ಚಲನಚಿತ್ರ ಕಲಾವಿದೆ ಶೀತಲ್ ನಾಯಕ್‌ಗೆ ಸನ್ಮಾನ

aladangady amantrana shithala nayak beti copyಅಳದಂಗಡಿ: ಮಂಗಳೂರಿನ ಪ್ರಕಾಶ್ ಪಾಂಡೇಶ್ವರ ನಿರ್ಮಾಣದ ತುಳು ಚಲನಚಿತ್ರದ ನಾಯಕಿ ಶೀತಲ್ ನಾಯಕ್ ಅಳದಂಗಡಿಯ ಆಮಂತ್ರಣ ಕಚೇರಿಗೆ ಜು 31ರಂದು ಭೇಟಿ ನೀಡಿ ಚಲನಚಿತ್ರಕ್ಕೆ ಸಹಕಾರ ಕೇಳಿದರು. ಈ ಸಂದರ್ಭ ಇವರನ್ನು ಅಳದಂಗಡಿ ಲಯನ್ಸ್ ಕ್ಲಬ್ ಮತ್ತು ಆಮಂತ್ರಣ ಪರಿವಾರದಿಂದ ಸನ್ಮಾನಿಸಲಾಯಿತು. ಅಳದಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಸದಾನಂದ ಪೂಜಾರಿ ಉಂಗಿಲಬೈಲು ಮತ್ತು ಆಮಂತ್ರಣ ಪತ್ರಿಕೆಯ ಸಂಪಾದಕ ಹಾಗೂ ಲಯನ್ಸ್ ಕ್ಲಬ್ ಕಾರ‍್ಯದರ್ಶಿ ಲ| ವಿಜಯ ಕುಮಾರ್ ಜೈನ್ ಗೌರವಿಸಿದರು. ಲಯನ್ಸ್ ಕ್ಲಬ್ ಸದಸ್ಯರಾದ ಲ| ಸುಪ್ರೀತ್ ಜೈನ್, ಲ|ಸುಕೇಶ್ ಜೈನ್, ಲ| ಹರೀಶ ಅಚಾರ್ಯ, ಬೇಬಿ|ಯಶ್ವಿ, ಕಿರಣ್ ಕುಮಾರ್ ಜ್ಯೋತಿಕಾ ಸ್ಟುಡಿಯೋ, ಸುಧೇಶ್ ಜೈನ್ ಮಕ್ಕಿಮನೆ, ಚೋಟಾ ರಿಪೋರ್ಟರ್ ಶ್ರೇಯಾ ದಾಸ್, ಸಾಕ್ಷಿ ಗುರುಪುರ, ಮಿಥುನ್ ಮಂಗಳೂರು ಭಾಗವಹಿಸಿದ್ದರು. ಈ ಸಂದರ್ಭ ಆಮಂತ್ರಣ ಪತ್ರಿಕೆಯ ಶಿರ್ಷಿಕೆ ಲೋಗೊವನ್ನು ಚಿತ್ರದ ನಾಯಕಿ ಶೀತಲ್ ನಾಯಕ್ ಅವರಿಗೆ ನೀಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.