂದೇ ಒಂದು ಗೋ ಹತ್ಯೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

* ಜಾನುವಾರ ಸಾಗಾಟ ನಿಯಮಾವಳಿ ಉಲ್ಲಂಘಿಸದಂತೆ ಪೋಲಿಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಸೂಕ್ತ ನಾಖ ಬಂಧಿ, ಹೊಂಚು ದಾಳಿ ಮಾಡಬೇಕು.
* ತಾಲೂಕಿನ ಎಲ್ಲಾ ಅಕ್ರಮ ಕಸಾಯಿಖಾನೆಗಳನ್ನು ಶಾಶ್ವತವಾಗಿ ಬಂದು ಮಾಡಿಸಬೇಕು.
* ಅಕ್ರಮ ಗೋ ಸಾಗಾಟ ಮಾಡುವ ವಾಹನಗಳ ಪರವಾನಿಗೆ ರದ್ದುಗೊಳಿಸಬೇಕು ಮತ್ತು ಚಾಲಕರ ಚಾಲನಾ ಪರವಾನಿಗೆ ರದ್ದುಗೊಳಿಸಬೇಕು.
* ಗೋ ಕಳ್ಳತನ ಆಗಿರುವ ಮನೆಯವರಿಗೆ ತಲಾ ಹಸುಗಳಿಗೆ ರೂ.5 ಲಕ್ಷದಂತೆ ಪರಿಹಾರವನ್ನು ನೀಡಬೇಕು ಎಂಬ ಹಲವಾರು ಬೇಡಿಕೆಗಳನ್ನು ಮುಂ ದಿಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.