ಜನೋಪಯೋಗಿ ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

           bdy taluk panchaygath 1 copyಮಂಜೂರಾದ ಹುದ್ದೆ -129                                   ಭರ್ತಿಯಾದ ಹುದ್ದೆ-90                                      ಖಾಲಿ ಇರುವ ಹುದ್ದೆ-39

  ಅಚ್ಚು ಮುಂಡಾಜೆ

  ಮನುಷ್ಯರ ಹುಟ್ಟು ಸಾವಿನ ಮಧ್ಯೆ ಒಂದಿಲ್ಲೊಂದು ಕಾರಣಕ್ಕೆ ಜನರಿಗೆ ಅಗತ್ಯವಾಗಿ ಬೇಕಾಗಿರುವ ಏಕೈಕ ಇಲಾಖೆಯೇ ಕಂದಾಯ ಇಲಾಖೆ. ಆರೋಗ್ಯ, ಮೆಸ್ಕಾಂ, ಟೆಲಿಕಾಂ, ಮುಂತಾದ ಮೂಲಭೂತ ಸೌಕರ್ಯ ನೀಡುವ ಇಲಾಖೆಗಳ ಹೊರತಾಗಿ ನಾವು ನಮ್ಮ ಜೀವಮಾನದಲ್ಲಿ ಇತರ ಯಾವುದಾದರೊಂದು ಇಲಾಖೆಗೆ ಒಮ್ಮೆಯೂ ಭೇಟಿ ಮಾಡದೆ ಜೀವನ ಸಾಗಿಸುತ್ತೇನೆ ಎಂದು ಹೋಗದೇ ಬದುಕು ಸಾಗಿಸಬಹುದು. ಆದರೆ ಕಂದಾಯ ಇಲಾಖೆಯ ಸಂಪರ್ಕವೇ ಇಲ್ಲದೆ ಬದುಕು ಅಸಾಧ್ಯವೆಂದರೂ ತಪ್ಪಲ್ಲ. ಇಲ್ಲಿ ಜನನ ಪ್ರಮಾಣ ಪತ್ರದಿಂದ ಮೊದಲ್ಗೊಂಡು ಅಂತಿಮವಾಗಿ ಮರಣ ಪ್ರಮಾಣ ಪತ್ರ, ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ವ್ಯಕ್ತಿಗೆ ಭೂಮಿಯ ರೂಪದಲ್ಲಿ ಆಸ್ತಿ ಇದ್ದಲ್ಲಿ ಮರಣದ ನಂತರವೂ ಅನಿವಾರ್ಯವಾಗಿ ಎಡತಾಕಲೇ ಬೇಕಾದ ಇಲಾಖೆ ಇದ್ದರೆ ಅದು ಕಂದಾಯ ಇಲಾಖೆ ಮಾತ್ರ. ಆದರೆ ಅಷ್ಟೊಂದು ಜನೋಪಯೋಗಿ ಯಾಗಿರುವ ಇಲಾಖೆ ಇಂದು ಸಿಬ್ಬಂದಿ ಕೊರತೆಯಿಂದ ಸೊರಗಿ ಹೋಗಿದೆ. ಬೆಳ್ತಂಗಡಿ ತಾಲೂಕಿನಲ್ಲಂತೂ ಇರುವ ಸಿಬ್ಬಂದಿ ವ್ಯವಸ್ಥೆಯ ನಡುವೆ ಹೊಂದಾಣಿಕೆ ಮಾಡಿಕೊಳ್ಳಲು ಜನ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಆಡಳಿತ ಶಾಖೆ, ಆಹಾರ ಶಾಖೆ ಮತ್ತು ಭೂಮಾಪನಾ ಶಾಖೆಗಳು ಪ್ರಮುಖವಾಗಿ ಕಂದಾಯ ಇಲಾಖೆಯ ಅಡಿಯಲ್ಲಿ ಬರಲಿದ್ದು ಇವು ಮೂರೂ ಕೂಡ ಜನತೆಗೆ ಅನಿವಾರ್ಯವಾದ ಇಲಾಖೆಗಳೇ ಆಗಿವೆ. ಇಲ್ಲಿ ಒಟ್ಟು ಇರಬೇಕಾದ 129 ಹುದ್ದೆಗಳ ಪೈಕಿ 60 ಹುದ್ದೆಗಳು ಮಾತ್ರ ಭರ್ತಿ ಮಾಡಲಾಗಿದ್ದು ಜನಪ್ರಯೋಜನಕಾರಿಯಾಗಿರುವ ೩೯ ಹುದ್ದೆಗಳು ಖಾಲಿಯಾಗಿವೆ.
