ಬೆಳ್ತಂಗಡಿ : ಕಥೋಲಿಕ್ ಸಭಾ ವಾರ್ಷಿಕ ಸಮ್ಮಿಲನ

katholic copy ಬೆಳ್ತಂಗಡಿ : ಕಥೋಲಿಕ್ ಸಭಾ ಮಂಗಳೂರು ಪ್ರದೇಶ, ಬೆಳ್ತಂಗಡಿ ವಲಯ ವಾರ್ಷಿಕ ಸಹಮಿಲನ ಜು.24ರಂದು ಬೆಳ್ತಂಗಡಿ ಸಿ.ವಿ.ಸಿ ಹಾಲ್‌ನಲ್ಲಿ ಜರಗಿತು. ವಲಯ ಆದ್ಯಾತ್ಮಿಕ ನಿರ್ದೇಶಕ ವಂದನೀಯ ಸ್ವಾಮಿ ಬೊನವೆಂಚರ್ ನಜ್ರೆತ್ ದೀಪ ಬೆಳಗಿಸಿ ಕಾರ‍್ಯಕ್ರಮ ಉದ್ಘಾಟಿಸಿ ಸಂದೇಶವಿತ್ತರು.
ಸಂಪನ್ಮೂಲ ವ್ಯಕ್ತಿಯಾಗಿ ಜೋರ್ಜ್ ಪಿಂಟೊ, ನಿವೃತ್ತ ಅಬಕಾರಿ ಕಮಿಷನರ್ ಮುಂದಾಳುತ್ವದ ಬಗ್ಗೆ ಮಾಹಿತಿ ನೀಡಿದರು.
ತಾ.ಪಂ ಚುನಾವಣೆಯಲ್ಲಿ ವಿಜೇತರಾದ ಜೋಯಲ್ ಮೆಂಡೊನ್ಸಾ ಮಡಂತ್ಯಾರ್, ಗ್ರಾ.ಪಂ ವಿಜೇತರಾದ ಶ್ರೀಮತಿ ರೀಟಾ ಕೊರೆಯಾ, ಶ್ರೀಮತಿ ಜೆಸ್ಸಿ ಪಿರೇರಾ ವೇಣೂರು ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪೈಕಿ ಜೋಯೆಲ್ ಮೆಂಡೊನ್ಸಾ ಮಾತನಾಡಿದರು.
ಕಥೋಲಿಕ್ ಸಭಾ ಕೇಂದ್ರೀಯ ಸಮಿತಿ ಅಧ್ಯಕ್ಷೆ ಶ್ರೀಮತಿ ಪ್ಲೇವಿ ಡಿಸೋಜ ಸಂದೇಶವಿತ್ತರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷರಾದ ಅರುಣ್ ಸೆರಾವೊ ವಹಿಸಿದ್ದರು. ವಿಲಿಯಂ ಕೊರ‍್ಡೆರೊ ಕಾರ‍್ಯಕ್ರಮ ನಿರೂಪಿಸಿ, ತೋಮಸ್ ನೊರೋನ್ಹಾ ಸ್ವಾಗತಿಸಿ, ವಿಲಿಯಂ ಲೋಬೊ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.