ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋ ಮಾ| ತೌಶೀರ್‌ಗೆ ಸುವರ್ಣ ಪರಿವಾರ ಅವಾರ್ಡ್

thoushir prasasti news copy

ಬೆಳ್ತಂಗಡಿ : ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಡ್ಯಾನ್ಸ್ ಕನ್ನಡದ ನಂಬರ್-1 ರಿಯಾಲಿಟಿ ಶೋದಲ್ಲಿ ಟಾಫ್-1 ಆಗಿ ಆಯ್ಕೆಯಾಗಿರುವ ತಾಲೂಕಿನ ಹೆಮ್ಮೆಯ ಬಾಲಪ್ರತಿಭೆ ಮಾ| ತೌಶೀರ್ 2016ನೇ ಸಾಲಿನ ಸುವರ್ಣ ವಾಹಿನಿಯ 4ನೇ ‘ಸುವರ್ಣ ಪರಿವಾರ ಅವಾರ್ಡ್’ ಗೌರವ ಪ್ರಶಸ್ತಿಯಿಂದ ಪುರಸ್ಕೃತಗೊಂಡಿದ್ದಾರೆ.
ಖ್ಯಾತ ಚಲನಚಿತ್ರ ಕಲಾವಿದ ನವರಸ ನಾಯಕ ಜಗ್ಗೇಶ್ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ನಿರೂಪಕ ಅಕುಲ್ ಬಾಲಜಿ ಉಪಸ್ಥಿತರಿದ್ದರು. ಮಾ| ತೌಶೀರ್ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಈಗಾಗಲೇ ಟಾಫ್-1 ಆಗಿ ಆಯ್ಕೆಯಾಗಿ ಈಗ ಬ್ಯಾಂಕಾಂಗ್‌ನಲ್ಲಿ ನಡೆಯುತ್ತಿರುವ ಶೋದ ಶೂಟಿಂಗ್‌ನಲ್ಲಿ ಭಾಗವಹಿಸಲು ತೆರಳಿದ್ದಾರೆ.
ಪುಟಾಣಿ ಪಂಟ್ರು ಸೀಸನ್-2ನಲ್ಲಿ ಫೈನಲಿಸ್ಟ್ ಆಗಿ ಮಿಂಚಿನ ಪ್ರದರ್ಶನ ನೀಡಿರುವ ತೌಶೀರ್ ತೀರ್ಪುಗಾರರ ವಿಶೇಷ ಪ್ರಶಂಸೆಗೆ ಪಾತ್ರರಾಗಿದ್ದರು. ಕನ್ನಡ ಚಿತ್ರ ರಂಗದ ಶ್ರೇಷ್ಠ ನಿರ್ದೇಶಕರಾದ ನಾಗಭರಣ ಅವರ ಅಲ್ಲಮ ಚಲನ ಚಿತ್ರದಲ್ಲಿ ಬಾಲ ಅಲ್ಲಮನಾಗಿ ತೌಶೀರ್ ಅತ್ಯಂತ ಮನೋಜ್ಞವಾಗಿ ನಟಿಸಿ ಮೊದಲ ಚಿತ್ರದಲ್ಲೇ ತನ್ನ ಪ್ರತಿಭೆಯನ್ನು ಮೆರೆದು ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದು, ಈ ಚಲನ ಚಿತ್ರ ಶೀಘ್ರವಾಗಿ ಬಿಡುಗಡೆಯಾಗಲಿದೆ.
ಸುವರ್ಣ ವಾಹಿನಿಯ ಡ್ಯಾನ್ಸ್ ಡ್ಯಾನ್ಸ್ ನಂಬರ್-1 ರಿಯಾಲಿಟಿ ಶೋದಲ್ಲಿ ಮಿಂಚುತ್ತಿರುವ ತೌಶೀರ್ ರಾಜ್ಯದಾದ್ಯಂತ ಎಲ್ಲರ ಪ್ರೀತಿ-ವಿಶ್ವಾಸವನ್ನು ಗಳಿಸಿದ್ದು, ಕರ್ನಾಟಕ ರಾಜ್ಯದಾದ್ಯಂತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಓಟು ಹಾಕಿದ್ದರಿಂದ ತೌಶೀರ್‌ಗೆ ಸುವರ್ಣ ಪರಿವಾರ ಅವಾರ್ಡ್ ಬರಲು ಕಾರಣವಾಯಿತು.
ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯಲ್ಲಿ ಕಲಿಯುತ್ತಿರುವ ತೌಶೀರ್ ಉಜಿರೆ ಕಾಶಿಬೆಟ್ಟು ಯು.ಕೆ. ಮಹಮ್ಮದ್ ಹನೀಫ್ ಮತ್ತು ತಾಹೀರಾ ದಂಪತಿಯ ಪುತ್ರ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.