ಖಾಲಿ ಇರುವ ಹುದ್ದೆಗಳು ಯಾವ್ಯಾವುವು?
ತಹಶಿಲ್ದಾರ್ ಗ್ರೇಡ್-2 ರಲ್ಲಿ ಮಂಜೂರಾಗಿರುವ 1- ಹುದ್ದೆ ಖಾಲಿಯಾಗಿದೆ. ಶಿರಸ್ತೇದಾರರು 3 ಹುದ್ದೆಯಿದ್ದು ಅದರಲ್ಲಿ 2 ಖಾಲಿಯಾಗಿದೆ. ವೇಣೂರು ಮತ್ತು ಕೊಕ್ಕಡ ನಾಡ ಕಚೇರಿಯಲ್ಲಿ 2 ಉಪತಹಶಿಲ್ದಾರ್ ಇರಬೇಕಾಗಿದ್ದು ಎರಡೂ ಖಾಲಿಯಾಗಿದೆ. ಪ್ರಥಮ ದರ್ಜೆ ಸಹಾಯಕರ ಹುದ್ದೆಯಲ್ಲಿ 7ರ ಪೈಕಿ 6 ಇದ್ದು 1 ಖಾಲಿಯಾಗಿದೆ.
ದ್ವಿತೀಯ ದರ್ಜೆ ಸಹಾಯಕರು 12 ಇರಬೇಕಾದಲ್ಲಿ ಕೇವಲ 6 ಮಾತ್ರ ಇದ್ದು 6 ಖಾಲಿಯಾಗಿದೆ. 48 ಗ್ರಾಮ ಕರಣಿಕರು ಬೇಕಾಗಿದ್ದು ಈ ಪೈಕಿ ಭೂಮಿ ಕೇಂದ್ರ ಬೆಳ್ತಂಗಡಿ, ಕುದ್ಯಾಡಿ ಗ್ರಾಮ, ಇಂದಬೆಟ್ಟು ಗ್ರಾಮ, ಮಚ್ಚಿನ ಗ್ರಾಮ ಮತ್ತು ಬೆಳಾಲು ಇಲ್ಲಿ ಸೇರಿ ಒಟ್ಟು 5 ಹುದ್ದೆ ಖಾಲಿಯಾಗಿದೆ. ಬೆರಳಚ್ಚುಗಾರರು 3 ಇರಬೇಕಾಗಿದ್ದು ಇಲ್ಲಿ 1 ಹುದ್ದೆ ಖಾಲಿಯಾಗಿದೆ. ತಹಶಿಲ್ದಾರರ ವಾಹನಕ್ಕೆ ಚಾಲಕ ಓರ್ವ ಬೇಕಾಗಿದ್ದು ಈ ಹುದ್ದೆ ಖಾಲಿಯಾಗಿದೆ. ಇಲಾಖೆಯ ಇತರ ವಿಭಾಗಗಳಿಂದ ಚಾಲನಾ ಪರವಾನಿಗೆ ಇರುವವರನ್ನು ಎರವಲು ಪಡೆದು ಅಥವಾ ನಿಯೋಜನೆಯಲ್ಲಿ ಇಟ್ಟುಕೊಳ್ಳಬೇಕಾದ ಸ್ಥಿತಿ ಇದೆ.
ದಫೇದಾರ್ 1 ಹುದ್ದೆ ಖಾಲಿಯಾಗಿದೆ. ಎಟೆಂಡರ್ 1 ಹುದ್ದೆ ಖಾಲಿಯಾಗಿದೆ. ಡಿ ಗ್ರೂಪ್ ನೌಕರರು ಒಟ್ಟು 10 ಇರಬೇಕಾದಲ್ಲಿ ೪ ಮಂದಿ ಮಾತ್ರ ಇದ್ದಾರೆ.
