HomePage_Banner_
HomePage_Banner_
HomePage_Banner_

ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ರೂ.35ಲಕ್ಷ ವೆಚ್ಚದ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಶಂಕು ಸ್ಥಾಪನೆ

Meenu marukatte sankusthapane copyಬೆಳ್ತಂಗಡಿ : ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಪಟ್ಟಣ ಪಂಚಾಯತು ಬೆಳ್ತಂಗಡಿ ಇವರ ಜಂಟಿ ಸಹಯೋಗದಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತು ವ್ಯಾಪ್ತಿಯ ಸಂತೆಕಟ್ಟೆಯಲ್ಲಿ ಕರಾವಳಿ ಪ್ರಾಧಿಕಾರದಿಂದ ಮಂಜೂರುಗೊಂಡ ರೂ. 35 ಲಕ್ಷ ವೆಚ್ಚದ ಸುಸಜ್ಚಿತ ಮೀನು ಮಾರುಕಟ್ಟೆ ಸಂಕೀರ್ಣಕ್ಕೆ ಜು.2ರಂದು ಶಾಸಕ ಕೆ.ವಸಂತ ಬಂಗೇರ ಶಂಕುಸ್ಥಾಪನೆ ನೆರವೇರಿಸಿದರು. ಕರಾವಳಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ, ಪಟ್ಟಣ ಪಂಚಾಯತು ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಉಪಾಧ್ಯಕ್ಷ ಡಿ. ಜಗದೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ವಾರ್ಡ್ ಸದಸ್ಯೆ ಮುಸ್ತರ್‌ಜಾನ್ ಮೆಹಬೂಬ್, ಸದಸ್ಯರಾದ ರಾಜೇಶ್, ನಳಿನಿ, ಜನಾರ್ದನ ಬಂಗೇರ, ರಮೇಶ್ ಪೂಜಾರಿ, ಲ್ಯಾನ್ಸಿ ಎ. ಪೀರೇರಾ, ಜೇಮ್ಸ್ ಡಿ’ ಸೋಜಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ಕುಮಾರ್, ಗ್ರಾಮೀಣ ಘಟಕದ ಅಧ್ಯಕ್ಷ ರಾಮಚಂದ್ರ ಗೌಡ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ಮುಖ್ಯಾಧಿಕಾರಿ ಜೆಸಿಂತಾ ಲೂಯಿಸ್, ಯೋಜನಾಧಿಕಾರಿ ವೆಂಕಟ್ರಮಣ ಶರ್ಮ, ಇಂಜಿನಿಯರ್ ಮಹಾವೀರ ಆರಿಗ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿ’ ಸೋಜಾ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.