ಡ್ಯಾನ್ಸ್ ಡ್ಯಾನ್ಸ್ ಕರ್ನಾಟಕ ನಂಬರ್ 1 ರಿಯಾಲಿಟಿ ಶೋ ವಿನ್ನರ್ ಮಾಸ್ಟರ್ ತೌಶೀರ್‌ಗೆ ಭವ್ಯ ಸ್ವಾಗತ

tr

ttttttttttt

ttt

t

tt

Thousheer ge swagatha 1 copy

Thousheer ge swagatha 2 copy

Thousheer ge swagatha copy

Tousheerge swagatha copy

20160725_180133  20160725_180534  20160725_180705  20160725_180708  20160725_180710  20160725_180736  20160725_180737  20160725_180739  20160725_180742  20160725_180903 20160725_180908  20160725_181156  20160725_181240  20160725_181244  20160725_181335  20160725_181337  20160725_181357  20160725_181402  20160725_181403  20160725_181406  20160725_181418  20160725_181458  20160725_181508  20160725_181513  20160725_181516

 ಬೆಳ್ತಂಗಡಿ : ಕನ್ನಡದ ಖ್ಯಾತ ಸುವರ್ಣ ವಾಹಿನಿ ಚಾನೆಲ್ ಹಮ್ಮಿಕೊಂಡಿದ್ದ ಡ್ಯಾನ್ಸ್ ಡ್ಯಾನ್ಸ್ ಕರ್ನಾಟಕ ನಂ 1 ರಿಯಾಲಿಟಿ ಶೋದಲ್ಲಿ ವಿನ್ನರ್ ಆಗಿ ಹೊರಹೊಮ್ಮಿ ತಾಯ್ನಾಡಿಗೆ ಮರಳಿದ ಡ್ಯಾನ್ಸರ್ ಮತ್ತು ಸೆಲೆಬ್ರೆಟಿ, ಚಲನ ಚಿತ್ರ ಬಾಲ ನಟ ಮಾಸ್ಟರ್ ಎಂ ತೌಶೀರ್ ಕಾಶಿಬೆಟ್ಟು ಉಜಿರೆ (ಎಸ್‌ಡಿಎಂ ಸಿಬಿಎಸ್‌ಇ ವಿದ್ಯಾರ್ಥಿ ಉಜಿರೆ) ಅವರಿಗೆ ಜು. 25 ರಂದು ಬೆಳ್ತಂಗಡಿ ತಾಲೂಕಿಗೆ ಭವ್ಯಸ್ವಾಗತ ನೀಡಲಾಯಿತು.
ಬೀಟ್‌ರಾಕರ‍್ಸ್ ಡ್ಯಾನ್ಸ್ ಅಕಾಡಮಿ ಬೆಳ್ತಂಗಡಿ ಇದರ ವತಿಯಿಂದ ತಮ್ಮ ತರಗತಿಯ ವಿದ್ಯಾರ್ಥಿಯೂ ಆಗಿರುವ ಮಾ| ಎಂ. ತೌಶೀರ್ ಬೆಳ್ತಂಗಡಿ ತಾಲೂಕಿಗೆ ಆಗಿಮಿತ್ತಿರುವ ಸಂದರ್ಭದಲ್ಲಿ ಈ ವಿಜಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಬೀಡಿನಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತೌಶೀರ್ ಅವರಿಗೆ ಸ್ಮರಣಿಕೆ ನೀಡಿ ಪ್ರಶಸ್ತಿ ಗೆದ್ದಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಹರಸಿದರು. ಅಪರಾಹ್ನ 3 ಕ್ಕೆ ಧರ್ಮಸ್ಥಳದಿಂದ ವಿಜಯೋತ್ಸವ ಮೆರವಣಿಗೆ ಹೊರಟು ವಿಶೇಷ ಅಲಂಕೃತಗೊಳಿಸಲಾದ ತೆರೆದ ವಾಹನದಲ್ಲಿ ಉಜಿರೆ ಮೂಲಕ ಬಂದ ಮಾಸ್ಟರ್ ತೌಶೀರ್ ಅವರಿಗೆ ದಾರಿಯುದ್ದಕ್ಕೂ ಅಭಿಮಾನಿಗಳು ಹೂಹಾರಗಳನ್ನು ಹಾಕಿ, ಗುಚ್ಚಗಳನ್ನು ನೀಡಿ ಸಿಹಿ ತಿನ್ನಿಸುವ ಮೂಲಕ ಅಭಿನಂದಿಸಿದರು. ಬೆಳ್ತಂಗಡಿಯ ಬಸ್ಟ್ಯಾಂಡ್ ಪರಿಸರ ತಲುಪುತ್ತಿದ್ದಂತೆ ಭಾರೀ ಪಟಾಕಿ ಸಿಡಿಸಿ ಸಂಭ್ರಮಿಸಿದ ಡ್ಯಾನ್ಸ್ ಪ್ರೇಮಿಗಳು ಮತ್ತು ತೌಶೀರ್ ಅಭಿಮಾನಿ ಸಮೂಹ ಭವ್ಯ ಸ್ವಾಗತ ಕೋರಿದರು. ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ನಗರದ ಜನತೆಯ ಪರವಾಗಿ ಹೂಗುಚ್ಚ ನೀಡಿ ಸ್ವಾಗತಿಸಿದರು. ಈ ಸಂದರ್ಭ ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್
ಜೈನ್, ಉಪಾಧ್ಯಕ್ಷ ಡಿ. ಜಗದೀಶ್, ಜೆಸಿಐ ಮಂಜುಶ್ರೀ ಅಧ್ಯಕ್ಷ ಜೆಸಿ ವಸಂತ ಶೆಟ್ಟಿ ಶ್ರದ್ಧಾ, ಜಿ.ಪಂ. ಸದಸ್ಯ ಶೇಖರ್ ಕುಕ್ಕೇಡಿ, ಕರಾವಳಿ ಕರ್ನಾಟಕ ಡ್ಯಾನ್ಸ್‌ನ ಅಸೋಶಿಯೆಶನ್ ಅಧ್ಯಕ್ಷ ರಾಜೇಶ್ ಕನ್ನೂರು, ಲಕ್ಷ್ಮೀಶ, ಪ್ರಕಾಶ್, ಯತೀಶ್ , ಪ್ರಮುಖರಾದ ದಯಾನಂದ ನಾಯಕ್, ಚಂದು ಎಲ್, ವಸಂತ ಬಿ.ಕೆ, ಬೀಟ್ ರಾಕರ‍್ಸ್ ಡ್ಯಾನ್ಸ್ ಅಕಾಡಮಿ ಕೊರಿಯಾಗ್ರಾಫರ್ ಜಿತೇಶ್, ಮತ್ತು ಬೀಟ್‌ರಾಕರ್ಸ್‌ನ ಎಲ್ಲಾ ತರಭೇತಿ ಪುಟಾಣಿ ಮಕ್ಕಳು ಹಾಗೂ ಹೆತ್ತವರು ನಾಗರಿಕರು ಹೂ ನೀಡುವುದರ ಮೂಲಕ ಅವರನ್ನು ಬರಮಾಡಿಕೊಂಡರು. ವಿಶೇಷ ನಾಸಿಕ್ ಬ್ಯಾಂಡ್ ಸೆಟ್ ಮತ್ತು ಡಿಜೆ ಸಂಗೀತ ಮೆರವಣಿಗೆಯ ಮೆರುಗು ಹೆಚ್ಚಿಸಿತು. ತೌಶೀರ್ ಅವರು ತನ್ನ ಪ್ರಶಸ್ತಿ ಫಲಕ ಮತ್ತು ಗೆಲುವಿನ ಸಂಕೇತವಾಗಿ ಚಾನೆಲ್ ವತಿಯಿಂದ ನೀಡಲಾದ ರೆಡ್ ರಿಬ್ಬನ್ ಧರಿಸಿಕೊಂಡು ಹೂಹಾರದೊಂದಿಗೆ ವಿಶೇಷ ಆಕರ್ಷಣೆಯಲ್ಲಿ ಮಿಂಚುತ್ತಿದ್ದರು. ಅಭಿಮಾನಿಗಳತ್ತ ಎರಡೂ ಕೈ ಬೀಸಿ ಅಭಿನಂದನೆ ಸಲ್ಲಿಸಿದರು. ಅವರ ತಂದೆ ಯು.ಕೆ. ಮುಹಮ್ಮದ್ ಹನೀಫ್, ಚಿಕ್ಕಪ್ಪಂದಿರಾದ ಜಾವೆದ್ ಮತ್ತು ಅಬ್ದುಶ್ಶುಕೂರ್ ಹಾಗೂ ಕುಟುಂಬದ ಸದಸ್ಯರು ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.