ಬಳಂಜ : ಶ್ರೀ ಗುರು ತಂಡದಿಂದ ರಸ್ತೆ ದುರಸ್ಥಿ

balanja raste durasti copyಬಳಂಜ : ಇಲ್ಲಿನ ಗ್ರಾ.ಪಂ ವ್ಯಾಪ್ತಿಯ ಬೊಳ್ಳಾಜೆಯಿಂದ ಕೊಂಗುಲ ರಸ್ತೆಯು ತೀರಾ ಹದಗೆಟ್ಟಿತ್ತು ಹೊಂಡ-ಗುಂಡಿಗಳಿಂದ ತುಂಬಿ-ತುಳುಕುತ್ತಿದೆ. ಈ ರಸ್ತೆಯಲ್ಲಿ ಮಳೆಗಾಲದಲ್ಲಿ ಅಂತೂ ವಾಹನದಲ್ಲಿ ಸಂಚರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಾಲೂ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿದ್ದು, ಪೇಟೆಗೆ ಬರುವವರಿದ್ದು ಇದರಲ್ಲಿ ಸಂಚರಿಸಲು ಆಗದೇ ಬೇರೆ ದಾರಿಯು ಇಲ್ಲದೆ ಕಂಗೆಟ್ಟ ರೀತಿಯಲ್ಲಿ ರಸ್ತೆಯಿದೆ. ಇದನ್ನು ಶ್ರೀ ಗುರು ತಂಡ ಬಳಂಜ-ನಾಲ್ಕೂರಿನ ಯುವಕರು ಸೇರಿಕೊಂಡು ನದಿಯಿಂದ ಚೆರೆಲ್ ತಂದು ರಸ್ತೆ ರಿಪೇರಿ ಮಾಡಿದರು ಹಾಗೂ ಪೊದೆಗಳಲ್ಲಿರುವ ಗಿಡ-ಗಂಟಿಗಳನ್ನು ತೆಗೆದು ರಸ್ತೆ ದುರಸ್ಥಿಗೊಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ಹೆಚ್. ಧರ್ಣಪ್ಪ ಪೂಜಾರಿ ಹಾಗೂ ಬಳಂಜ ಗ್ರಾ.ಪಂ ಸದಸ್ಯ ಚಂದ್ರಶೇಖರ್ ಪಿ.ಕೆ ಬೇಟಿ ನೀಡಿದರು.
ಶ್ರಮದಾನ ಕಾರ್ಯದಲ್ಲಿ ದೇಜಪ್ಪ ಪೂಜಾರಿ ಸುಧಾಮ, ಕೇಶವ ಪೂಜಾರಿ ಮಜ್ಜೇನಿ, ಸಂಜೀವ ಪೂಜಾರಿ ಕಿನ್ನರದಡ್ಕ, ಧರ್ಣಪ್ಪ ಪೂಜಾರಿ ಕಡೆಂಗಾಲು, ವಸಂತ ಪೂಜಾರಿ ಪಾಡಿ, ರಾಧಾಕೃಷ್ಣ ಪಾಡಿ, ಕರಿಯ ಪೂಜಾರಿ, ಅಚ್ಚುತ್ತಾ ಪೂಜಾರಿ, ಬಾಬು, ಪ್ರವೀಣ್ ಕುಮಾರ್ ಹೆಚ್.ಎಸ್, ರಂಜಿತ್ ಹೆಚ್.ಡಿ, ಯೋಗೀಶ್ ಕೊಂಗುಲ, ಯತೀಶ್, ಹರೀಶ್ ಪೂಜಾರಿ, ಆಶ್ವಥ್, ದೀಪಕ್, ರತ್ನಾಕರ, ರಕ್ಷಿತ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.