ಮುಂಬೈ ಮೂಲದ 26 ವರ್ಷದ ಚೇತನ್ ಅರ್ಚಿನೇಕರ್ ಎಂಬಾತ ಅಟೋರಿಕ್ಷಾ ಚಾಲಕನೊಂದಿಗೆ 2 ರೂ ಚಿಲ್ಲರೆ ವಿಷಯದಲ್ಲಿ ನಡೆಸಿದ ವಾಗ್ವಾದ ಸಾವಿನಲ್ಲಿ ಕೊನೆಯಾದ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಚೇತನ್ ಅರ್ಚಿನೇಕರ್ ಎಂಬ ಯುವಕ ಗೋವಾದಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ. ಮುಂಬೈ ವಿಮಾನ ನಿಲ್ದಾಣದಿಂದ ತನ್ನ ಮನೆಗೆ ಆಟೋ ಹತ್ತಿದ್ದಾನೆ. ತನ್ನ ಮನೆಗೆ ಮುಟ್ಟಿದ ನಂತರ ಆಟೋಚಾಲಕ ಗುಪ್ತಾ 172ರೂ ಪಾವತಿಸುವಂತೆ ಚೇತನ್ಗೆ ಹೇಳಿದ್ದನು. 2 ರೂ ಚಿಲ್ಲರೆ ಇಲ್ಲದ ಕಾರಣ 180ರೂ ನೀಡಿದ ಚೇತನ್ ಬಾಕಿ ೮ರೂ ಮರಳಿಸುವಂತೆ ಆಟೋ ಚಾಲಕನಲ್ಲಿ ಕೇಳಿಕೊಂಡಾಗ ರೂ. ಚಿಲ್ಲರೆ ಇಲ್ಲ ಎಂದು ಹೇಳಿದ್ದಾರೆ. ಇದು ವಾಗ್ವಾದಕ್ಕೆ ಕಾರಣವಾಗಿ ಕೊನೆಗೆ ಆಟೋ ಚಾಲಕ 180 ರೂ ಜೇಬಿಗಿಳಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆಕ್ರೋಶಗೊಂಡ ಚೇತನ್ ಆತನನ್ನು ಬೆನ್ನತ್ತಿ ಆಟೋದ ಸರಳು ಎಳೆಯುವ ವೇಳೆ ಆಯತಪ್ಪಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡರು. ಚೇತನ್ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.