ದಲಿತರ ಮೇಲಾದ ದಾಳಿಯ ವಿರುದ್ಧ ಬೆಳ್ತಂಗಡಿಯಲ್ಲಿ ಪ್ರತಿಭಟನೆ

cpim prathibatane copy  ಬೆಳ್ತಂಗಡಿ : ದಲಿತರ ಮೇಲಿನ ದಾಳಿಯು ಸ್ವಾರ್ಥ ಸಾಧಕರ ಅನಾಗರಿಕ ಕೃತ್ಯಗಳಾಗಿವೆ. ಸಂಘಪರಿವಾರದ ದುರಾಲೋಚನೆಗೆ ಬಲಿಯಾದ ಯುವಕರು ಇಂತಹ ಅನಾಗರಿಕ ವರ್ತನೆಯಿಂದ ಕ್ರಿಮಿನಲ್‌ಗಳಾಗಿ ಇಂತಹ ಹೇಯ ಕೃತ್ಯವೆಸಗುತ್ತಾರೆ ಎಂದು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಹೇಳಿದರು.
ಅವರು ಜು.29 ರಂದು ದಲಿತ ಹಕ್ಕು ಸಮಿತಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಡಿ.ವೈ.ಎಫ್.ಐ. ಸಂಘಟನೆಗಳ ಬೆಳ್ತಂಗಡಿ ತಾಲೂಕು ಸಮಿತಿಗಳ ಜಂಟೀ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ನಡೆದ ದಲಿತರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ನಡೆಸಿದ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ಸತ್ತ ದನಗಳ ಚರ್ಮ ತೆಗೆಯುವ ವೃತ್ತಿಯನ್ನೇ ಮಾಡುವ ದಲಿತರ ಚರ್ಮ ಸುಲಿದ ಸಂಘಪರಿವಾರದ ಹೇಯಕೃತ್ಯಗಳನ್ನು ಮಾನವೀಯತೆ ಇರುವ ನಾವು ಖಂಡಿಸಲೇ ಬೇಕು. ಜಾತಿ ಪದ್ದತಿ ನಾಶ ಆಗುವ ಹೋರಾಟಕ್ಕೆ ಸಿದ್ದರಾಗಬೇಕು. ಇಲ್ಲವೆಂದರೆ ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ನಾಶ ಮಾಡಲು ಈ ಕೋಮುವಾದಿಗಳು ಮುಂದಾಗುತ್ತಾರೆ ಎಂದರು.
ಮುಖ್ಯ ಅತಿಥಿಗಳಾಗಿ ಡಿ.ವೈ.ಎಫ್.ಐ. ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲು ಅವರು ಮಾತಾಡುತ್ತಾ ದಲಿತರಾದ ವಿಠಲ ಮಲೆಕುಡಿಯ, ಸುಂದರ ಮಲೆಕುಡಿಯರ ಮೇಲೆ ನಡೆದ ದಾಳಿ ಈ ತಾಲೂಕಿನಲ್ಲಿ ಪ್ರತ್ಯಕ್ಷವಾಗಿ ಇದೆ. ಸುಂದರ ಮಲೆಕುಡಿಯರಿಗೆ ಒಂದು ವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ. ಭೂಮಿಯ ಹಕ್ಕುಗಳನ್ನು ದಲಿತರಿಗೆ ನೀಡುವಲ್ಲಿ ವಿಫಲವಾದ ಸರಕಾರಗಳು, ದಲಿತರ ಮೇಲಿನ ದಾಳಿಯನ್ನು ನಗಣ್ಯ ಮಾಡುತ್ತಿದೆ ಎಂದವರು ಆರೋಪಿಸಿ ದರು. ಸಮಾಜ ಪರಿವರ್ತನಾ ವೇದಿಕೆಯ ಮುಖಂಡರಾದ ಡೀಕಯ್ಯ ಮಾತಾಡುತ್ತಾ ಮನುವಾದ, ಭ್ರಾಹ್ಮಣಶಾಹಿಗಳಿಂದ ದಲಿತ ಹಾಗೂ ಶೂದ್ರ ಜನಾಂಗ ಬಿಡುಗಡೆಯಾಗದೆ ನಮ್ಮ ಸಂವಿಧಾನದ ಉಳಿಸಲು ಅಸಾದ್ಯ ಎಂದರು. ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಯ ರಾಜ್ಯ ಸಹ ಸಂಚಾಲಕ ವಿಠಲ ಮಲೆಕುಡಿಯ, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಹಾಗೂ ಪಟ್ರಮೆ ಗ್ರಾಮ ಪಂಚಾಯತು ಸದಸ್ಯರೂ, ಸಿಪಿಐ(ಎಂ) ಮುಖಂಡರೂ ಆದ ಶ್ಯಾಮರಾಜ್ ಪಟ್ರಮೆ ಸಂದರ್ಬೋಚಿತವಾಗಿ ಮಾತಾಡಿದರು. ಸಿಪಿಐ(ಎಂ) ತಾಲೂಕು ಮುಖಂಡರುಗಳಾದ ಜಯರಾಮ ಮಯ್ಯ, ನೆಬಿಸಾ, ದಲಿತ ಹಕ್ಕುಗಳ ಸಮಿತಿಯ ತಾಲೂಕು ಮುಖಂಡರುಗಳಾದ ಬಾಬು ಕೊಯ್ಯೂರು, ಶೇಖರ ವೇಣೂರು, ಕರ್ತ, ಬಾಬು ಕೊಕ್ಕಡ, ಡಿ.ವೈ.ಎಫ್.ಐ. ಮುಖಂಡರುಗಳಾದ ಧನಂಜಯ ಗೌಡ, ವಸಂತ ಟೈಲರ್, ಮಹಮ್ಮದ್ ಅನಸ್, ಯಮುನಾ, ರಾಮಚಂದ್ರ, ಸಿಐಟಿಯು ಮುಖಂಡರುಗಳಾದ ಜಯಶ್ರೀ, ಇಂದಿರಾ, ಪುಷ್ಪಾ, ಮೀನಾಕ್ಷಿ, ಕುಸುಮಾವತಿ, ಗಿರಿಜ, ಮೊದಲಾದವರು ಇದ್ದರು. ದಲಿತ ಹಕ್ಕು ಸಮಿತಿಯ ತಾಲೂಕು ಕಾರ್ಯದರ್ಶಿ ಶ್ರೀಮತಿ ಈಶ್ವರಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಿಪಿಐ(ಎಂ) ತಾಲೂಕು ಸಮಿತಿ ಸದಸ್ಯೆ ರೋಹಿಣಿ ಮನವಿ ಓದಿದರು. ಡಿ.ವೈ.ಎಫ್.ಐ. ಮುಖಂಡರಾದ ಲಾರೆನ್ಸ್ ಧನ್ಯವಾದ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.