ಆಹಾರ ಇಲಾಖೆಯಲ್ಲಿ ಯಾರೂ ಇಲ್ಲ??!!
ಆಹಾರ ಇಲಾಖೆಯಲ್ಲಿ ಪ್ರಮುಖವಾಗಿರುವ ಆಹಾರ ಶಿರಸ್ತೇದಾರರ ಹುದ್ದೆ ಸೇರಿದಂತೆ ಇರಬೇಕಾದ ಐದು ಮಂದಿಯಲ್ಲಿ ಯಾರೂ ಇಲ್ಲ..
ಇಬ್ಬರು ಇರಬೇಕಾದ ಆಹಾರ ನಿರೀಕ್ಷಕರ ಹುದ್ದೆಯೂ ಖಾಲಿಯಾಗಿದೆ. ದ್ವಿತೀಯ ದರ್ಜೆ ಸಹಾಯಕ ಹುದ್ದೆ ಒಂದೇ ಇದ್ದು ಅದೂ ಖಾಲಿಯಿದೆ.
ಸರ್ವೆ ಇಲಾಖೆಯಲ್ಲಿ ೩೨ ಸರ್ವೆಯರ್ ಇರಬೇಕಾದಲ್ಲಿ ಇರುವುದು ೨೩ ಮಾತ್ರ :
ತಾಲೂಕಿನಲ್ಲಿರುವ ಇಷ್ಟೂ ಹೆಕ್ಟೇರ್ ಭೂಮಿಯನ್ನು ಅಳತೆ ಮಾಡುವುದು, ಸ್ಕೆಚ್ ತಯಾರಿಸುವುದು, 11 ಇ ಕ್ರೀಯೆ ನಡೆಸುವುದು, ಪೋಡಿ ಪ್ರಕ್ರೀಯೆ ಇಷ್ಟೆಲ್ಲಾ ಮಾಡಲು ಪ್ರಮುಖವಾಗಿ ಬೇಕಾಗಿರುವ ಸರ್ವೆ ಇಲಾಖೆಯಲ್ಲಿ ಪರ್ಯಾವೇಕ್ಷಕರು 3 ಹುದ್ದೆ ಇದ್ದು  ಅದರಲ್ಲಿ ಓರ್ವ  ಮಾತ್ರ ಇದ್ದಾರೆ.2 ಹುದ್ದೆ ಖಾಲಿಯಿದೆ. ಭೂಮಾಪಕರು 16 ರಲ್ಲಿ 15 ಮಂದಿ ಇದ್ದು ಒಂದು ಹುದ್ದೆ ಖಾಲಿಯಿದೆ. ಬಾಂದ್ ಜವಾನ ಹುದ್ದೆ 10 ಪೈಕಿ ೪ ಮಂದಿ ಮಾತ್ರ ಇದ್ದು 6 ಹುದ್ದೆ ಖಾಲಿಯಾಗಿದೆ. ಹೀಗೆ ಎಲ್ಲಿ ನೋಡಿದರಲ್ಲಿ ಸಿಬ್ಬಂದಿ ಕೊರತೆಯೇ ಕಾಡುತ್ತಿದೆ.
ಆರ್‌ಟಿಸಿ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರ :
ಇದುವರೆಗೆ ಆರ್‌ಟಿಸಿ ಪಡೆಯಬೇಕಾದರೆ ತಾಲೂಕಿನ ಜನತೆ ತಾಲೂಕಿನಲ್ಲಿದ್ದ 2 ನಾಡಕಚೇರಿಗಳನ್ನೇ ಸಂಪರ್ಕಿಸಬೇಕಿತ್ತು. ದಿನಗೂಲಿ ಅಥವಾ ಕೃಷಿ ಚಟುವಟಿಕೆಗೆ ರಜೆ ಹಾಕಿ ಬೆಳಗ್ಗಿನಿಂದ ಒಮ್ಮೊಮ್ಮೆ ಸಂಜೆಯ ವರೆಗೂ ಕಾದು ಕಾದು ಬೆಂಡಾಗಬೇಕಿತ್ತು. ಆದರೆ ಈಗ ಗ್ರಾ.ಪಂ. ಗಳಲ್ಲಿ ಆರ್‌ಟಿಸಿ ವಿತರಣೆಗೆ ವ್ಯವಸ್ಥೆ ಜಾರಿಯಾಗಿರುವುದರಿಂದ ಈ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರ ದೊರೆತಿದೆ. ತಾಲೂಕಿನ ದೂರದ ಗ್ರಾಮಗಳಿಂದ ಬರುತ್ತಿದ್ದವರು ಒಂದೊಮ್ಮೆ ಇಡೀ ದಿನ ಕಾದು ಕೆಲವೊಮ್ಮೆ ಕಂಪ್ಯೂಟರ್‌ನಲ್ಲಿ ತಾಂತ್ರಿಕ ದೋಷ, ವಿದ್ಯುತ್ ಸಮಸ್ಯೆ ಎದುರಾದರೆ ಮತ್ತೆ ಮರುದಿನ ಬರಬೇಕಾದ ದುಸ್ಥಿತಿ ಇತ್ತು.
