ಜನರ ಅವಶ್ಯಕತೆ ಪೂರೈಸುವವರು ವರ್ತಕರು : ಫಾ| ಲಾರೆನ್ಸ್ ಮಸ್ಕರೇನಸ್

Advt_NewsUnder_1
Advt_NewsUnder_1

varthalara sangha madanthyar copyಮಡಂತ್ಯಾರು – ಪುಂಜಾಲಕಟ್ಟೆ ವರ್ತಕರ ಸಂಘ ಉದ್ಘಾಟನೆ

ಮಡಂತ್ಯಾರು : ವರ್ತಕರ ಅಭಿವೃದ್ಧಿ ಎಂದರೆ ಅದು ಜನರ ಅಭಿವೃದ್ಧಿ ಕೂಡ ಹೌದು. ಏಕೆಂದರೆ ಜನರಿಗೆ ಒಳಿತನ್ನು ಬಯಸುವವರು ಮತ್ತು ಜನರಿಗೆ ಬೇಕಾದ ಆವಶ್ಯಕತೆಗಳನ್ನು ಪೂರೈಸುವವರು ವರ್ತಕರು ಎಂದು ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರು ಇಲ್ಲಿನ ಧರ್ಮಗುರುಗಳಾದ ರೆ| ಫಾ| ಲಾರೆನ್ಸ್ ಮಸ್ಕರೇನಸ್ ಹೇಳಿದರು.
ಮಡಂತ್ಯಾರು- ಪುಂಜಾಲಕಟ್ಟೆ ಪರಿಸರದ ಉದ್ದಿಮೆದಾರರ ಶ್ರೇಯೋಭಿವೃದ್ಧಿಗಾಗಿ ರೂಪುಗೊಂಡ ವಾಣಿಜ್ಯ ಕೈಗಾರಿಕೆ ಮತ್ತು ಸೇವಾ ಉದ್ದಿಮೆದಾರರ ಸಂಘ ಮಡಂತ್ಯಾರು-ಪುಂಜಾಲಕಟ್ಟೆ ಇದರ ಉದ್ಘಾಟನಾ ಸಮಾರಂಭವು ಜು. 10ರಂದು ವಿಶ್ವಕರ್ಮ ಸಭಾಭವನ ಬಸವನಗುಡಿಯಲ್ಲಿ ನಡೆದ ಸಮಾರಂಭವನ್ನು ಉದ್ಘಾಟನೆಗೊಳಿಸಿ ಅಧ್ಯಕ್ಷತೆಯಿಂದ ಅವರು ಮಾತನಾಡಿದರು.
ಗ್ರಾಹಕರು ವರ್ತಕರ ಮೇಲೆ ಇಟ್ಟಿರುವ ವಿಶ್ವಾಸವನ್ನು ಸಾಕಾರಗೊಳಿಸಬೇಕು. ಗುಣಮಟ್ಟದ ಸೇವೆ ಮತ್ತು ನಗುಮೊಗದ ಸಂಬಂಧವಿಟ್ಟುಕೊಳ್ಳಬೇಕು. ಗ್ರಾಹಕರು ಮತ್ತು ವರ್ತಕರು ಜೊತೆ ಜೊತೆಯಾಗಿ ಹೋಗಬೇಕು. ಇಬ್ಬರೂ ಬೆಳೆದಾಗ ಸಮಾಜಕ್ಕೆ ಒಳಿತಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕೆನರಾ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ರಾಮಮೋಹನ್ ಪೈ ಸಂಘದ ಲಾಂಚನ ಬಿಡುಗಡೆಗೊಳಿಸಿ ಮಾತನಾಡಿ ಸಂಘಟನೆಗಾಗಿ ಎಲ್ಲಾ ವರ್ತಕರೂ ತಮ್ಮ ಇಗೋ ಬಿಟ್ಟು ಕೆಲಸ ಮಾಡಬೇಕು. ನಮ್ಮ ಸಂಘದಿಂದ ಪೂರ್ಣವಾದ ಸಹಕಾರವಿದೆ ಎಂದರು. ವಾಣಿಜ್ಯ ತೆರಿಗೆ ಅಧಿಕಾರಿ ಲೋಕೇಶಪ್ಪ ಹೆಚ್. ಆರ್. ಮಾತನಾಡಿ, ವ್ಯಾಪಾರಸ್ಥರ ಒಕ್ಕೂಟವಿರುವುದು ಶಕ್ತಿ ಪ್ರದರ್ಶನಕ್ಕಲ್ಲ. ಜ್ಞಾನ ಮತ್ತು ಪರಸ್ಪರ ತಿಳುವಳಿಕೆ ಹಂಚಿಕೊಳ್ಳುವ ಕೇಂದ್ರವಾಗಿ ಉಪಯೋಗಿಸಿಕೊಳ್ಳಬೇಕು ಎಂದರು. ಪುತ್ತೂರು ಛೇಂಬರ್ ಆಫ್ ಕಾಮರ್ಸ್ ಪೂರ್ವಾಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ, ಹೊಸ ಸಂಘವಾದರೂ ಇಲ್ಲಿನ ಸಂಘದಿಂದ ನಾವು