ಮಲ್‌ಜಅ ಪ್ರಾರ್ಥನಾ ಸಮ್ಮೇಳನದ ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ

44ಉಜಿರೆ: ಕಾಶಿಬೆಟ್ಟು ಮಲ್‌ಜಅ ಪ್ರಾರ್ಥನಾ ಸಮ್ಮೇಳನಕ್ಕಾಗಿ ಮಲ್‌ಜಅ ಕ್ಯಾಂಪಸ್‌ನಲ್ಲಿ ಬೈಹತ್ತಾದ ಚಪ್ಪರ ನಿಮಾಣ ಕಾಮಗಾರಿ ನಡೆಯುತ್ತಿದ್ದು ಇತರ ಎಲ್ಲಾ ಸೌಕರ್ಯಗಳನ್ನು ಏರ್ಪಡಿಸಲು ಚಾಲನೆ ನೀಡಲಾಗಿದೆ. ಸಂಸ್ಥೆಯಲ್ಲ ನಿರಂತರವಾಗಿ ಚಟುವಟಿಕೆಗಳು ನಡೆಯುತ್ತಿದ್ದು ಪ್ರಾರ್ಥನಾ ಸಮ್ಮೇಳನ ಯಶಸ್ವಿಗಾಗಿ ಕ್ರಿಯಾಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.
ಅದಕ್ಕಾಗಿ ಈಗಾಗಲೇ 313 ಮಂದಿಯನ್ನೊಳಗೊಂಡ ಬೃಹತ್ ಸ್ವಾಗತ ಸಮಿತಿ ರಚಿಸಲಾಗಿದ್ದು ಅದರ ಅಧಿಕೃತ ಕಚೇರಿಯನ್ನು ಜು. ೨೪ ರಂದು ಸಂಸ್ಥೆಯ ಚೇರ್‌ಮೆನ್ ಹಾಗೂ ಸ್ವಾಗತ ಸಮಿತಿ ಚೇರ್‌ಮೆನ್ ಸಯ್ಯಿದ್ ಉಜಿರೆ ತಂಙಳ್ ಉದ್ಘಾಟಿಸಿದರು.
ಸ್ವಾಗತ ಸಮಿತಿ ವರ್ಕಿಂಗ್ ಚೇರ್‌ಮೆನ್ ಎಂ. ಕೆ ಬದ್ರುದ್ದೀನ್ ಪರಪ್ಪು, ಜನರಲ್ ಕನ್ವೀನರ್ ಅಶ್ರಫ್ ಆಲಿಕುಂಞಿ, ಕೋಶಾಧಿಕಾರಿ ಅಬ್ಬೋನು ಬದ್ಯಾರ್, ಸಹ ಕೋಶಾಧಿಕಾರಿ ಶರೀಫ್ ಬೆರ್ಕಳ, ಪ್ರಚಾರ ಸಮಿತಿ ಮುಖ್ಯಸ್ಥ ಹಕೀಮ್ ಸರಳಿಕಟ್ಟೆ, ಹಸೈನಾರ್ ಶಾಫಿ ಮತ್ತು ಉಸ್ಮಾನ್ ಶಾಫಿ ಗುರುವಾಯನಕೆರೆ, ಅಬ್ಬೋನು ಮದ್ದಡ್ಕ, ಇಕ್ಬಾಲ್ ಮಾಚಾರು, ಹಮೀದ್ ಬಿ. ಎನ್ ಮತ್ತು ಹನೀಫ್ ಮದನಿ ನಿಡಿಗಲ್, ಅಬ್ಬೋನು ಪಲ್ಲಾದೆ, ಸುಲೈಮಾನ್ ಕುಂಟಿನಿ, ಮುಸ್ತಫ ಮತ್ತು ರಝಾಕ್ ಮಲ್‌ಜಅ ಅಟೋ, ಸಂಶುದ್ದೀನ್ ಜಾರಿಗೆಬೈಲು, ಜಮಾಲುದ್ದೀನ್ ಲೆತೀಫಿ, ಇಕ್ಬಾಲ್ ಮಾಚಾರ್, ಲೆತೀಫ್ ಹಾಜಿ ಎಸ್‌ಎಂಎಸ್ ಶಾಮಿಯಾನ, ಯೂಸುಫ್ ಅತ್ತಾಜೆ, ಹಮೀದ್ ಮುಸ್ಲಿಯಾರ್, ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.