ಕೆ. ಆರ್. ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಚೆನ್ನಕೇಶವ ನೇಮಕ

Advt_NewsUnder_1
Advt_NewsUnder_1

chenna keshava copyಬೆಳ್ತಂಗಡಿ: ಡಾ| ಬಿ. ಆರ್ ಅಂಬೇಡ್ಕರ್ ಮೊಮ್ಮಗ ಆನಂದ್ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರೂಪುಗೊಂಡಿರುವ ರಿಪಬ್ಲಿಕನ್ ಸೇನೆ ಇದರ ಕರ್ನಾಟಕದ ವಿಭಾಗವಾದ ಕೆ. ಆರ್. ಎಸ್ (ಕರ್ನಾಟಕ ರಿಪಬ್ಲಿಕನ್ ಸೇನೆ) ಇದರ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಮತ್ತು ಜಿಲ್ಲಾ ಉಸ್ತುವಾರಿಯಾಗಿ ಪ್ರಗತಿಪರ ಚಿಂತಕ ಚೆನ್ನಕೇಶವ ಅವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಅವರು ಆದೇಶ ನೀಡಿದ್ದಾರೆ. ಕರ್ನಾಟಕ ಪ್ರಜಾವಿಮೋಚನಾ ಚಳವಳಿ, ಕರ್ನಾಟಕ ಜನಾಂದೋಲನ ಸಂಘಟನೆ, ಮಾನವ ಬಂಧುತ್ವ ವೇದಿಕೆ, ಜನಮತ ವೇದಿಕೆ ಮೊದಲಾದ ಪ್ರಗತಿಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಚೆನ್ನಕೇಶವ ಅವರು ಈ ಹಿಂದೆ ಬಹುಜನ ಸಮಾಜ ಪಕ್ಷ (ಬಿ.ಎಸ್.ಪಿ) ಇದರ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಸಮಿತಿ ಅಧ್ಯಕ್ಷರಾಗಿಯೂ ಸೇವೆಸಲ್ಲಿಸಿದ್ದಲ್ಲದೆ, ಒಂದುಬಾರಿ ವಿಧಾನ ಸಭಾ ಚುನಾವಣೆಗೂ ಸ್ಪರ್ಧಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.