ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಹಾಗೂ ಕನ್ನಡ ಸಂಘ ಹಾಗೂ ದ.ರಾ ಬೇಂದ್ರೆ ಟ್ರಸ್ಟ್, ಧಾರವಾಡ ಇವುಗಳ ಸಹಯೋಗದಲ್ಲಿ ಬೇಂದ್ರೆ ಕಾವ್ಯಾನುಭವ ಕಾರ್ಯಕ್ರಮವು ಜು.30ರಂದು ಸಮ್ಯಗ್ದರ್ಶನ ಹಾಲ್ನಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ.ಕ್ಷೇತ್ರ ಧರ್ಮಸ್ಥಳ ಶ್ರೀಮತಿ ಹೇಮಾವತಿ ವೀ.ಹೆಗ್ಗಡೆಯವರು ನೆರವೇರಿಸಿದರು.
ಉಜಿರೆ ಶ್ರೀ.ಧ.ಮಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ|ಬಿ.ಯಶೋವರ್ಮ ಗೌರವ ಉಪಸ್ಥಿತಿ ವಹಿಸಿದ್ದರು.
ಅಧ್ಯಕ್ಷತೆಯನ್ನು ಉಜಿರೆ ಶ್ರೀ.ಧ.ಮಂ ಕಾಲೇಜು ಪ್ರಾಂಶುಪಾಲರಾದ ಪ್ರೊ| ಕೆ.ಎಸ್/ಮೋಹನ ನಾರಾಯಣರವರ ವಹಿಸಿದ್ದರು. ದಾರವಾಡ ದ.ರಾ ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ| ಶ್ಯಾಮಸುಂದರ ಬಿದರಕುಂದಿ, ಧಾರವಾಡದ ಅನಂತ ದೇಶಪಾಂಡೆ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.ಕಾರ್ಯಕ್ರಮದಲ್ಲಿ ಗಿರೀಶ್ ಕಾರ್ನಾಡ್ ನಿರ್ದೇಶನದ ದ.ರಾ.ಬೇಂದ್ರೆ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವು ನಡೆಯಿತು.
ಕನ್ನಡ ವಿಭಾಗದ ಮುಖ್ಯಸ್ಥ ಡಾ| ಬಿ.ಪಿ ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಸರ್ವರನ್ನು ಸ್ವಾಗತಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.