ಬೆಳ್ತಂಗಡಿ : ವಿಘ್ನೇಶನ ಚಿಕಿತ್ಸೆಗಾಗಿ ಬೇಕಾಗಿದೆ ಸಹಾಯ ಹಸ್ತ

   ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಗ್ರಾಮ ನೇರಪಲ್ದಪಲ್ಕೆ ಎಂಬಲ್ಲಿ ವಾಸವಾಗಿರುವ ಪರಮೇಶ್ವರ ನಾಯ್ಕ ಹಾಗೂ ವನಿತಾ ದಂಪತಿಯ ೧೦ ವರ್ಷದ ಮಗ ವಿಘ್ನೇಶ ನಾವೂರು ಹಿ. ಪ್ರಾ. ಶಾಲೆಯಲ್ಲಿ 4ನೇ ತರಗತಿಯ ವಿದ್ಯಾರ್ಥಿ.
ಈತ ಮೂರು ವರ್ಷಗಳ ಹಿಂದೆ ಶಾಲೆ ಬಿಟ್ಟು ಮನೆಗೆ ಬಂದ ವಿಘ್ನೇಶ ಮತ್ತು ಆತನ ಸಹೋದರಿಯರು ತಿಂಡಿ ತಿನ್ನುವ ವಿಚಾರದಲ್ಲಿ ಗಲಾಟೆ ಮಾಡಿಕೊಂಡರು ಈ ವೇಳೆ ಒಲೆಯಲ್ಲಿ ಇದ್ದ ತಿಂಡಿ ಕಾಯಿಸುವ ಎಣ್ಣೆಯ ಬಾಣೆಲೆಗೆ ವಿಘ್ನೇಶನ ಕೈ ತಾಗಿ ಆತನ ಎದೆ ಮುಖಭಾಗಕ್ಕೆ ಬಿಸಿಯಾದ ಎಣ್ಣೆ ಬಿತ್ತು. ತಕ್ಷಣ ನಾವೂರಿನಲ್ಲಿರುವ ಖಾಸಗಿ ಕ್ಲೀನಿಕ್‌ನಲ್ಲಿ ಪ್ರಥಮ ಚಿಕಿತ್ಸೆಯ ಬಳಿಕ ಬದ್ಯಾರಿನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಈ ಸಂದರ್ಭ ಮಗುವಿನ ಗಾಯ ಉಲ್ಬಣಗೊಂಡ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾ| ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.

