ಬರೆಂಗಾಯ : ಸ.ಹಿ.ಪ್ರಾ.ಶಾಲೆ ಸಂಘಗಳ ಉದ್ಘಾಟನಾ ಸಮಾರಂಭ

Advt_NewsUnder_1
Advt_NewsUnder_1
Advt_NewsUnder_1

barengaya samaranbha copyಬರೆಂಗಾಯ : ಸ.ಉ.ಹಿ.ಪ್ರಾ.ಶಾಲೆ ಬರೆಂಗಾಯ ಇಲ್ಲಿ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವು ನಡೆಯಿತು.

 ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಮೊದಲಿಗೆ ಗಣಿತ ಮತ್ತು ವಿಜ್ಞಾನ ಸಂಘದ ಉದ್ಘಾಟನೆಯನ್ನು ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರಾದ ಶ್ರೀಮತಿ ಶಾಲಿನಿ.ಭಟ್ ದೀಪ ಬೆಳಗುವುದರ ಹಾಗೂ ಸಂಬಂಧಿಸಿದ ವಿಷಯದ ಭಿತ್ತಿಪತ್ರಿಕೆಯನ್ನು ಅನಾವರಣಗೊಳಿಸುವುದರ ಮೂಲಕ ಉದ್ಘಾಟಿಸಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಮೀನಾ ಸಂಘದ ಉದ್ಘಾಟನೆಯನ್ನು ನಿಡ್ಲೆ ಗ್ರಾಮದ ಆರೋಗ್ಯ ಸಹಾಯಕಿಯಾಗಿರುವ ಶ್ರೀಮತಿ ಪುಟ್ಟಮ್ಮರವರು ಮೀನಾ ಸಡಮಘದ ವಿದ್ಯಾರ್ಥಿಗಳಿಗೆ ದೀಪ ಪ್ರಧಾನ ಮಾಡುವುದರೊಂದಿಗೆ ಉದ್ಘಾಟಿಸಿ ಹದಿಹರೆಯದ ಸಮಸ್ಯೆಗಳ ಮತ್ತು ಪರಿಹಾರೋಪಾಯಗಳು ಎಂಬ ವಿಷಯಗದ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಶಿಕ್ಷಕ ಗೋಪಾಲ್ ಸ್ವಾಗತಿಸಿ, ಗಣಿತ ಮತ್ತು ವಿಜ್ಞಾನ ಸಂಘದ ಸಂಘಟಕರಾದ ದಯಾನಂದ ಪಿ.ಡಿ ತಮ್ಮ ಸಮಗದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ಹಕ್ಕುಗಳು ಹಾಗೂ ಕ್ರೀಡಾ ಸಂಘದ ಸಂಘಟಕರಾದ ಶ್ರೀಮತಿ ಅನಿತಾ.ಕೆ ತಮ್ಮ ಸಂಘದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಮೀನಾ ಸಂಘ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಶಾಲೆಯಲ್ಲಿ ನಡೆಯಲಿರುವ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ತಿಳಿಸಿ, ಕಾರ‍್ಯಕ್ರಮವನ್ನು ನಿರೂಪಿಸಿದರು. ಸತೀಶಾಚಾರ್ ಧನ್ಯವಾದವಿತ್ತು ರಾಘವೇಂದ್ರ ವಿ.ವಿ ಹಾಗೂ ಕಿರಣ.ಎಂ.ಕೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.