ಎಸ್.ಕೆ.ಎ.ಸಿ.ಎಮ್.ಎಸ್ ಉಳಿವಿಗಾಗಿ ಪಣತೊಡಲು ಬಂಡವಾಳ ಹಾಕಿದ ಸಂಸ್ಥೆಗಳಿಂದ ಹೊಸ ಪ್ರಯತ್ನ

MolahalliShivaraya copyಇಂದು ಸಹಕಾರಿ  ಪಿತಾಮಹ ಮೊಳಹಳ್ಳಿ ಜನ್ಮದಿನಾಚರಣೆ

ಮುಂಡಾಜೆ : 1988  ರಂದು ಜನಿಸಿದ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯ ಅವರ ಜನ್ಮದಿನಾಚರಣೆಯನ್ನು ಪುತ್ತೂರು ಎಸ್.ಕೆ.ಎ.ಸಿ.ಎಮ್.ಎಸ್. ಸಹಕಾರಿ ಸಂಘದಲ್ಲಿ ಇಂದು ಬೆಳಿಗ್ಗೆ 11ಕ್ಕೆ ವಿಶೇಷ ರೀತಿಯಲ್ಲಿ ಆಚರಿಸುವಂತೆ ಸಹಕಾರಿಗಳು ಹಾಗು ಪಾಲು ಬಂಡವಾಳ ಹಾಕಿರುವ ಸದಸ್ಯ ಸಂಘಗಳು ವಿನೂತನ ಪ್ರಯೋಗವೊಂದಕ್ಕೆ ಕೈ ಹಾಕಿದೆ. ಬೆಳಿಗ್ಗೆ10.30ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಬಳಿಕ ಈ ಕಾರ್ಯಕ್ರಮ ನಡೆಯಲಿದೆ. ಮೊಳಹಳ್ಳಿಯವರಿಂದ ಸಂಸ್ಥಾಪಿಸಲ್ಪಟ್ಟು ಒಂದು ಕಾಲದಲ್ಲಿ ಸಹಕಾರಿಗಳ ಜೀವಾಳವಾಗಿದ್ದ ಮತ್ತು ಆರ್ಥಿಕ ಅಸಮತೋಲನ ನಿವಾರಣೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದ ಎಸ್.ಕೆ.ಎ.ಸಿ.ಎಂ.ಎಸ್. ಸಂಸ್ಥೆ ಹಿಂದೊಮ್ಮೆ ವಿವಿಧ ಸ್ಥಿತ್ಯಾಂತರಗಳಿಗೆ ಗುರಿಯಾಗಿ ಮುಚ್ಚುಗಡೆಯವರೆಗೆ ಬಂದಿದ್ದಾಗ ಮೊಳಹಳ್ಳಿಯವರಿಂದಲೇ ಉಳಿದಿದ್ದ ಸಂಸ್ಥೆ ಇದೀಗ ಮತ್ತೊಮ್ಮೆ ಗಂಡಾಂತರಕ್ಕೆ ಸಿಲುಕಿರುವಾಗ ಕನಿಷ್ಠ ಪುತ್ತೂರು ಕೇಂದ್ರವನ್ನಾದರೂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ ಈ ಪ್ರಯತ್ನ ಎಲ್ಲಾ ಸಹಕಾರಿಗಳಿಂದ ಆದರೆ ಒಳಿತು ಎಂದು ತೀರ್ಮಾನಕ್ಕೆ ಬರಲಾಗಿದೆ. ಹಿರಿಯ ಸಹಕಾರಿ ಎನ್.ಎಸ್. ಗೋಖಲೆ ಅವರ ಅಧ್ಯಕ್ಷತೆಯಲ್ಲಿ ಮುನ್ನಡೆಯುತ್ತಿರುವ ಮುಂಡಾಜೆ ಸಹಕಾರಿ ಸಂಘ ಕೂಡ ಈ ಸಂಘದಲ್ಲಿ 1 ಲಕ್ಷ ರೂ. ಪಾಲು ಬಂಡವಾಳ ನೀಡಿದ ಸದಸ್ಯ ಸಂಘಟನೆಯಾಗಿದ್ದು ಒಟ್ಟಿನಲ್ಲಿ ಮೊಳಹಳ್ಳಿಯವರ ಹುಟ್ಟುಹಬ್ಬದ ಸಂದರ್ಭದಲ್ಲಾದರೂ ಇಂತಹದ್ದೇ ಪಾಲು ಬಂಡವಾಳ ಸದಸ್ಯ ಸಂಘಗಳು, ಸಾವಿರಾರು ಸಾಮಾನ್ಯ ಸದಸ್ಯರು, ಸಾವಿರಾರು ಮಂದಿ ಪಿಗ್ಮಿ ಸಂಗ್ರಾಹಕರು ಹಾಗೂ ಠೇವಣಿದಾರರು ಮೈ ಕೊಡವಿ ಎದ್ದುನಿಂತು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಈ ವಿಶಿಷ್ಠ ಜಾಗೃತಿಗೆ ಸಂಕಲ್ಪಿಸಿರುವವರು ಮಾದ್ಯಮದ ಮೂಲಕ ಭಿನ್ನವಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.