ಕಲಿತುಕೊಂಡು ಹೋಗುವಂತ ರೀತಿಯಲ್ಲಿ ಕಾರ್ಯಕ್ರಮ ಮಾಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸರಕಾರಕ್ಕೆ ತೆರಿಗೆ ಮೂಲಕ ಸಂಪನ್ಮೂಲ ಕ್ರೂಢೀಕರಣ ಆಗುವುದು ವರ್ತಕರ ಮೂಲಕ. ಆದ್ದರಿಂದ ವರ್ತಕರಲ್ಲಿ ನಾವು ವ್ಯಾಪಾರಿಗಳು ಎಂಬ ಕೀಳರಿಮೆ ಇರಬಾರದು ಎಂದರು.
ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ ಮಾತನಾಡಿ, ವರ್ತಕರು ಅಭಿವೃದ್ಧಿಯ ಕೊಂಡಿಗಳು. ಹಬ್ಬ ಹರಿದಿನಗಳ ಸಂದರ್ಭ ಬಂದಾಗ ಡೊನೇಶನ್ ಹಾವಳಿಗೊಳಗಾಗುತ್ತಿರುವುದು ಸ್ವಚ್ಚಗ್ರಾಮ ಕಲ್ಪನೆಯ ಭಾಗವಾಗಿ ವರ್ತಕರ ಸಂಘ ಹಮ್ಮಿಕೊಂಡಿರುವ ಬಟ್ಟೆ ಚೀಲ ಯೋಜನೆ ದೇಶವ್ಯಾಪಿಯಾಗಲಿ ಎಂದು ಹರಸಿದರು. ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ ಕೆ. ಮಾತನಾಡಿ ಕಸದ ರಾಶಿ ಬಗ್ಗೆ ವರದಿಗಳನ್ನು ಪ್ರಕಟಿಸುವ ವೇಳೆ ಅದಕ್ಕೆ ಮೂಲವನ್ನೂ ಹುಡುಕುವ ಕೆಲಸ ಆಗಬೇಕಾಗಿದೆ. ಪಂಚಾಯತ್ ಪ್ರತಿ ವಾರ ಕಸವಿಲೇವಾರಿಗಾಗಿ 4 ಸಾವಿರ ರೂ ಖರ್ಚುಮಾಡಬೇಕಾಗಿ ಬರುತ್ತಿದ್ದು ಇದು ಅಬಿವೃದ್ದಿಗೆ ತೊಡಕಾಗುತ್ತಿದೆ ಎಂದರು. ಮಾಲಾಡಿ ಗ್ರಾ.ಪಂ. ಅಧ್ಯಕ್ಷ ಬೇಬಿ ಸುವರ್ಣ ಅವರೂ ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಉದ್ಯಮಿ ವಲೇರಿಯನ್ ಎಂ ರೋಡ್ರಿಗಸ್ ಪರವಾಗಿ ಪುತ್ರ ಪ್ರಕಾಶ್ ರೋಡ್ರಿಗಸ್ ಮತ್ತು ಬಿ. ಪುರುಷೋತ್ತಮ ಬಾಳಿಗಾ ಅವರ ಪರವಾಗಿ ಸಹೋದರ ರವೀಂದ್ರ ಬಾಳಿಗಾ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಘದ ಕಾನೂನು ಸಲಹೆಗಾರ ಬದರೀನಾಥ್ ಸಂಪಿಗೆತ್ತಾಯ, ಚಾರ್ಟಡ್ ಅಕೌಂಟೆಂಟ್ ಗಾಯತ್ರಿ ರಾವ್ ಉಪಸ್ಥಿತರಿದ್ದರು. ಕೆ ಧರಣೇಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು. ವರ್ತಕರ ಸಂಘದ ನೂತನ ಅಧ್ಯಕ್ಷ ಜಯಂತ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಎಂ. ಆರ್ ಸುಪಾರಿ ಹೈದರ್ ಬಿ ಧನ್ಯವಾದವಿತ್ತರು. ಪ್ಲಾಸ್ಟಿಕ್ ಚೀಲ ನಿಯಂತ್ರಣ ಬಗ್ಗೆ ಕಾರ್ಯದರ್ಶಿ ತುಳಸಿದಾಸ್ ಪೈ ವಿವರಣೆ ನೀಡಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಹಭೋಜನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.