ಕೃಷಿಕರ ಕಾರ್ಯಕ್ರಮದಲ್ಲಿ ಕೃಷಿಕರನ್ನು ಕಡೆಗಣಿಸದಿರಿ

  ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ಕೃಷಿಯ ಬಗ್ಗೆ ಹಲವಾರು ಕಾರ್ಯಕ್ರಮಗಳು ನಡೆದ ಬಗ್ಗೆ ಪ್ರಸಾರವಾಗಿರುತ್ತದೆ. ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಎಂಬ ಕಾರ್ಯಕ್ರಮ ಬೆಳ್ತಂಗಡಿಯಲ್ಲಿಯೂ ಬ್ಯಾಂಡ್ ವಾದ್ಯ ಹಾಗೂ ಯಂತ್ರೋಪಕರಣಗಳನ್ನು ಕೆಲವೇ ಜನರು (ಅದರಲ್ಲಿ ರೈತರೆಷ್ಟಿದ್ದರೋ ಗೊತ್ತಿಲ್ಲ) ಪಾಲ್ಗೊಂಡಿದ್ದರು. ಇಲ್ಲಿ ಬೆಳ್ತಂಗಡಿ ತಾಲೂಕಿನ 81 ಗ್ರಾಮಗಳ ನಮಗ್ಯಾರಿಗೂ ತಿಳಿದಿರುವುದಿಲ್ಲ. ಈ ಬಗ್ಗೆ ಅಂಬೇಡ್ಕರ್ ಭವನದಲ್ಲಿ ಮಾನ್ಯ ಶಾಸಕರು ಹೇಳಿದ ಹಾಗೆ, ಕೃಷಿಕರನ್ನು ಕಡೆಗಣಿಸಬಾರದು ಎಂಬ ಮಾತು. ಮಾನ್ಯ ಶಾಸಕರಿಗೆ ರೈತರ ಕಷ್ಟಗಳು ಗೊತ್ತಿದೆ. ಅದರಿಂದ ಕೃಷಿಕರ ಕಾರ್ಯಕ್ರಮದಲ್ಲಿ ರೈತರನ್ನು ಕಡೆಗಣಿಸಬಾರದಾಗಿ ನನ್ನದೂ ಒಂದು ವಿನಂತಿ. ಇದನ್ನು ಪೇಡೆಯಲ್ಲಿ ಡಂಗುರ ಸಾರುವ ಬದಲು ಕಾರ್ಯಕ್ರಮದ ಆಶಯದಂತೆ ರೈತರ ಮನೆ ಬಾಗಿಲಿಗೆ ಹೋಗಿ ಮಾಡಿದ್ದರೆ ಒಳ್ಳೆದಿತ್ತು. ಈ ಬಗ್ಗೆ ಸಂಬಂಧಪಟ್ಟವರು ಅಧಿಕಾರಿಗಳು ಉತ್ತರಿಸಬೇಕು. ಹಾಗೇನೇ ಮೊನ್ನೆ ನಡೆದ ಕಾರ್ಯಕ್ರಮ ಡಂಗುರ ಸಾರಿದ ಬಗ್ಗೆ ಎಷ್ಟು ಹಣ ಖರ್ಚಾಗಿದೆ. ಹಾಜರಿದ್ದ ರೈತರು ಎಷ್ಟು ಎಂದು ಸಂಖ್ಯೆ ತಿಳಿಸಬಹುದೇ??

ಐ. ಎಲ್ ಪಿಂಟೋ. ಕೃಷಿಕರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.