ಮಕ್ಕಳಿಗೆ ಉತ್ತಮ ಶಿಕ್ಷಣ ಪೋಷಕರ ಗುರಿಯಾಗಿರಬೇಕು : ಬಂಗೇರ

Advt_NewsUnder_1
Advt_NewsUnder_1
Advt_NewsUnder_1

Jamyath palah copyಜಮಿಯ್ಯತುಲ್  ಫಲಾಹ್ : ವಿದ್ಯಾರ್ಥಿ ವೇತನ ವಿತರಣೆ-ಪ್ರತಿಭಾ ಪುರಸ್ಕಾರ

  ಬೆಳ್ತಂಗಡಿ : ಜಮಿಯ್ಯತುಲ್ ಫಲಾಹ್ ದ.ಕ ಮತ್ತು ಉಡುಪಿ ಜಿಲ್ಲೆ ಇದರ ಆಶ್ರಯದಲ್ಲಿ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಷ್ಕಾರ ಹಾಗೂ ಶೈಕ್ಷಣಿಕ ಮಾಹಿತಿ ಶಿಬಿರ ಜು.30ರಂದು ಬೆಳ್ತಂಗಡಿ ಜಮಿಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಜರುಗಿತು.
ವಿದ್ಯಾರ್ಥಿ ವೇತನವನ್ನು ಬೆಳ್ತಂಗಡಿ ಕ್ಷೇತ್ರದ ಶಾಸಕ ಕೆ. ವಸಂತ ಬಂಗೇರ ಅವರು ವಿತರಿಸಿ ಮಾತನಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಎಲ್ಲಾ ಸಮಾಜದ ಪೋಷಕರ ಧ್ಯೇಯವಾಗಿರಬೇಕು, ವಿದ್ಯಾರ್ಥಿಗಳು ಜೀವನದಲ್ಲಿ ಸರಿಯಾದ ಗುರಿಯನ್ನು ಇಟ್ಟುಕೊಂಡು ಇದನ್ನು ಸಾಧಿಸಬೇಕು. ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಬೇಕು. ಮುಸ್ಲಿಂ ಸಮಾಜದವರು ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಹೆಣ್ಣುಮಕ್ಕಳು ಕೂಡಾ ಉನ್ನತ ಶಿಕ್ಷಣವನ್ನು ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಮಿಯ್ಯತುಲ್ ಫಲಾಹ್ ಜಿಲ್ಲಾಧ್ಯಕ್ಷ ಹಾಜೀ ಅಬ್ದುಲ್ ಲತೀಫ್ ಸಾಹೇಬ್ ಅವರು ಮಾತನಾಡಿ ತಾಲೂಕಿನಲ್ಲಿ ಜಮಿಯ್ಯತುಲ್ ಫಲಾಹ್ ಆರಂಭಿಸಿ 28 ವರ್ಷಗಳಾಗುತ್ತಿದೆ. ಈ ಸಂಸ್ಥೆ ಮುಸ್ಲಿಂ ಸಮಾಜದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ. ಮಕ್ಕಳ ಶಿಕ್ಷಣಕ್ಕೆ ಸಹಾಯಧನ, ಶಿಕ್ಷಣ ಪ್ರೋತ್ಸಾಹ ಕಾರ್ಯಕ್ರಮಗಳನ್ನು ನಡೆಸಿದೆ. ೨ಸಾವಿರ ಜನರಿಗೆ ರೂ.2ಸಾವಿರದ ರಂಜಾನ್ ಕಿಟ್ ವಿತರಣೆ, ಆರೋಗ್ಯ ಶಿಬಿರ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿದೆ ಎಂದು ತಿಳಿಸಿದರು.
ಪ್ರತಿಭಾ ಪುರಸ್ಕಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಸುಮಂಗಲಾ ನೆರವೇರಿಸಿ ಮಾತನಾಡಿ ಮುಸ್ಲಿಂ ಸಮಾಜದ ಹೆಣ್ಣು ಮಕ್ಕಳು ಇಂದು ಶಿಕ್ಷಣ ಕಲಿಯಲು ಮುಂದೆ ಬರುತ್ತಿದ್ದಾರೆ. ಈ ಸಮಾಜದಲ್ಲಿ ಪರಿವರ್ತನೆಗಳು ಆಗುತ್ತಿದೆ ಎಂದು ಹೇಳಿದರು. ವಿಶೇಷ ವಿದ್ಯಾರ್ಥಿಗಳಿಗೆ ಪುರಸ್ಕಾರ ನೆರವೇರಿಸಿ ಮಾತನಾಡಿದ ಪತ್ರಕರ್ತರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಅವರು ಮಾತನಾಡಿ ಜಮಿಯ್ಯತುಲ್ ಫಲಾಹ್ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು ಅಭಿನಂದನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಮಿಯ್ಯತುಲ್ ಫಲಾಹ್ ತಾಲೂಕು ಘಟಕದ ಅಧ್ಯಕ್ಷ ಅಬ್ಬೋನು ಮದ್ದಡ್ಕ ಅವರು ಮಾತನಾಡಿ ಜಮಿಯ್ಯತುಲ್ ಫಲಾಹ್ ಅನೇಕ ವರ್ಷಗಳಿಂದ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಇಲ್ಲಿ ವಿದ್ಯಾರ್ಥಿ ಪ್ರೋತ್ಸಾಹ ಧನ ಪಡೆದವರು ಈ ಸಂಸ್ಥೆಯನ್ನು ಮರೆಯಬಾರದು, ನೀವು ಉದ್ಯೋಗ ಪಡೆದ ನಂತರ ನಿಮ್ಮಿಂದಲೂ ಇಂತಹ ಕಾರ್ಯ ನಡೆಯಬೇಕು ಎಂದು ಸಲಹೆಯಿತ್ತರು.
ವೇದಿಕೆಯಲ್ಲಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಪಡ್ಪು, ಶಿಕ್ಷಣ ಸಮನ್ವಯಾಧಿಕಾರಿ ತಾರಾಕೇಸರಿ, ಜತೆ ಕಾರ್ಯದರ್ಶಿ ಉಮ್ಮರ್ ಅಹಮ್ಮದ್, ಸಂಘಟನಾ ಕಾರ್ಯದರ್ಶಿ ಕಾಸಿಂ ಮಲ್ಲಿಗೆ ಮನೆ, ಪತ್ರಿಕಾ ಕಾರ್ಯದರ್ಶಿ ಕಾಸಿಂ ಪದ್ಮುಂಜ ಉಪಸ್ಥಿತರಿದ್ದರು. ಕೋಶಾಧಿಕಾರಿ ಎಚ್. ಆಲಿಯಬ್ಬ ಪುಲಾಬೆ ಸ್ವಾಗತಿಸಿದರು. ಉಪಾಧ್ಯಕ್ಷ ಉಮ್ಮರ್ ಕುಂಞಿ ನಾಡ್ಜೆ ಕಾರ್ಯಕ್ರಮ ನಿರೂಪಿಸಿ, ಖಾಲಿದ್ ಪುಲಾಬೆ ಧನ್ಯವಾದವಿತ್ತರು. ಬಳಿಕ ಸುಮಾರು ರೂ.೧ಲಕ್ಷದಷ್ಟು ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮಾಹಿತಿ ಕೇಂದ್ರದ ಸಂಯೋಜಕ ಅಬ್ದುಲ್ ಖಾದರ್ ನಾವೂರು ಶೈಕ್ಷಣಿಕ ಮಾಹಿತಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.