ನಾಡ ಕಚೇರಿ, ಕಂದಾಯ ನಿರೀಕ್ಷಕರ ಲಭ್ಯತೆ ಸಮಸ್ಯೆ : ಕೊಕ್ಕಡ ನಾಡ ಕಚೇರಿಗೆ ಸಂಬಂಧಿಸಿದ ಗ್ರಾಮಗಳು ತಣ್ಣೀರುಪಂತ, ಕಲ್ಲೇರಿ, ಮಚ್ಚಿನ, ಪಾರೆಂಕಿ, ಪುತ್ತಿಲ, ಕರಾಯ, ತೆಕ್ಕಾರು, ಬಾರ್ಯ, ಕುಪ್ಪೆಟ್ಟಿ ಮೊದಲಾದ ಪ್ರದೇಶಗಳು ಸೇರಿಕೊಂಡಿರುವುದರಿಂದ ಈ ಭಾಗದ ಜನರು ಯಾವುದೇ ಪ್ರಮಾಣ ಪತ್ರಗಳಿಗೆ ದೂರದ ಬೆಳ್ತಂಗಡಿಗೆ ಬಂದು ಧರ್ಮಸ್ಥಳ ಮೂಲಕ ಸುತ್ತುಬಳಸಿ ಕೊಕ್ಕಡಕ್ಕೆ ಹೋಗಬೇಕಾದ ಪರಿಸ್ಥಿತಿ ಇಂದಿಗೂ ಮುಂದುವರಿದಿದೆ. ಈ ಬಗ್ಗೆ ಸರಕಾರದ ಗಮನಸೆಳೆದು ಕಲ್ಲೇರಿಯಲ್ಲಿ ಅಟಲ್‌ಜಿ ಜನಸ್ನೇಹಿ ಕೇಂದ್ರ ತೆರೆಯುವಂತೆ ಮಾಡುತ್ತಿರುವ ಪ್ರಯತ್ನ ಆಮೆಗತಿಯಲ್ಲಿ ನಡೆಯುತ್ತಿದೆ. ಆದರೆ ಪರಿಹಾರ ಯಾವಾಗ ಲಭಿಸೀತು ಎಂಬುದರ ಬಗ್ಗೆ ಇನ್ನೂ ನಿಖರವಾದ ಮಾಹಿತಿಯಿಲ್ಲ. ಈ ನಡುವೆ ಜಿ.ಪಂ. ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಕೆ.ಕೆ. ಶಾಹುಲ್ ಹಮೀದ್ ಅವರು, ಜಿಲ್ಲಾಡಳಿತಕ್ಕೆ ಮನವಿ ಮಾಡಿ ಇದೀಗ ಕೊಕ್ಕಡದ ಕಂದಾಯ ನಿರೀಕ್ಷಕರು ವಾರಕ್ಕೆ ಮೂರು ದಿನ ಬೆಳ್ತಂಗಡಿ ತಾಲೂಕು ಕಚೇರಿಯಲ್ಲೇ ಲಭ್ಯರಿರುವಂತೆ ಮಾಡಿದ್ದಾರೆ.
ಎಳನೀರು ಭಾಗದವರಿಗೆ ತಾಲೂಕು ಕಚೇರಿಗೆ 115 ಕಿ.ಮೀ??!!
