HomePage_Banner_
HomePage_Banner_

ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ-ಸಿಬ್ಬಂದಿಗಳ ಕೊರತೆ

belthangady govt hospital 4 copy

belthangady hospital copy

 

95 ಮಂಜೂರಾದ ಹುದ್ದೆ
34  ಕರ್ತವ್ಯದಲ್ಲಿರುವವರು
61 ಖಾಲಿ ಹುದ್ದೆ
ಆಸ್ಪತ್ರೆಯಲ್ಲಿರುವುದು 50  ಹಾಸಿಗೆ ಮಾತ್ರ

ಪ್ರತಿ ದಿನ ಈಗ ೫೦೦ಕ್ಕೂ ಹೆಚ್ಚು ಮಂದಿ ರೋಗಿಗಳು ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಿದ್ದಾರೆ. ಇದರಲ್ಲಿ 150 ಕ್ಕೂ ಹೆಚ್ಚು ಜ್ವರ ಪ್ರಕರಣಗಳಾಗಿದೆ. 42 ಮಂದಿಯನ್ನು ದಾಖಲು ಮಾಡಿಕೊಳ್ಳಲಾಗಿದೆ. ಈಗಾಗಲೇ 22 ಮಂದಿಯಲ್ಲಿ ಶಂಕಿತ ಡೆಂಗ್ಯೂ ಪ್ರಕರಣ ಪತ್ತೆಯಾಗಿದೆ. ಆಸ್ಪತ್ರೆಯಲ್ಲಿ ಕಾಟ್ ಮತ್ತು ಬೆಡ್‌ನ ಕೊರತೆಯಿರುವುದರಿಂದ ಹೆಚ್ಚು ಮಂದಿಯನ್ನು ಚಿಕಿತ್ಸೆಗೆ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಗೆ ಮಕ್ಕಳ ತಜ್ಞರು ಮತ್ತು ಅರಿವಳಿಕೆ ತಜ್ಞರ ಅಗತ್ಯತೆ ಹೆಚ್ಚಿದೆ
– ಡಾ| ಆದಂ ಆಡಳಿತಾಧಿಕಾರಿ.

