ಹಿರಿಯ ಸಾಹಿತಿ ಪ್ರೊ| ನಾವುಜಿರೆಯವರಿಗೆ ಸನ್ಮಾನ

sanmanaಉಜಿರೆ :  ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ, ಶ್ರೀ.ಧ.ಮಂ ಮಹಾವಿದ್ಯಾಲಯ ಕನ್ನಡ ಸಂಘ ಉಜಿರೆ ಮತ್ತು ಹರಿದಾಸ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ವತಿಯಿಂದ ಜು.30ರಂದು ಉಜಿರೆಯ ಹಿರಿಯ ಸಾಹಿತಿಯಾದ ಪ್ರೊ| ನಾವುಜಿರೆಯವರನ್ನು ಶ್ರೀ.ಧ.ಮಂ ಕಾಲೇಜು ಸೆಮಿನಾರ್ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಇವರು 1938ರಲ್ಲಿ ಜನಿಸಿದ ಎನ್.ನಾಗರಾಜ ಪೂವಣಿಯವರು ಕನ್ನಡ ಮತ್ತು ಹಿಂದಿ ಭಾಷಾ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು. ಶಿಕ್ಷಣ ಕ್ಷೇತ್ರದಲ್ಲಿ ೩೮ ವರ್ಷಗಳ ಸುದೀರ್ಘ ಸೇವೆಯ ಅನುಭವದೊಂದಿಗೆ ಉಜಿರೆ ಶ್ರೀ.ಧ.ಮಂ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾಗಿ ೧೯೯೬ರಲ್ಲಿ ನಿವೃತ್ತಿ ಹೊಂದಿದವರು.
ನಿರಂತರ ಅಧ್ಯಯನಶೀಲತೆಯಿಂದ ವೃತ್ತಿ- ಪ್ರವೃತ್ತಿಗಳೆರಡರಲ್ಲೂ ಉನ್ನತ ಸಾಧನೆಗೈದ ಸರಳ, ಸಜ್ಜನಿಕೆಯ ಸ್ನೇಹಜೀವಿ, ಅಧ್ಯಾಪಕರಾಗಿ, ಉಪನ್ಯಾಸಕರಾಗಿ, ಪತ್ರಿಕೋದ್ಯಮಿಯಾಗಿ, ಅಂಕಣಕಾರರಾಗಿ, ಸಾಹತಿಯಾಗಿ ಭಾಗವಹಿಸಿದ, ತೊಡಗಿಕೊಂಡ ಸಾಹಿತ್ಯಿಕ ಗೋಷ್ಠಿಗಳು, ಸಮ್ಮೇಳನಗಳು, ಸಂಘ-ಸಂಸ್ಥೆಗಳು ಹತ್ತು ಹಲವು ,ಕನ್ನಡ, ತುಳು, ಹಿಂದಿ ಬಾಷೆಗಳಲ್ಲಿ ಪಾಂಡಿತ್ಯ ಹೊಂದಿದವರಾಗಿ ಕನ್ನಡದಿಂದ ಹಿಂದಿಗೆ, ಹಿಂದಿಯಿಂದ ಕನ್ನಡಕ್ಕೆ ಅನುವಾದಕ ಸಾಹಿತಿಯಾಗಿ, ಸಂಪಾದಕರಾಗಿ, ಸ್ವತಂತ್ರ ಬರಹಗಾರರಾಗಿ ಕತೆ, ಕವನ, ನಾಟಕ, ತುಳುಗೀತೆಗಳು, ಚುಟುಕು ಕವಿತೆಗಳು ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ೬೦ಕ್ಕಿಂತಲೂ ಅಧಿಕ ಮೌಲಿಕ ಕೃತಿಗಳು ಇವರಿಂದ ನಾಡಿಗೆ ಸಮರ್ಪಿತವಾಗಿವೆ.
ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ತಾಲೂಕು ಮಟ್ಟದಿಂದ ಅಖಿಲ ಭಾರತ ಮಟ್ಟದವರೆಗೆ ಹತ್ತಾರು ಸಂಘಟನೆಗಳವರಿಂದ ಗೌರವಕ್ಕೆ ಭಾಜನರಾದ ಹೆಮ್ಮೆಯ ಸಾಧಕ. ಇವರ ಬಹುಮುಖ್ಯ ಸೇವೆ ಮತ್ತು ಕೊಡುಗೆಗಳನ್ನು ಗುರುತಿಸಿ ಡಾ| ಟಿ.ಎನ್ ತುಳುಪುಳೆ ದತ್ತನಿಧಿ ಉದ್ಘಾಟನೆ ಮತ್ತು ಉಪನ್ಯಾಸ ಕಾರ‍್ಯಕ್ರಮದ ಶುಭ ಸಂದರ್ಭದಲ್ಲಿ ಗಣ್ಯರ ಸಮ್ಮುಖದಲ್ಲಿ ಅಭಿಮಾನಪೂರ್ವಕ ಸನ್ಮಾನ ಪತ್ರವನ್ನು ನೀಡಿ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.