ಮಲವಂತಿಗೆ ಗ್ರಾಮದ ಎಳನೀರು, ಗುತ್ಯಡ್ಕ, ಉಕ್ಕುಡ, ಬಡಾಮನೆ ಪ್ರದೇಶವಾಸಿಗಳು ಬೌಗೋಳಿಕ ವ್ಯಾಪ್ತಿಯೊಳಗಡೆ ಬೆಳ್ತಂಗಡಿ ತಾಲೂಕಿನವರು. ವ್ಯಾವಹಾರಿಕವಾಗಿ ಅವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ವ್ಯಾಪ್ತಿಯವರು. ಕಂದಾಯ ಇಲಾಖೆಯ ಏನೇ ಕೆಲಸ ಆಗಬೇಕಿದ್ದರೆ ಅವರು ಒಂದೋ ಕಾಲ್ನಡಿಗೆಯಲ್ಲಿ ಸುಮಾರು 10 ಕಿ.ಮೀಟರ್‌ನಷ್ಟು ಕ್ರಮಿಸಿ, ಸುಪ್ರಿಂ ಕೋರ್ಟ್‌ನ ಆದೇಶವನ್ನೂ ಮೀರಿ ರಾಷ್ಟ್ರೀಯ ಉದ್ಯಾನವನದೊಳಗಿನಿಂದ ಬಂದು ತಾಲೂಕು ಕೇಂದ್ರಕ್ಕೆ ಬರಬೇಕು. ಅಥವಾ ಸಂಸೆಯ ಮೂಲಕ ಕುದುರೆಮುಖ ದಾಟಿ ಬಜಗೊಳಿ ಆಗಿ ನಾರಾವಿ- ಗುರುವಾಯನಕೆರೆ ಮೂಲಕ 115 ಕಿ.ಮೀ. ಕ್ರಮಿಸಿ ಬೆಳ್ತಂಗಡಿಗೆ ಬರಬೇಕು.
ಆದಾಯ, ಜಾತಿ ಪ್ರಮಾಣಪತ್ರ ಸಮಸ್ಯೆ :
ತಾಲೂಕು ಕಚೇರಿಯ ಜನಸ್ನೇಹಿ ಕೇಂದ್ರದಲ್ಲಿ ಜಾತಿ -ಆದಾಯ ಪ್ರಮಾಣ ಪತ್ರಗಳಿಗಾಗಿ ಅರ್ಜಿಗಳನ್ನು ತಯಾರಿಸಿ, ಸಂಬಂಧಿಸಿದ ದಾಖಲೆಗಳನ್ನು ಅಡಕವಾಗಿಟ್ಟು ಗ್ರಾಮ ಕರಣಿಕರಿಂದ ವರದಿ ಮಾಡಿಸಿ ಬಳಿಕ ನೀಡಿ ಹಣ ಪಾವತಿಸಿ ರಶೀದಿ ಪಡೆದುಕೊಳ್ಳಬೇಕಿದೆ. ಶಾಲಾ ಕಾಲೇಜು ಪ್ರವೇಶಾತಿ, ವಿದ್ಯಾರ್ಥಿ ವೇತನದ ಸಮಯ, ಹಾಸ್ಟೆಲ್ ಸೇರಿದಂತೆ ಇತರ ಅವಕಾಶಗಳ ಲಭ್ಯತೆಗೆ ಅರ್ಜಿ ನೀಡುವ ಸಂಧರ್ಭಗಳಲ್ಲಂತೂ ಪ್ರಮಾಣಪತ್ರ ಅತ್ಯಾವಶ್ಯಕವಾಗಿದ್ದು ಅದಕ್ಕೆ ಜನಪಡುತ್ತಿರುವ ಪಾಡು ನೋಡಿದರೆ ಶತ್ರುವಿಗೂ ಬೇಡ.