ಬೆಳ್ತಂಗಡಿ : ಮೂವತ್ತು ಹಾಸಿಗೆಗಳಿಂದ ನೂರು ಹಾಸಿಗೆಗಳಿಗೆ ಮೇಲ್ದರ್ಜೆಗೇರಿರುವ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊಸ ಆಸ್ಪತ್ರೆ ಕಟ್ಟಡ ಸೇರಿದಂತೆ ಎಲ್ಲಾ ಸೌಲಭ್ಯಗಳಿದ್ದರೂ, ವೈದ್ಯರು ಸೇರಿಂತೆ ಸಿಬ್ಬಂದಿಗಳ ತೀವ್ರ ಕೊರತೆ ಕಾಡುತ್ತಿದೆ.
ಬೆಳ್ತಂಗಡಿ ತಾಲೂಕಿನ ಕೇಂದ್ರದಲ್ಲಿ ಸಾರ್ವಜನಿಕ ಆಸ್ಪತ್ರೆ ಇದ್ದು, ತಾಲೂಕಿನಾದ್ಯಂತದಿಂದ ರೋಗಿಗಳು ಇಲ್ಲಿಗೆ ಔಷಧಕ್ಕೆ ಬರುತ್ತಿದ್ದಾರೆ. ಪ್ರಾರಂಭದಲ್ಲಿ 30 ಹಾಸಿಗೆಗಳುಳ್ಳ ಈ ಆಸ್ಪತ್ರೆಯನ್ನು ನೂರು ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಯಿತು. ಬಳಿಕ ಆಸ್ಪತ್ರೆಗೆ ನೂತನ ಕಟ್ಟಡ ಮಂಜೂರಾಗಿ ಇದರ ಕಾಮಗಾರಿ ನಡೆದು ಕಳೆದ ವರ್ಷ ಇದರ ಉದ್ಘಾಟನೆಯನ್ನು ಆಗಿನ ರಾಜ್ಯ ಸರಕಾರದ ಆರೋಗ್ಯ ಸಚಿವ ಖಾದರ್ ಅವರು ನೆರವೇರಿಸಿದ್ದರು. ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸರಕಾರ ವೈದ್ಯಾಧಿಕಾರಿ ಸೇರಿದಂತೆ ಒಟ್ಟು 95 ಹುದ್ದೆಗಳನ್ನು ಮಂಜೂರುಗೊಳಿಸಿದೆ. ಇದರಲ್ಲಿ ಪ್ರಸ್ತುತ 11 ವೈದ್ಯಾಧಿಕಾರಿಗಳು ಸೇರಿದಂತೆ ೩೪ ಹುದ್ದೆಗಳು ಭರ್ತಿಯಾಗಿದ್ದು, 61 ಹುದ್ದೆಗಳು ಖಾಲಿಯಾಗಿದೆ.
ಮಂಜೂರಾದ ಮತ್ತು ಖಾಲಿ ಇರುವ ಹುದ್ದೆಗಳು : ಮುಖ್ಯ ವೈದ್ಯಾಧಿಕಾರಿ-1 (ಖಾಲಿ), ಫಿಜಿಶಿಯನ್-1, ಜನರಲ್ ಸರ್ಜರಿ-1 (ಖಾಲಿ), ಪ್ರಸೂತಿ ಮತ್ತು ಸ್ತ್ರಿರೋಗ ತಜ್ಞರು-1, ಅರಿವಳಿಕೆ ತಜ್ಞರು-1 (ಖಾಲಿ), ಮಕ್ಕಳ ತಜ್ಞರು-1 (ಖಾಲಿ), ನೇತ್ರ ತಜ್ಞರು-1, ಕೀಲು ಮೂಳೆ ತಜ್ಞರು-1, ಕಿವಿ, ಮೂಗು, ಗಂಟಲು ತಜ್ಞರು-1, ಚರ್ಮರೋಗ ತಜ್ಞರು-1 (ಖಾಲಿ), ಹಿರಿಯ ವೈದ್ಯಾಧಿಕಾರಿಗಳು-1 (ಖಾಲಿ), ಸಹಾಯಕ ಶಸ್ತ್ರಚಿಕಿತ್ಸಕರು ಹಾಗೂ ಆರೋಗ್ಯಾಧಿಕಾರಿ-1 (ಖಾಲಿ), ದಂತ ವೈದ್ಯರು-1, ಸಹಾಯಕ ಆಡಳಿತಾಧಿಕಾರಿ-1, ಶುಶ್ರೂಷಕ ಅಧೀಕ್ಷಕರು (ದರ್ಜೆ 2)-1 (ಖಾಲಿ), ಶುಶ್ರೂಷಕರು-20 (2ಖಾಲಿ), ಹಿರಿಯ ಪ್ರ.ಶಾ. ತಂತ್ರಜ್ಞರು-1 (ಖಾಲಿ), ಕಿ.