ಆತ ಎಲ್ಲರಂತೆ ಕೂಡಿ ಆಡಬೇಕಾದ ಬಾಲಕ ಆದರೆ ಇದೀಗ ಶಾಲೆಗೆ ತೆರಳಲಾಗದೆ ಮನೆಯ ಮೂಲೆಯಲ್ಲಿ ಮಲಗಿಕೊಂಡಿರಬೇಕಾದ ಸ್ಥಿತಿಗೆ ಒಳಗಾಗಿದ್ದಾನೆ. ಮಗುವಿನ ಮುಖ ಹಾಗೂ ಎದೆ ಭಾಗದ ಮಾಂಸಗಳು ಸಂಪೂರ್ಣ ಬೆಂದು ಹೋಗಿದ್ದ ಕಾರಣ ಎರಡೂ ಕಾಲಿನ ಮಾಂಸ ತೆಗೆದು ಸರ್ಜರಿ ನಡೆಸಲಾಗಿತ್ತು. ಸುಮಾರು ಒಂದುವರೆ ತಿಂಗಳ ಕಾಲ ಚಿಕಿತ್ಸೆಯ ಬಳಿಕ ಮರಳಿ ಮನೆಗೆ ಕರೆದುಕೊಂಡು ಬರಲಾಯಿತು. ಇದಾದ ಸ್ವಲ್ಪ ದಿನಗಳ ನಂತರ ಬಾಲಕ ವಿಘ್ನೇಶ ತನ್ನ ವಿದ್ಯಾಬ್ಯಾಸ ಮುಂದುವರಿಸಲು ಶಾಲೆಯತ್ತ ಹೆಜ್ಜೆ ಹಾಕಿದ ಈ ಸಂದರ್ಭ ಮತ್ತೆ ಸರ್ಜರಿ ನಡೆಸಲಾದ ಮುಖ, ಎದೆ ಭಾಗದಲ್ಲಿ ದುರ್ಮಾಂಸ ಬೆಳೆಯತೊಡಗಿತು. ಇದು ಬಾಲಕನ ಕಿವಿ, ತುಟಿಯನ್ನು ಮುಚ್ಚುವಂತೆ ಬೆಳೆಯಿತು. ಇದರಿಂದಾಗಿ ಮಗುವಿನ ಎರಡೂ ಕಿವಿ ಕೇಳದಂತಾಗಿದೆ. ಮಾತ್ರವಲ್ಲದೆ ಆಹಾರ ಸೇವನೆಗೂ ತೊಂದರೆಯುಂಟಾಗಿದೆ. ಇದೀಗ ದ್ರವ ರೂಪದ ಆಹಾರವನ್ನು ಮಾತ್ರ ಸೇವಿಸುವಂತಾಗಿದೆ. ದುರ್ಮಾಂಸ ಬೆಳವಣಿಗೆಯಿಂದ ಬಾಲಕನಿಗೆ ಕುತ್ತಿಗೆ ತಿರುಗಿಸಲು ಅಸಾಧ್ಯವಾಗಿದೆ. ಈತನಿಗೆ ಮೊದಲು ಸರ್ಜರಿ ನಡೆಸಿದ ಫಾ| ಮುಲ್ಲರ್ಸ್ ಆಸ್ಪತ್ರೆಯ ವೈದ್ಯಾಧಿಕಾರಿಗಳ ಬೇಜಾವಬ್ದಾರಿಯಿಂದಾಗಿ ಈ ರೀತಿಯಾಗಿದೆ ಎಂದು ಬಾಲಕ ತಂದೆ ತಾಯಿ ಕಣ್ಣೀರಿಡುತ್ತಿದ್ದಾರೆ.ಪ್ರಸ್ತುತ ಬಾಲಕನ ಚಿಕಿತ್ಸೆಗಾಗಿ ತಿಂಗಳಿಗೆ 3 ಸಾವಿರ ಖರ್ಚು ಮಾಡಬೇಕಾಗಿದೆ. ಮಗುವಿಗೆ ಆಹಾರ ಸೇವನೆಗಾಗಿ ಪೈಪ್ ಅಳವಡಿಸುವ ಕಾರ್ಯಕ್ಕಾಗಿ 4 ಲಕ್ಷ ಹಾಗೂ ಇತರವೈದ್ಯಕೀಯ ಚಿಕಿತ್ಸೆಗಾಗಿ 3 ಲಕ್ಷ ಬೇಕಾಗುತ್ತದೆ ಎಂದು ಪ್ರಸ್ತುತ ಬಾಲಕನನ್ನುಚಿಕಿತ್ಸೆಗೊಳಪಡಿಸುತ್ತಿರುವ ಎ. ಜೆ. ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿರುತ್ತಾರೆ. ವಿಘ್ನೇಶನ ತಂದೆ ಪರಮೇಶ್ವರ ನಾಯ್ಕ ಕೂಲಿ ಕೆಲಸ ನಿರ್ವಹಿಸುತ್ತಿದ್ದು ತಾಯಿ ವನಿತಾ ಕೂಡಾ ಕೂಲಿ ಕಾರ್ಮಿಕರಾಗಿದ್ದಾರೆ. ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿರುವ ಈ ಕುಟುಂಬ ಮಗುವಿನ ಚಿಕಿತ್ಸೆಗಾಗಿ 7 ಲಕ್ಷ ಹೊಂದಿಸುವುದೇ ಕಷ್ಟವಾಗಿದೆ.ಮಗುವಿನ ಚಿಕಿತ್ಸೆಗಾಗಿ ದಾನಿಗಳ ನೆರವನ್ನುಎದುರು ನೋಡುತ್ತಿದ್ದಾರೆ. ವಿಘ್ನೇಶನ ಬಾಳಿಗೆ ಬೆಳಕು ತೋರಿಸಲು ದಾನಿಗಳು ಕೈ ಜೋಡಿಸಲು ಮನೆಯವರು ವಿನಂತಿಸುತ್ತಿದ್ದಾರೆ.
ಸಹಾಯ ಮಾಡಲಿಚ್ಚಿಸುವವರು :- ವನಿತಾ ಗಂ. ಪರಮೇಶ್ವರ ನಾಯ್ಕ ನೇರೋಲ್ದಪಲ್ಕೆ ಮನೆ, ಕನ್ಯಾಡಿ ಗ್ರಾಮ ಪೆರ್ಮಾಣು ಅಂಚೆ, ಬೆಳ್ತಂಗಡಿ ತಾಲೂಕು. ದೂರವಾಣಿ ಸಂಖ್ಯೆ 8861543467

BANK A/C NUMBER: 01202200115239

IFSC CODE -: SYN0000120

BANK :  SYNDICATE BANK

BRANCH : BELTHANGADI

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.