ಉಜಿರೆ ಟೌನ್ ಮಸೀದಿ ಆಧೀನದ ಮದರಸ ಪ್ರಾರಂಭೋತ್ಸವ

Advt_NewsUnder_1
Advt_NewsUnder_1
Advt_NewsUnder_1

    ಉಜಿರೆ: ಮದರಸ ವಿದ್ಯೆ ಸಿಗುವ ತಾಣವಾಗಿದೆ. ವಿದ್ಯಾರ್ಥಿಗಳು ಇದನ್ನು ಕಲಿತು ಸಮಾಜದಲ್ಲಿ ಮೌಲ್ಯಯುತವಾದ ಜೀವನ ನಡೆಸಲು ಪ್ರಯತ್ನಿಸಬೇಕು. ನೈತಿಕ ಶಿಕ್ಷಣವಿಲ್ಲದ ಜೀವನ ಸಮಾಜದಲ್ಲಿ ಆತನನ್ನು ಕೆಟ್ಟದಾರಿಗೆ ತಳ್ಳುತ್ತದೆ. ಅಧ್ಯಾಪಕರು ಮಕ್ಕಳಿಗೆ ಪರಲೋಕದ ಉನ್ನತಿಗಾಗಿ ವಿದ್ಯೆಯೆಂಬ ಜ್ಞಾನದ ಬೆಳಕನ್ನು ತೋರಿಸಿಕೊಡುತ್ತಾರೆ ಎಂದು ಉಜಿರೆ ಟೌನ್ ಮದರಸ ಮುಖ್ಯೋಪಾಧ್ಯಾಯ ಮುಹಮ್ಮದ್ ಅಶ್ರಫ್ ಹಿಮಮಿ ಹೇಳಿದರು.
ಹಯಾತುಲ್ ಇಸ್ಲಾಂ ಮದರಸ ಟೌನ್ ಉಜಿರೆ ಇಲ್ಲಿ ಸುನ್ನೀ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಮದರಸ ಪ್ರಾರಂಭೋತ್ಸವ “ಫತಹೇ ಮುಬಾರಕ್” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದ್ರಿಯಾ ಜುಮ್ಮಾ ಮಸೀದಿ ಟೌನ್ ಇದರ ಅಬ್ದುಲ್ ರಹಿಮಾನ್ ಎ. ಆರ್ ಟ್ರೇಡರ‍್ಸ್ ಉಜಿರೆ, ಯಂಗ್‌ಮೆನ್ಸ್ ಕಾರ್ಯದರ್ಶಿ ಬಶೀರ್ ಅಪ್ನಿ, ಅಬ್ದುಲ್ ಗಫೂರ್, ಸಅದ್, ಸುಲೈಮಾನ್ ಮುಸ್ಲಿಯಾರ್ ಕೊಕ್ಕಡ ಉಪಸ್ಥಿತರಿದ್ದರು. ಯನ್ ಹಸೈನಾರ್ ಮುಸ್ಲಿಯಾರ್ ಗಂಡಿಬಾಗಿಲು ಸ್ವಾಗತಿಸಿ ಕಾರ್ಯಕ್ರಮ ನಡೆಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.