HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಕಳಿಯ : ಬಡವರಿಗೆ ನಿವೇಶನ ಹಂಚಿಕೆ ಕುರಿತು ತಹಶೀಲ್ದಾರ್‌ಗೆ ಮನವಿ

sahayaka commissioner copyಕಳಿಯ : ಜು.26ರಂದು ಕಳಿಯ ಗ್ರಾ.ಪಂ ವತಿಯಿಂದ ಪಂಚಾಯತ್ ಅಧ್ಯಕ್ಷ ಮತ್ತು ಇತರ ಸದಸ್ಯರುಗಳು ಬೆಳ್ತಂಗಡಿ ತಾಲೂಕು ಕಛೇರಿಯಲ್ಲಿ ಸಹಾಯಕ ಕಮೀಷನರ್‌ನ್ನು ಮತ್ತು ತಹಶೀಲ್ದಾರ್‌ನ್ನು ಭೇಟಿ ಮಾಡಿ ಕಳಿಯ ಗ್ರಾ.ಪಂನಲ್ಲಿ ಸುಮಾರು ೨೦ ವರ್ಷಗಳಿಂದ ಬಡವರಿಗೆ ನಿವೇಶನ ಹಂಚಿಕೆ ಮಾಡದೇ ಇದ್ದುದರಿಂದ ಕಳಿಯ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಕೆಲವು ಸರಕಾರಿ ಸ್ಥಳವನ್ನು ಪಂಚಾಯತ್‌ಗೆ ನೀಡುವ ಕುರಿತು ಮನವಿ ನೀಡಲಾಯಿತು.
ಸಹಾಯಕ ಕಮೀಷನರ್ ಮನವಿಯನ್ನು ಪರಿಶೀಲಿಸಿ, ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ತಹಶಿಲ್ದಾರರಿಗೆ, ಮನೆಗಾರರಿಗೆ, ಗ್ರಾಮಕರಣಿಕರಿಗೆ ಸೂಚನೆ ನೀಡಿದರು ಹಾಗೂ ಗ್ರಾ.ಪಂ ವ್ಯಾಪ್ತಿಗೆ ಕೆಲವು ಮೂಲಭೂತ ಸೌಕರ್ಯಗಳಿಗೆ ಆಸ್ಪತ್ರೆ, ಸರಕಾರಿ ಶಾಲೆ ಮತ್ತು ಕಾಲೇಜು, ಗ್ರಂಥಾಲಯ, ಅಂಗನವಾಡಿ, ಐ.ಟಿ.ಐ ಕಾಲೇಜು ಮುಂತಾದ ಸೌಕರ್ಯಗಳಿಗೆ ಜಾಗ ಮೀಸಲಿಟ್ಟು ಉಳಿದ ಹೆಚ್ಚುವರಿ ಸ್ಥಳವನ್ನು ಗ್ರಾ.ಪಂಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಸ್ಥಳದಲ್ಲೇ ಸೂಚಿಸಿದರು.
ಈ ಸಂದರ್ಭ ಕಳಿಯ ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್, ಸದಸ್ಯರುಗಳಾದ ತುಕರಾಮ, ವಿಜಯಾ.ಹೆಚ್.ಪ್ರಸಾದ್, ಕೆ.ಎಂ ಅಬ್ದುಲ್ ಕರೀಮ್, ದಿವಾಕರ ಎಂ, ಸುಧಾಕರ ಮಜಲು, ಕಾರ್ಯದರ್ಶಿ ಕುಂಞ.ಕೆ ಹಾಜರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.