ಬೆಳ್ತಂಗಡಿ : ವಸತಿ ರಹಿತರಿಂದ ಅರ್ಜಿ ಆಹ್ವಾನ

  ಬೆಳ್ತಂಗಡಿ : ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನ ಮಂತ್ರಾಲಯ ಭಾರತ ಸರಕಾರವು ಪ್ರತೀ ನಾಗರೀಕರಿಗೂ ಸೂರು ಅಭಿಯಾನವನ್ನು ಜಾರಿಗೊಳಿಸಿದೆ. ಇದರ ಮಾರ್ಗಸೂಚಿಯಂತೆ ಭೂಮಿಯನ್ನು ಸಂಪನ್ಮೂಲವನ್ನಾಗಿಸಿಕೊಂಡು In situ ಮಾದರಿಯಲ್ಲಿ ಕೊಳಚೆ ಪ್ರದೇಶಗಳ ಪುನರ್ ಅಭಿವೃದ್ಧಿ, ಕ್ರೆಡಿಟ್ ಲಿಂಕ್ ಸಬ್ಸಿಡಿ ಯೋಜನೆ, Affordable housing in partnership (AHP) ಫಲಾನುಭವಿ ನೇತೃತ್ವದಲ್ಲಿ ಸ್ವಯಂ ಮನೆ ನಿರ್ಮಾಣದ ಯಾವುದೇ ಒಂದು ಘಟಕದಡಿಯಲ್ಲಿ ಮನೆಯನ್ನು ಒದಗಿಸಬಹುದಾಗಿದ್ದು, ಈ ಯೋಜನೆಯ ಸದುಪಯೋಗಕ್ಕೆ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಸತಿರಹಿತರ ಮಾಹಿತಿ ಸಂಗ್ರಹಕ್ಕಾಗಿ ಬೇಡಿಕೆ ಸಮೀಕ್ಷೆಯನ್ನು ಪ್ರಾರಂಭಿಸಲಾಗಿದೆ. ಅದಕ್ಕಾಗಿ ಸಾರ್ವಜನಿಕರು (ವಸತಿ ರಹಿತರು) ಬೆಳ್ತಂಗಡಿ ಪಟ್ಟಣ ಪಂಚಾಯತ್ ಕಛೇರಿಯಿಂದ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಜು.30ರೊಳಗೆ ಸಲ್ಲಿಸುವಂತೆ ಆಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.