ದಲ್ಲಾಳಿಗಳ ಹಾವಳಿ, ಲಂಚ ನೀಡದೆ ಕೆಲಸವಾಗುವುದಿಲ್ಲ : ಜನರ ಆರೋಪ
ಇತರ ಇಲಾಖೆಗೆ ಹೋಲಿಸಿದರೆ ಕಂದಾಯ ಇಲಾಖೆಯ ಸಿಬ್ಬಂದಿ ಕೊರತೆ ಜನರಿಗೆ ಸಮಸ್ಯೆಯಾಗುವ ಮಟ್ಟದಲ್ಲಿ ಇಲ್ಲ. ಆದರೆ ತಾಲೂಕು ಕಚೇರಿಯಲ್ಲಿ ಲಂಚ ನೀಡದೆ ಕೆಲಸಗಳು ಆಗುತ್ತಿಲ್ಲ ಎಂದು ಜನ ದೂರುತ್ತಾರೆ. ದಲ್ಲಾಳಿಗಳ ಮೂಲಕ ಕಚೇರಿಗೆ ಹೋದರೆ ಆಗದ ಕೆಲಸಗಳೂ ಸಕಾಲದಲ್ಲಿ ಆಗುತ್ತದೆ!! ಎಂಬ ಅಭಿಪ್ರಾಯ ಕೂಡ ಇದೆ.
ನಿರ್ಗಮಿತ ಜಿಲ್ಲಾಧಿಕಾರಿ ಎ. ಬಿ ಇಬ್ರಾಹಿಂ ಅವರು ಪ್ರತೀ ನಾಲ್ಕನೇ ಗುರುವಾರ ತಾಲೂಕು ಕಚೇರಿಗೆ ಭೇಟಿ ನೀಡಿ ಜನರ ಅಹವಾಲು ಸ್ವೀಕಾರ ಸಂಪ್ರದಾಯ ಪ್ರಾರಂಭಿಸಿದ ಬಳಿಕ ಕೆಲವೊಂದು ಕೆಲಸಗಳು ಸುಗಮವಾಗಿ ಆಗುತ್ತಿದ್ದವು. ಎಲ್ಲಿವರೆಗೆ ಎಂದರೆ ತಾಲೂಕು ಕಚೇರಿಯಲ್ಲಿ ತಮಗಾಗದ ಸಿಬ್ಬಂದಿಗಳ ಟೇಬಲ್‌ನಲ್ಲಿ ಕಡತವೇನಾದರೂ ಬಾಕಿಯಾಗಿದ್ದರೆ ಅವರೇ ಜನರಿಗೆ, ನೀವು ಜಿಲ್ಲಾಧಿಕಾರಿಗಳ ಬಳಿ ದೂರು ನೀಡಿ ಎಂದು ಸಲಹೆ ನೀಡುತ್ತಿದ್ದುದೂ ಆಗುತ್ತಿತ್ತು! ಅಲ್ಲದೆ ಕೆಲವರು ಡಿಸಿ ಗೆ ದೂರು ನೀಡುತ್ತೇವೆ ಎಂದು ಬೆದರಿಕೆ ಹಾಕಿದಾಗ, ಬೇಡ ಒಂದೆರಡು ದಿನಗಳಲ್ಲಿ ನಿಮ್ಮ ಕೆಲಸ ಆಗುತ್ತದೆ ಎಂದು ಸಾಗ ಹಾಕಿ ಡಿಸಿ ಯವರು ಬಂದು ಹೋದ ಬಳಿಕ ಮತ್ತೆ ಒಂದು ತಿಂಗಳು ಆ ಕೆಲಸವನ್ನು ಮುಂದೆ ಹಾಕುತ್ತಿದ್ದುದೂ ನಡೆಯುತ್ತಿತ್ತು. ಆದರೆ ಈಗ ಜಿಲ್ಲಾಧಿಕಾರಿಗಳು ಬದಲಾಗಿದ್ದಾರೆ. ಹೊಸ ಜಿಲ್ಲಾಧಿಕಾರಿ ಡಾ| ಜಗಧೀಶ್ ಅವರು ಅಧಿಕಾರ ವಹಿಸಿಕೊಂಡಿದ್ದು ಅವರೂ ಇದೇ ರೀತಿ ತಾಲೂಕು ಕಚೇರಿಗಳಿಗೆ ಭೇಟಿ ನೀಡಿ ಜನರ ಬಳಿ ಆಡಳಿತ ಯಂತ್ರವನ್ನು ತರಲಿದ್ದಾರೆಯೇ ಎಂದು ಕಾದು ನೋಡಬೇಕಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.