ಧರ್ಮಸ್ಥಳ : 45ನೇ ವರ್ಷದ ಪುರಾಣ ವಾಚನ-ಪ್ರವಚನ ಜ್ಞಾನಸತ್ರ ಆರಂಭ

Dharmasthala purana vachana pravachana copyಧರ್ಮಸ್ಥಳ : ಸಂಸಾರವೆಂಬುದು ವಿಷದ ಮರ. ಕಾವ್ಯರಸ, ಸಜ್ಜನರ ಸಹವಾಸವೆಂಬ ಒಳ್ಳೆಯದನ್ನು ಪಡೆಯಲು ಸಂಸಾರ ಬೇಕು. ಅವೆಲ್ಲವೂ ಪ್ರವಚನದಲ್ಲಿದೆ. ಸತ್ಸಂಗದಿಂದ ಜೀವನ್ಮುಕ್ತಿ ಪಡೆಯಬಹುದು. ಮತ್ಸ್ಯಪುರಾಣದ 9ನೇ ಅಧ್ಯಾಯ ಪುರಾಣ ವಾಚನ ಪ್ರವಚನದ ಮಹತ್ವ ತಿಳಿಸುತ್ತದೆ. ಬಹಳ ಪ್ರಾಚೀನ ಕಾಲದಿಂದಲೂ ಪುರಾಣ ವಾಚನ ನಡೆದುಕೊಂಡು ಬಂದಿದ್ದು ಕ್ಷೇತ್ರದಲ್ಲಿ 45 ವರ್ಷಗಳಿಂದಲೂ ನಡೆಸಿಕೊಂಡು ಬರುತ್ತಿರುವುದು ಸ್ತುತ್ಯಾರ್ಹ ೬೦ ದಿನಗಳ ಪ್ರವಚನ ಕಾರ್ಯ ಉತ್ತಮವಾಗಿ ಜಯಪ್ರದವಾಗಲೆಂದು ಯಕ್ಷಗಾನ ಹಿರಿಯ ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅಭಿಪ್ರಾಯಪಟ್ಟರು.
ಅವರು ಜು.17ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರವಚನ ಮಂಟಪದಲ್ಲಿ 2 ತಿಂಗಳ ಕಾಲ ನಡೆಯಲಿರುವ ೪೫ನೇ ವರ್ಷದ ಪುರಾಣ ವಾಚನ ಪ್ರವಚನ ಕಾರ್ಯಕ್ರಮವನ್ನು ದೀಪ ಪ್ರಜ್ವಲನಗೊಳಿಸಿ ಚಾಲನೆ ನೀಡಿ ಮಾತನಾಡುತ್ತಿದ್ದರು. ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಸ್ವಾಮಿಯ ಪೂಜೆಯ ಅಷ್ಟವಿದಾರ್ಚನೆಯಲ್ಲಿ ಪುರಾಣ ವಾಚನವೂ ಸೇರಿದೆ. ಭಗವದ್ಭಕ್ತರಿಗೆ ಸಮಯದ ಸದುಪಯೋಗವಾಗಲೆಂದು ಮಳೆಗಾಲದ ಎರಡು ತಿಂಗಳ ಕಾಲ ಪುರಾಣಗಳ ಪ್ರವಚನವನ್ನು ವಿದ್ವಾಂಸರಿಂದ ಏರ್ಪಡಿಸುತ್ತಿದ್ದು ಅದು ಭಕ್ತಾದಿಗಳ ಆಸಕ್ತಿ, ಕುತೂಹಲ, ಅಭ್ಯಾಸವನ್ನು ಪ್ರೇರೇಪಿಸುವಂತಿದೆ.
ಎಲ್ಲರ ಸೇವೆ ಶ್ರೀ ಸ್ವಾಮಿಗೆ ಸಮರ್ಪಿತವಾಗಲಿ ಎಂದರು. ಹೇಮಾವತಿ ಹೆಗ್ಗಡೆ, ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಮೊದಲ ದಿನ ಮಾರ್ಕಂಡೇಯ ಪುರಾಣವನ್ನು ದಿವಾಕರ ಆಚಾರ್ ವಾಚಿಸಿ, ಉಜಿರೆ ಅಶೋಕ ಭಟ್ ಪ್ರವಚನ ನಡೆಸಿದರು. ಶ್ರೀನಿವಾಸ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಕ್ಷೇತ್ರದಲ್ಲಿ 1977ರಿಂದ ಪ್ರಾರಂಭಗೊಂಡು ೪೫ನೇ ವರ್ಷದ ಪುರಾಣ ವಾಚನ ಪ್ರವಚನವು ಜು.17ರಿಂದ ಪ್ರಾರಂಭಗೊಂಡು ಕನ್ಯಾ ಸಂಕ್ರಮಣ ಸೆ.16ರ ವರೆಗೆ ಪ್ರತಿನಿತ್ಯ ಸಂಜೆ 6.30ರಿಂದ ೮ರ ವರೆಗೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.