ಪ್ರ.ಶಾ. ತಂತ್ರಜ್ಞರು-1, ಕ್ಷ-ಕಿರಣ ತಂತ್ರಜ್ಞರು-2, ಹಿರಿಯ ಫಾರ್ಮಾಸಿಸ್ಟ್-1 (ಖಾಲಿ), ಕಿರಿಯ ಫಾರ್ಮಾಸಿಸ್ಟ್-2 (1ಖಾಲಿ), ನೇತ್ರ ಅಧಿಕಾರಿ-2 (ಖಾಲಿ), ಕಚೇರಿ ಅಧೀಕ್ಷಕರು-೧ (ಖಾಲಿ), ಪ್ರ.ದ. ಸಹಾಯಕರು-೨ (ಖಾಲಿ), ದ್ವಿ.ದ. ಸಹಾಯಕರು-2 (ಖಾಲಿ), ಕ್ಲರ್ಕ್ ಕಂ ಟೈಪಿಸ್ಟ್-1, ವಾಹನ ಚಾಲಕರು-2 (ಖಾಲಿ), ಅಡುಗೆಯವರು-1, ಗ್ರೂಪ್ ಡಿ (ಕ್ಷ-ಕಿ.ಪ್ರ.ಶಾ. ಹಾಗೂ ಅಡಿಗೆಯವರ ಹುದ್ದೆಗಳು ಸೇರಿದಂತೆ)-32 (30ಖಾಲಿ), ಹಿ.ಆ. ಸಹಾಯಕಿ (ಮ)1, ಹಿ.ಆ. ಸಹಾಯಕ (ಪು)-1 (ಖಾಲಿ), ಕ್ಷೇತ್ರ ಆರೋಗ್ಯ ಶಿಕ್ಷಕ-1 (ಖಾಲಿ), ಕಿ.ಆ. ಸಹಾಯಕಿ (ಮ)-4 (1ಖಾಲಿ), ಕಿ.ಆ. ಸಹಾಯಕ(ಪು)-3 (2ಖಾಲಿ) ಒಟ್ಟು 95 ಹುದ್ದೆಗಳು ಇದರಲ್ಲಿ 61 ಹುದ್ದೆ ಖಾಲಿ.
ಆಸ್ಪತ್ರೆಯಲ್ಲಿರುವ ವೈದರುಗಳು ಮತ್ತು ಸಿಬ್ಬಂದಿಗಳು: ತಾಲೂಕು ಆರೋಗ್ಯಾಧಿಕಾರಿಯಾಗಿ ಡಾ| ಕಲಾಮಧು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಆಸ್ಪತ್ರೆಯಲ್ಲಿ ಆಡಳಿತಾಧಿಕಾರಿಯಾಗಿ ಡಾ| ಆದಂ, ಪಿಜಿಶಿಯನ್ ಡಾ| ಚಂದ್ರಕಾಂತ್, ದಂತ ವೈದ್ಯರು ಡಾ| ಸುಧಾಕರ ಆಳ್ವ, ಎಲುಬು, ಕೀಳು ಮತ್ತು ಮೂಳೆ ತಜ್ಞರು ಡಾ| ಶಶಿಕಾಂತ್, ನೇತ್ರ ತಜ್ಞರು ಡಾ| ವಿದ್ಯಾವತಿ, ಇಎನ್‌ಟಿ ಡಾ| ಗೌತಮ್ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟು ಇರಬೇಕಾದ ವೈದ್ಯರು 11 ಈಗ ಇರುವ ವೈದ್ಯರು ಕೇವಲ 6 ಮಾತ್ರ ಇದ್ದಾರೆ.
100 ಹಾಸಿಗೆಯ ಆಸ್ಪತ್ರೆಯಲ್ಲಿರುವುದು 50 ಹಾಸಿಗೆ: ಬೆಳ್ತಂಗಡಿ 30 ಹಾಸಿಗೆಯುಳ್ಳ ಆಸ್ಪತ್ರೆ 100 ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿ ವರ್ಷಗಳೇ ಕಳೆದಿದೆ. ಆದರೆ ಈಗ ಆಸ್ಪತ್ರೆಯಲ್ಲಿರುವುದು ಕೇವಲ 50 ಹಾಸಿಗೆ ಮಾತ್ರ. ಸರಕಾರ 100 ಹಾಸಿಗೆಗಳ ಆಸ್ಪತ್ರೆ ಎಂದು ಮೇಲ್ದರ್ಜೆಗೇರಿಸಿ, ಹೊಸ ಆಸ್ಪತ್ರೆ ಕಟ್ಟಡವನ್ನು ಕೊಟ್ಟಿದೆ. ಆದರೆ ಇನ್ನೂ ಕಾಟ್ ಮತ್ತು ಬೆಡ್‌ನ್ನು ಪೂರೈಕೆ ಮಾಡಿಲ್ಲ. ಆಸ್ಪತ್ರೆಯಲ್ಲಿ ಹಾಸಿಗೆಯ ಕೊರತೆ ಇರುವುದರಿಂದ ಕೆಲವು ವಿಭಾಗಗಳಲ್ಲಿ ರೂಮ್‌ಗಳು ಖಾಲಿಯಾಗಿಯೇ ಉಳಿದಿದೆ. ಆಸ್ಪತ್ರೆಯ ಆಡಳಿತಾಧಿಕಾರಿಯವರು ಹಾಸಿಗೆ ಮತ್ತು ಕಾಟ್‌ನ್ನು ಪೂರೈಕೆ ಮಾಡುವಂತೆ ಬೇಡಿಕೆ ಸಲ್ಲಿಸಿದ್ದಾರೆ. ಆದರೆ ಇಲಾಖೆಯಿಂದ ಇದುವರೆಗೂ ಇದು ಪೂರೈಕೆಯಾಗಿಲ್ಲ. ಹೆಸರಿಗೆ ೧೦೦ ಹಾಸಿಗೆಗಳ ಆಸ್ಪತ್ರೆ ಆದರೆ ಇಲ್ಲಿರುವುದು ಹಳೆಯ 50 ಬೆಡ್ ಮಾತ್ರ ಇದರಿಂದಾಗಿ ಇದೀಗ ಜ್ವರ ಪೀಡಿತ ಹಲವು ಮಂದಿ ಬಂದರೂ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲು ಹಾಸಿಗೆಯ ಕೊರತೆ ಇದೆ. 50  ಮಂದಿಯನ್ನು ಮಾತ್ರ ದಾಖಲು ಮಾಡಿಕೊಳ್ಳಲಾಗಿದೆ.
500ಕ್ಕೂ ಹೆಚ್ಚು ರೋಗಿಗಳ ತಪಾಸಣೆ: ಮಳೆಗಾಲದ ಈ ಅವಧಿಯಲ್ಲಿ ತಾಲೂಕಿನಾದ್ಯಂತ ಜ್ವರ ಸೇರಿದಂತೆ ಇನ್ನಿತರ ರೋಗಗಳು ಕಂಡು ಬಂದಿದ್ದು, ಪ್ರತಿ ದಿನ ಸುಮಾರು 500ಕ್ಕೂ ಮಿಕ್ಕಿ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ. ಇದರಲ್ಲಿ ಸುಮಾರು 150 ರಿಂದ 200 ಮಂದಿ ಜ್ವರ ಪೀಡಿತ ಪ್ರಕರಣಗಳಾಗಿದೆ. ಈಗಾಗಲೇ ಆಸ್ಪತ್ರೆಯಲ್ಲಿ 42 ಮಂದಿಯನ್ನು ದಾಖಲು ಮಾಡಿಕೊಳ್ಳಲಾಗಿದೆ. ಆಸ್ಪತ್ರೆಯಲ್ಲಿ 50 ಹಾಸಿಗೆಗಳು ಮಾತ್ರ ಇದೆ. ದಾಖಲಾದವರಲ್ಲಿ 22 ಮಂದಿಯಲ್ಲಿ ಶಂಕಿತ ಡೆಂಗ್ಯೂ ಪ್ರಕರಣ ಕಂಡು ಬಂದಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ| ಆದಂ ತಿಳಿಸಿದ್ದಾರೆ.
ವೈದ್ಯರು ಸಿಬ್ಬಂದಿಗಳ ನೇಮಕಕ್ಕೆ ಒತ್ತಾಯ: ಬೆಳ್ತಂಗಡಿ ತಾಲೂಕು ಕೇಂದ್ರದ ಈ ಆಸ್ಪತ್ರೆಯಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳಿಂದ ಜನರು ಔಷಧಿಗಾಗಿ ಬರುತ್ತಿರುವುದರಿಂದ ಮತ್ತು ಈ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳಿರುವುದರಿಂದ ಇಲ್ಲಿಗೆ ಮಂಜೂರಾದ ವೈದ್ಯಾಧಿಕಾರಿ ಹುದ್ದೆ ಹಾಗೂ ಸಿಬ್ಬಂದಿಗಳ ಹುದ್ದೆಯನ್ನು ನೇಮಕ ಮಾಡುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.