ಬೆಳ್ತಂಗಡಿ : ಪಶುಭಾಗ್ಯ ಯೋಜನೆ ಅರ್ಜಿ ಆಹ್ವಾನ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಬೆಳ್ತಂಗಡಿ ಪಶು ಸಂಗೋಪನಾ ಇಲಾಖೆಯಿಂದ 2016-17ನೇ ಸಾಲಿನಲ್ಲಿ ಪಶುಭಾಗ್ಯ ಯೋಜನೆಯಡಿ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಆಡು ಸಾಕಾಣಿಕೆ ಹಾಗೂ ಹಂದಿ ಸಾಕಾಣಿಕೆಗೆ ಅರ್ಜಿಗಳನ್ನು ಆಹ್ವಾನಿಸಿದ್ದು ಆಸಕ್ತ ರೈತರು ಪಶು ವೈದ್ಯಕೀಯ ಸಂಸ್ಥೆಗಳೋನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಬೆಳ್ತಂಗಡಿ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಪಶು ಆಸ್ಪತ್ರೆ ಬೆಳ್ತಂಗಡಿ, ಧರ್ಮಸ್ಥಳ, ವೇಣೂರು, ಪಶು ಚಿಕಿತ್ಸಾಲಯ ಉಜಿರೆ, ಅಂಡಿಂಜೆ, ಕಳಂಬೊಟ್ಟು ನಾರಾವಿ, ಮಡಂತ್ಯಾರ್, ಬಾರ್ಯ, ಕೊಕ್ಕಡ, ಚಾರ್ಮಾಡಿಯಲ್ಲಿ ಸಂಪರ್ಕಿಸಬಹುದಾಗಿದೆ.
ಅದೇ ರೀತಿ ಪಶುಸಂಗೋಪನಾ ಇಲಾಖೆಯಿಂದ ಮೇವಿನ ಬೀಜಗಳನ್ನು ಆಯಾಯ ಸಂಸ್ಥೆಗಳಿಗೆ ವಿತರಿಸಲಾಗಿರುತ್ತದೆ. ಆಸಕ್ತ ರೈತರು ತಮ್ಮ ಹತ್ತಿರದ ಪಶುವೈದ್ಯ ಆಸ್ಪತ್ರೆ/ ಪಶು ಚಿಕಿತ್ಸಾಲಯ/ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಕೃಷಿ ಜಾಗದ ಪಹಣಿ ಪತ್ರ (ಆರ್‌ಟಿಸಿ) ಹಾಗೂ ಆಧಾರ್ ಕಾರ್ಡ್ ಪ್ರತಿ ಕೊಟ್ಟು ಮೇವಿನ ಬೀಜ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.