ಸೇ.ಹಾ.ಪ.ಪೂ. ಕಾಲೇಜಿನ ನೂತನ ಪ್ರಾಂಶುಪಾಲರಾಗಿ ವಂ.ಸ್ವಾಮಿ ಜೆರೋಮ್ ಡಿ’ಸೋಜ

Advt_NewsUnder_1
Advt_NewsUnder_1

Jerom d'soza copy

ಮಡಂತ್ಯಾರು : ಇಲ್ಲಿನ ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಮಹಾವಿದ್ಯಾಲಯದ ನೂತನ ಪ್ರಾಂಶುಪಾಲರಾಗಿ ವಂ. ಸ್ವಾಮಿ ಜೆರೋಮ್ ಡಿ’ಸೋಜ ಅವರು ಜು.1ರಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಪೊಂಪೈ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 7 ವರ್ಷ ಉಪನ್ಯಾಸಕರಾಗಿ, 9 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಜೆರೋಮ್ ಡಿ’ಸೋಜ ಸವಣಾಲು ಗ್ರಾಮದ ಎಡ್ವರ್ಡ್ ಡಿ’ಸೋಜ ಮತ್ತು ಮಾರ್ಸೆಲಿನ್ ಡಿ’ಸೋಜ ದಂಪತಿಗಳ ಪುತ್ರರಾಗಿದ್ದು, ಮಡಂತ್ಯಾರು ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದಾರೆ. ಆಂಗ್ಲ ಭಾಷಾ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ವಿಶೇಷವಾಗಿ ಸಂಗೀತ, ಕ್ರೀಡೆಯಲ್ಲಿ ಪರಿಣತಿಯನ್ನು ಪಡೆದಿದ್ದಾರೆ. ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಬೀದರ್, ಬೆಂದೂರು, ಬೆಳ್ಮಣ್, ಕಿನ್ನಿಗೋಳಿ ಚರ್ಚ್‌ನಲ್ಲಿ ಸಹಾಯಕ ಧರ್ಮಗುರುಗಳಾಗಿ ಮುಂಡ್ಕೂರ್‌ನಲ್ಲಿ ಧರ್ಮಗುರುಗಳಾಗಿ ಸೇರಿದಂತೆ ಒಟ್ಟು23 ವರ್ಷಗಳಿಂದ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಡಂತ್ಯಾರಿಗೆ ವರ್ಗಾವಣೆಗೊಂಡ ಇವರನ್ನು ಸ್ವಾಗತಿಸುವ ಕಾರ್ಯಕ್ರಮ ಇಲ್ಲಿಯ ನೂತನ ಸಭಾ ಭವನದಲ್ಲಿ ನಡೆಯಿತು. ಸೇ.ಹಾ. ವಿದ್ಯಾಸಂಸ್ಥೆಗಳ ಸಂಚಾಲಕ ವಂ.ಸ್ವಾಮಿ ಲಾರೆನ್ಸ್ ಮಸ್ಕರೇನ್ಹಸ್ ನೂತನ ಪ್ರಾಂಶುಪಾಲರನ್ನು ಸಭೆಗೆ ಪರಿಚಯಿಸಿ, ಹಾರಾರ್ಪಣೆ ಮಾಡಿ ಆತ್ಮೀಯವಾಗಿ ಬರಮಾಡಿಕೊಂಡರು.
ನೂತನ ಪ್ರಾಂಶುಪಾಲ ಜೆರೋಮ್ ಡಿ’ಸೋಜ ಅವರು ಸರ್ವರ ಸಹಕಾರ ಕೋರಿದರು. ಆಡಳಿತ ಮಂಡಳಿ ಉಪಾಧ್ಯಕ್ಷ ಗ್ರೆಗರಿ ಸೇರಾ, ಮುಖ್ಯೋಪಾಧ್ಯಾಯ ಮೋಹನ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಕು| ಗ್ಲಾಡಿಸ್ ರೇಷ್ಮಾ ಕಾರ್ಯಕ್ರಮ ನಿರೂಪಿಸಿ, ಹಿರಿಯ ಉಪನ್ಯಾಸಕ ಭೋಗರಾಜ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.