ಲಾಯಿಲ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಯೋಗೀಶ್ ಭಿಡೆ

laila school copyಲಾಯಿಲ: ಸೈಂಟ್ ಮೇರಿಸ್ ಸ್ಕೂಲ್ ಲಾಲ ಇದರ 2016-17 ನೇ ಸಾಲಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ ಯೋಗೀಶ್ ಆರ್ ಭಿಡೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ರಾಘವೇಂದ್ರ ಡೆಂಟಲ್ ಕ್ಲಿನಿಕ್‌ನ ಡಾ| ಆಶಲತಾ ರಾಘವೇಂದ್ರ ಇವರೂ ಆವಿರೋಧವಾಗಿ ಆಯ್ಕೆಯಾದರು.
ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಜಿನ್ಸಿ, ಶಾಲಾ ಸಂಚಾಲಕರಾದ ಸಿಸ್ಟರ್ ಬೆನೆಟ್ ಇವರ ಅಧ್ಯಕ್ಷತೆಯಲ್ಲಿ ಆ.1 ರಂದು ಶಾಲೆಯಲ್ಲಿ ನಡೆದ ಪಿಟಿಎ ಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಸದಸ್ಯರುಗಳಾಗಿ ಬಿ.ಜೆ.ಪಿ ತಾಲೂಕು ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸವಣಾಲು,ಸುದ್ದಿ ಪತ್ರಿಕೆಯ ವ್ಯವಸ್ಥಾಪಕ ಮಂಜುನಾಥ ರೈ ಎನ್, ಉದ್ಯಮಿ ರಮಾನಂದ ಹೆಗ್ಡೆ, ಲೋಕೋಪಯೋಗಿ ಇಲಾಖೆಯ ಉದ್ಯೋಗಿ ಜೀವನ್ ಪತ್ರಾವೋ, ಮುಂಡಾಜೆಯ ರತೀಶ್ ಫಡ್ಕೆ, ಶ್ರೀಮತಿ ಜೂಲೆಟ್ ವೇಗಸ್, ಶ್ರೀಮತಿ ಶಿಲ್ಪಾ ರೈ, ಶ್ರೀಮತಿ ರೇಖಾ ರಾವ್ ಇವರನ್ನು ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.