ಬೆಳ್ತಂಗಡಿ : ತಾಲೂಕು ಪತ್ರಕರ್ತರ ಸಂಘ ಬೆಳ್ತಂಗಡಿ ಇದರ ಮುಖ್ಯಸ್ಥಿಕೆಯಲ್ಲಿ ಅರಣ್ಯಾಧಿಕಾರಿಗಳ ಕಛೇರಿ ಬೆಳ್ತಂಗಡಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಳ್ತಂಗಡಿ ತಾಲೂಕು ಶಾಖೆ ಇದರ ಸಹಕಾರದೊಂದಿಗೆ ಶ್ರೀ.ಕ್ಷೇ.ಧ.ಗ್ರಾ ಯೋಜನೆ ಬೆಳ್ತಂಗಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಳ್ತಂಗಡಿ ತಾಲೂಕು ಹುಣ್ಸೆಕಟ್ಟೆ ಹಾ.ಉ.ಮಹಿಳಾ ಸಹಕಾರಿ ಸಂಘ ಬೆಳ್ತಂಗಡಿ, ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಬೆಳ್ತಂಗಡಿ ತಾಲೂಕು ಸಮಿತಿ, ರಾಜಕೇಸರಿ ಫ್ರೆಂಡ್ಸ್ ಹುಣ್ಸೆಕಟ್ಟೆ, ರಿಕ್ಷಾ ಮಾಲಕ-ಚಾಲಕರ ಸಂಘ ಸಂತೆಕಟ್ಟೆ ಬೆಳ್ತಂಗಡಿ, ಶಾಲಾಭಿವೃದ್ಧಿ ಸಮಿತಿ ಸ.ಕಿ.ಪ್ರಾ.ಶಾಲೆ ಹುಣ್ಸೆಕಟ್ಟೆ ಇವರುಗಳ ಸಹಕಾರದಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹುಣ್ಸೆಕಟ್ಟೆ ಸ.ಕಿ.ಪ್ರಾ.ಶಾಲಾ ವಠಾರದಲ್ಲಿ ಸರಕಾರದ ಕೋಟಿ ವೃಕ್ಷ ಕಾರ್ಯಕ್ರಮದ ಭಾಗವಾಗಿ ವನಮಹೋತ್ಸವ, ಅರಣ್ಯದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮದ ಉದ್ಘಾಟನೆಯು ಜು.16ರಂದು ನೆರವೇರಿತು.
ಉದ್ಘಾಟನೆಯನ್ನು ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ನೆರವೇರಿಸಿದರು. ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ದೇವಿಪ್ರಸಾದ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿತು. ಬೆಳ್ತಂಗಡಿ ತಾಲೂಕು ಶಾಖೆ ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್, ಶ್ರೀ.ಕ್ಷೇ.ಧ.ಗ್ರಾ.ಯೋಜನೆ ವಲಯ ಮೇಲ್ವಿಚಾರಕ ಸುರೇಶ್, ಬೆಳ್ತಂಗಡಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ಹೆಗ್ಡೆ, ಹುಣ್ಸೆಕಟ್ಟೆ ಹಾ.ಉ.ಮ.ಸಂಘದ ಅಧ್ಯಕ್ಷೆ ರಮಾದೇವಿ, ಬೆಳ್ತಂಗಡಿ ತಾಲೂಕು ಸಮಿತಿ ದಲಿತ ಸಂಘರ್ಷ ಸಮಿತಿ ಸಂಚಾಲಕ ವೆಂಕಣ್ಣ ಕೊಯ್ಯೂರು, ಹುಣ್ಸೆಕಟ್ಟೆ ರಾಜಕೇಸರಿ ಬೆಳ್ತಂಗಡಿ ಸ್ಥಾಪಕಾಧ್ಯಕ್ಷ ದೀಪಕ್.ಜಿ, ಬೆಳ್ತಂಗಡಿ ಸಂತೆಕಟ್ಟೆ ರಿಕ್ಷಾ-ಚಾಲಕರ ಮಾಲಕರ ಸಂಘದ ಅಧ್ಯಕ್ಷ ಬಾಬು ಆರ್ ಗೌಡ, ಹುಣ್ಸೆಕಟ್ಟೆ ಸ.ಕಿ.ಪ್ರಾ.ಶಾಲೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ಹೇಮಾವತಿ ಮೊದಲಾದವರು ಉಪಸ್ಥಿತರಿದ್ದರು.