ಹೊಸಂಗಡಿ: ಗ್ರಾಮ ವಿಕಾಸ ಯೋಜನೆಯ ಚೊಚ್ಚಲ ಕಾಮಗಾರಿ ಲೋಕಾರ್ಪಣೆ, ಗ್ರಾಮ ವಿಕಾಸ ಯೋಜನೆಯಿಂದ ಗ್ರಾಮೀಣ ಭಾಗದ ಅಭಿವೃದ್ಧಿ: ಬಂಗೇರ

hosangady road innogration copyಹೊಸಂಗಡಿ: ಗ್ರಾಮೀಣ ಭಾಗಗಳನ್ನು ಬೇರೆ ಬೇರೆ ರೀತಿಯಲ್ಲಿ ಅಭಿವೃದ್ಧಿ ಪಡಿಸುವುದೇ ಗ್ರಾಮ ವಿಕಾಸ ಯೋಜನೆಯ ಪ್ರಮುಖ ಉದ್ದೇಶ. ಬಡವರ ಏಳಿಗೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿರುವ ಸರ್ಕಾರ ಮುಂದಿನ ದಿನಗಳಲ್ಲಿ 6ನೇ ತರಗತಿಯಿಂದಲೇ ಆಂಗ್ಲಮಾಧ್ಯಮ ಭೋದನೆಯ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಜು. 31ರಂದು ಹೊಸಂಗಡಿ ಗ್ರಾಮದಲ್ಲಿ ಗ್ರಾಮ ವಿಕಾಸ ಹಾಗೂ ಉದ್ಯೋಗ ಖಾತರಿ ಯೋಜನೆಯಲ್ಲಿ ರೂ. 8.60 ಲಕ್ಷ ಮೊತ್ತದಲ್ಲಿ ಚೊಚ್ಚಲವಾಗಿ ನಿರ್ಮಾಣ ಮಾಡಲಾದ ಕಾಂಕ್ರಿಟೀಕರಣ ರಸ್ತೆಯನ್ನು ಲೋಕಾರ್ಪಣೆಗೈದು ಮಾತನಾಡಿದರು.
ರಸ್ತೆಗೆ ಸ್ಥಳದಾನವನ್ನು ಮಾಡಿದ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಧರ್ಮದರ್ಶಿ ಎ. ಜೀವಂಧರ ಕುಮಾರ್ ಮಾತನಾಡಿ, ದೈವದ ಗದ್ದೆಯಾಗಿದ್ದ ಜಾಗವನ್ನು ರಸ್ತೆಗೆ ನೀಡಲಾಗಿದೆ. ಇದಕ್ಕೆ ದೈವ ಅಪ್ಪಣೆಯೂ ನೀಡಿದೆ. ಅಭಿವೃದ್ಧಿಗೆ ಕ್ಷೇತ್ರದ ಸಹಕಾರ ನಿರಂತರವಾಗಿದೆ ಎಂದು ಹೇಳಿದರು.
ಗಾಂಧಿ ಗ್ರಾಮ ಪುರಸ್ಕಾರ: ನಿರ್ಮಲ ಗ್ರಾಮ ಪುರಸ್ಕಾರ, ರಾಜ್ಯ ನೈರ್ಮಲ್ಯ ರತ್ನ, ಸ್ವರ್ಣ ನೈರ್ಮಲ್ಯ, ರಜತ ನೈರ್ಮಲ್ಯ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಹೊಸಂಗಡಿ ಗ್ರಾಮ ಪಂಚಾಯತು ಇದೀಗ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ನಮಗೆಲ್ಲ ಹೆಮ್ಮೆಯಾಗಿದೆ. ಗ್ರಾಮದ ಅಭಿವೃದ್ಧಿಯಲ್ಲಿ ಪಡ್ಡ್ಯಾರಬೆಟ್ಟ ಕ್ಷೇತ್ರದ ಕೊಡುಗೆ ಅಪಾರವಾಗಿದೆ ಎಂದು ನಾರಾವಿ ಕ್ಷೇತ್ರದ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್ ಹೇಳಿದರು.
ಸನ್ಮಾನ: ಸುಮಾರು ರೂ. 1ಲಕ್ಷ ವೆಚ್ಚದಲ್ಲಿ ರಸ್ತೆಗೆ ಇಂಟರ್ ಲಾಕ್ ಅಳವಡಿಸಿದ ಪೆರಿಂಜೆ ಹರಿಹಂತ್ ಇಂಡಸ್ಟ್ರೀಸ್‌ನ ಮಾಲಕ ವಿಶ್ವಾಸ್ ಜೈನ್ ಅವರ ಪರವಾಗಿ ಧರ್ಮದರ್ಶಿ ಎ. ಜೀವಂಧರ ಕುಮಾರ್ ಹಾಗೂ ಗ್ರಾಮ ವಿಕಾಸ ಯೋಜನೆಯಡಿ ಅನುದಾನ ಒದಗಿಸಿದ ಶಾಸಕ ಕೆ. ವಸಂತ ಬಂಗೇರ ಮತ್ತು ಇಂಜಿನಿಯರ್ ಪ್ರಶಾಂತ್ ಅವರನ್ನು ಸನ್ಮಾನಿಸಲಾಯಿತು.
ಹೊಸಂಗಡಿ ಗ್ರಾಮ ಪಂಚಾಯತು ಅಧ್ಯಕ್ಷೆ ಹೇಮಾವಸಂತ್ ಅಧ್ಯಕ್ಷತೆ ವಹಿಸಿದ್ದರು. ಪೆರಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ಹೊಸಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ಲಲಿತಾ ಟಿ. ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂ.ಸದಸ್ಯ ಶ್ರೀಪತಿ ಉಪಾಧ್ಯಾಯ ಸ್ವಾಗತಿಸಿ, ಹರಿಪ್ರಸಾದ್ ಪಿ.. ವಂದಿಸಿದರು. ಪಂ.ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ನಿರ್ವಹಿಸಿದರು. ಗ್ರಾ.ಪಂ ಸದಸ್ಯರು ಮತ್ತು ಸಿಬ್ಬಂದಿವರ್ಗ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.