ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮೊಳಹಳ್ಳಿ ಶಿವರಾಯರ 137 ಜನ್ಮಾಚರಣೆ

mundajeಕಕ್ಕಿಂಜೆ : ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಕ್ಕಿಂಜೆ ಶಾಖೆಯಲ್ಲಿ ಸಹಕಾರಿ ಪಿತಾಮಹ ಮೊಳ ಹಳ್ಳಿ ಶಿವರಾಯರ ೧೩೭ನೇ ಜನ್ಮಾಚರಣೆಯನ್ನು ಆ.4ರಂದು ಸಂಘದ ಕಛೇರಿಯಲ್ಲಿ ಆಚರಿಸಲಾಯಿತು.
ಶಿವರಾಯರ ಭಾವಚಿತ್ರಕ್ಕೆ ಕಕ್ಕಿಂಜೆ ಶಾಖೆಯ ವ್ಯವಸ್ಥಾಪಕ ಕಜೆ ವೆಂಕಟೇಶ್ವರ ಭಟ್ ಹಾಗೂ ನವೋದಯ ವಲಯ ಮೇಲ್ವಿಚಾರಕ ಉಮೇಶ್ ಆಚಾರ್ ಹಾರಾರ್ಪಣೆಗೈದು ಅವರ ಬಗ್ಗೆ ಪರಿಚಯಿಸಿದರು.
ಈ ಸಂದರ್ಭದಲ್ಲಿ ಕಕ್ಕಿಂಜೆ ಶಾಖೆಯ ಕರುಣಾಕರ ಗೌಡ, ಪುಷ್ಪಾವತಿ ನೆರಿಯ, ಪುಷ್ಪ ಮುಂಡಾಜೆ, ಸುಶ್ಮಾ, ಇಸ್ಮಾಯಿಲ್, ಸಂಜೀವ, ಶ್ರುತಿ ಅಲ್ಲದೆ ಗ್ರಾಹಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.