ಉರುವಾಲು: ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ ಚಿನ್ನದ ಸರ, ಬೆಳ್ಳಿಯ ಪ್ರಭಾವಳಿ, ನಗದು ಸೇರಿದಂತೆ ೪.೫ ಲಕ್ಷದ ಸೊತ್ತು ಕಳವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Koronja 2 copy

uruvalu korinja temple copy

ಪ್ರಾರ್ಥನಾ ಮಂದಿರಗಳಿಗೆ
ಸಿಸಿ ಟಿವಿ ಕಡ್ಡಾಯ

ದೇವಾಲಯಗಳು , ವಿವಿಧ ಜಾತಿಧರ್ಮದ ಪ್ರಾರ್ಥನಾಲಯಗಳಿಗೆ ಸಿಸಿ ಟಿವಿ ಮತ್ತು ಅಗತ್ಯವಿರುವಲ್ಲಿ ಕಾವಲುಗಾರರನ್ನು ನೇಮಿಸುವುದು ಕಡ್ಡಾಯ ಎಂಬ ಆದೇಶವಿದ್ದರೂ ಇನ್ನೂ ಕೆಲವೆಡೆ ಅದು ಜಾರಿಯಾಗಿಲ್ಲ. ಆ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಎಸ್ಪಿ ಭೂಷಣ್ ಬೊರಸೆ ಮತ್ತೊಮ್ಮೆ ಸೂಚಿಸಿದ್ದಾರೆ. 

ಉರುವಾಲು :  ಇಲ್ಲಿಗೆ ಸಮೀಪದ  ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ದೇವಸ್ಥಾನದ ಕಾಣಿಕೆ ಡಬ್ಬಿ ಒಡೆದು ಅದರಲ್ಲಿದ್ದ ಚಿನ್ನದ ಸರ ಮತ್ತು ವಿವಿಧ ದೇವರ ಬೆಳ್ಳಿಯ ಮುಖವಾಡವನ್ನು ಕಳವು ಮಾಡಿರುವ ಘಟನೆ ನಡೆದಿದೆ.
ದೇವಸ್ಥಾನದ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಬಳಿಕ ವರಾಂಡದಲ್ಲಿದ್ದ ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ ಒಂದೂವರೆ ಪವನ್ ತೂಕದ ಚಿನ್ನದ ಸರ, ಸುಮಾರು ೬ ಕೆ.ಜಿ. ತೂಕದ, ದೇವರ 10 ಪ್ರಭಾವಳಿ ಮತ್ತು 3 ಸಾವಿರ ರೂಪಾಯಿ ನಗದು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ ಸುಮಾರು4.5ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ದೇವಳಕ್ಕೆ ಕಾಣಿಕೆ ಬಂದಂತಹ ಪ್ರಭಾವಳಿಗಳನ್ನು ದೇವಳದ ಆವರಣದಲ್ಲಿರುವ ಕಾಣಿಕೆ ಡಬ್ಬದಲ್ಲಿ ಹಾಕಿ ಇಡಲಾಗಿದ್ದು, ದೇವಳಕ್ಕೆ ನುಗ್ಗಿರುವ ಕಳ್ಳರು ನೇರವಾಗಿ ಕಾಣಿಕೆ ಡಬ್ಬಿ ಒಡೆದು ಲೂಟಿ ಮಾಡಿದ್ದಾರೆ.
೨ನೇ ಬಾರಿ ಕಳವು: ಇದೇ ದೇವಳಕ್ಕೆ ೨ ವರ್ಷದ ಹಿಂದೆ ಕಳ್ಳರು ನುಗ್ಗಿದ್ದು, ದೇವರ ಚಿನ್ನದ ಆಭರಣಗಳು ಕಳವು ಆಗಿದ್ದವು.
ಇದೀಗ 2ನೇ ಬಾರಿಗೆ ಕಳವು ಆಗಿದ್ದು, ದೇವಳದವರ ನಿರ್ಲಕ್ಷತನದಿಂದಲೇ ಈ ಕಳವು ಆಗಿರುವುದಾಗಿ ಹೇಳಲಾಗಿದೆ.
ಶ್ವಾನ, ಬೆರಳಚ್ಚು ತಜ್ಞರ ಆಗಮನ: ಘಟನಾ ಸ್ಥಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಲಾಗಿದೆ. ಪುತ್ತೂರು ಎಎಸ್‌ಪಿ. ರಿಷ್ವಂತ್, ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಕುಲಕರ್ಣಿ, ಎಸ್.ಐ. ತಿಮ್ಮಪ್ಪ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.