ವೇಣೂರು: ಕುಸಿದು ಬಿದ್ದು ಮೃತ್ಯು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

  ವೇಣೂರು: ಯುವಕನೋರ್ವ ಸ್ನಾನಗೃಹದಲ್ಲಿ ಕುಸಿದುಬಿದ್ದು ಮೃತಪಟ್ಟ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಆರಂಬೋಡಿ ಗ್ರಾಮದ ಹನ್ನೆರಡು ಕವಲುವಿನಲ್ಲಿ ನಡೆದಿದೆ.
ಹನ್ನೆರಡುಕವಲು ನಿವಾಸಿ ಶೀನರವರ ಪುತ್ರ ರಮಾನಂದ (24) ಮೃತಪಟ್ಟವರು. ವಾಲಿಬಾಲ್ ಆಟವಾಡಿ ಮನೆಗೆ ಬಂದು ರಾತ್ರಿ ಸ್ನಾನಕ್ಕೆಂದು ಬಚ್ಚಲು ಮನೆಗೆ ತೆರಳಿದ್ದು ಈ ವೇಳೆ ಕುಸಿದು ಬಿದ್ದು ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣ ಇವರನ್ನು ಮೂಡಬಿದಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.